Ads By Google

Bank Locker: SBI ಮತ್ತು ಬರೋಡ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ನಿಯಮ, ಜಾರಿಗೆ ಬಂತು ಹೊಸ ಲಾಕರ್ ನಿಯಮ.

New Rule For SBI And BOB Bank Customers

Image Credit: Original Source

Ads By Google

New Rule For SBI And BOB Bank Customers: ಬ್ಯಾಂಕುಗಳು ಗ್ರಾಹಕರ ಭದ್ರತೆಗಾಗಿ ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಇತ್ತೀಚೆಗಂತೂ ದೇಶದಲ್ಲಿವಂಚನೆಯ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿದೆ. ಈ ಕಾರಣದಿಂದ ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಯಾವುದೇ ನಷ್ಟ ಸಂಭವಿಸಬಾರದು ಎನ್ನುವ ಕಾರಣಕ್ಕೆ ಬ್ಯಾಂಕುಗಳು ವಿಭಿನ್ನ ನಿಯಮ ಪರಿಚಯಿಸುತ್ತಿದೆ.

ಇದೀಗ SBI ಹಾಗೂ BOB ತನ್ನ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಬ್ಯಾಂಕ್ ಲಾಕರ್ ಒಪ್ಪಂದವನ್ನು ಹೊರಡಿಸಿದೆ. ನೀವು ಈ ಎರಡು ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

Image Credit: Businessleague

September 30 ರೊಳಗೆ ಈ ಕೆಲಸ ಮಾಡದಿದ್ದರೆ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ
State Bank Of India ಹಾಗು Bank Of Baroda ಇದೀಗ ತನ್ನ ಲಾಕರ್ ನಿಯಮವನ್ನು ಬದಲಾಯಿಸಲು ನಿರ್ಧರಿಸಿದೆ. SBI ಹಾಗೂ BOB ಗ್ರಾಹಕರು Septembar 30 ರೊಳಗೆ ಬ್ಯಾಂಕ್ ಲಾಕರ್ ಒಪ್ಪಂದಕೆ ಸಹಿ ಮಾಡಬೇಕಿದೆ. ನೀವು ನಿಗದಿತ ಸಮಯದೊಳಗೆ ಈ ಕೆಲಸ ಮಾಡದಿದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಬ್ಯಾಂಕ್‌ಗಳು ಗ್ರಾಹಕರಿಗೆ SMS ಮತ್ತು Email ಮೂಲಕ ಮಾಹಿತಿ ನೀಡಿದೆ. ಸಹಿ ಮಾಡಲು ಗ್ರಾಹಕನು ತನ್ನ ಲಾಕರ್ ಇರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗುತ್ತದೆ.

ಡಿಸೆಂಬರ್ 31 ರೊಳಗೆ ಕೆಲಸ ಪೂರ್ಣಗೊಳ್ಳಬೇಕು
ಡಿಸೆಂಬರ್ 31ರೊಳಗೆ ಕೆಲಸ ಪೂರ್ತಿಯಾಗಬೇಕು ಎಂದು ಎಲ್ಲಾ ಬ್ಯಾಂಕ್‌ಗಳಿಗೆ ಆದೇಶ ಹೊರಡಿಸಲಾಗಿದೆ. RBI ಮಾರ್ಗಸೂಚಿ ಪ್ರಕಾರ ಜೂನ್ 30 ರೊಳಗೆ ಬ್ಯಾಂಕ್ ಲಾಕರ್ ಒಪ್ಪಂದದಲ್ಲಿ ಶೇಕಡಾ 50 ರಷ್ಟು, ಸೆಪ್ಟೆಂಬರ್ 30 ರೊಳಗೆ ಶೇಕಡಾ 75 ರಷ್ಟು ಮತ್ತು ಡಿಸೆಂಬರ್ 31 ರೊಳಗೆ ಶೇಕಡಾ 100 ರಷ್ಟು ಜನರ ಸಹಿಗಳನ್ನು ಪಡೆಯಬೇಕು.

Image Credit: Businesstoday

ಹೊಸ ಲಾಕರ ಒಪ್ಪಂದ
ಹೊಸ ಲಾಕರ್ ಒಪ್ಪಂದದ ಪ್ರಕಾರ, Bank Locker ನಲ್ಲಿ ಇರಿಸಲಾದ ಸರಕುಗಳಿಗೆ ಜವಾಬ್ದಾರಿಯನ್ನು ಹೊಂದಿರುತ್ತಾನೆ ಹಾಗೆ ಕಳ್ಳತನ, ವಂಚನೆ, ಬೆಂಕಿ ಅಥವಾ ಕಟ್ಟಡ ಕುಸಿತದ ಸಂದರ್ಭದಲ್ಲಿ ಲಾಕರ್‌ಗೆ ಹಾನಿಯ ಸಂದರ್ಭದಲ್ಲಿ ಅವನು ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುವಂತಿಲ್ಲ. ಇದಲ್ಲದೇ ಬ್ಯಾಂಕ್ ಲಾಕರ್ ಭದ್ರತೆಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬ್ಯಾಂಕ್ ಗಳ ಶುಲ್ಕ ಹೆಚ್ಚಳ
ಬ್ಯಾಂಕ್‌ಗಳು ಲಾಕರ್ ಶುಲ್ಕವನ್ನು ಹೆಚ್ಚಿಸಿವೆ. SBI ವಿವಿಧ ಶಾಖೆಗಳಲ್ಲಿ 1,500 ರಿಂದ 12,000 ರೂಪಾಯಿ ಠೇವಣಿಗಳಿಂದ GST ಸಂಗ್ರಹಿಸುತ್ತಿದೆ. HDFC ಬ್ಯಾಂಕ್ ಸ್ಥಳ ಮತ್ತು ಪ್ರಕಾರವನ್ನು ಅವಲಂಬಿಸಿ ಲಾಕರ್‌ಗೆ ವಾರ್ಷಿಕವಾಗಿ ರೂ 1,350 ರಿಂದ ರೂ 20,000 ವರೆಗೆ ವಿಧಿಸುತ್ತಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.