Education Rule: ಇಂದಿನಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಈ ನಿಯಮ ಕಡ್ಡಾಯ, ರಾಜ್ಯ ಸರ್ಕಾರದ ಬಹುದೊಡ್ಡ ಹೆಜ್ಜೆ.
ರಾಜ್ಯ ಸರ್ಕಾರದ ಈ ಹೊಸ ನಿಯಮವನ್ನು ಎಲ್ಲ ಶಾಲಾ ಕಾಲೇಜುಗಳು ತಪ್ಪದೆ ಪಾಲಿಸಬೇಕಿದೆ.
New Rule For School And College: ರಾಜ್ಯದಲ್ಲಿ Congress ಸರ್ಕಾರ ಅಧಿಕಾರ ಪಡೆದುಕೊಂಡಾಗಿನಿಂದ ಅನೇಕ ನಿಯಮಗಳು ಬದಲಾಗುತ್ತಿದೆ. ಈ ಹಿಂದೆ BJP ಸರ್ಕಾರ ಜಾರಿಗೊಳಿಸಿದ್ದ ಅನೇಕ ನಿಯಮಗಲ್ಲಿ ಕಾಂಗ್ರೆಸ್ ಸರ್ಕಾರ ಬದಲಾವಣೆ ತಂದಿದೆ. ಅದರಲ್ಲೂ ಹೆಚ್ಚಾಗಿ ರಾಜ್ಯ ಸರ್ಕಾರ ಶಾಲಾ ಶೈಕ್ಷಣಿಕ ನಿಯಮದಲ್ಲಿ ಬಾರಿ ಬದಲಾವಣೆಯನ್ನು ತಂದಿದೆ.
ಇತ್ತೀಚೆಗಂತೂ ರಾಜ್ಯ ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಹೊಸ ಹೊಸಾ ನಿಯಮವನ್ನು ಜಾರಿಗೊಳಿಸುವುದರ ಜೊತೆಗೆ ಅನೇಕ ಸೌಲಭ್ಯವನ್ನು ನೀಡುತ್ತಿದೆ. ಶಾಲಾ ಮಕ್ಕಳು ಶಾಲೇಗಳಲ್ಲಿ ಶಿಸ್ತಿನ ಪಾಠವನ್ನು ಕಲಿಯಲು ಈಗಾಗಲೇ ವಿವಿಧ ನಿಯಮವನ್ನು ಜಾರಿಯಾಗಿವೆ.
ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರದ ಮಹತ್ವದ ಮಾಹಿತಿ
ಇನ್ನು 2023 -24 ಶೈಕ್ಷಣಿಕ ವರ್ಷ ಆರಂಭದಲ್ಲಿಯೇ ರಾಜ್ಯವೂ ಸರ್ಕಾರ ಮಕ್ಕಳ ಶಿಕ್ಷಣ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿತ್ತು. ಈ ವರ್ಷದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಹೊಸ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಶಾಲಾ ಮಕ್ಕಳಿಗೆ ಹೊಸ ನಿಯಮವನ್ನು ಜಾರಿಗೊಳಿಸಿ ಅದನ್ನು ಕಡ್ಡಾಯಗೊಳಿಸಿದೆ.
ಇಂದಿನಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಈ ನಿಯಮ ಕಡ್ಡಾಯ
ರಾಜ್ಯದ ಶಾಲಾ ಮಕ್ಕಳಿಗೆ ಸಂವಿಧಾನ ಪೀಠಿಕೆ ಓದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಈ ಹಿಂದೆ ಸುತ್ತೋಲೆ ಹೊರಡಿಸಿತ್ತು. ಇದೀಗ ಈ ಬಗ್ಗೆ ರಾಜ್ಯ ಸರ್ಕಾರ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದನ್ನು ಕಡ್ಡಾಯಗೊಳಿಸಿದೆ. ರಾಜ್ಯ ಸರ್ಕಾರ ಈ ಹೊಸ ನಿಯಮವನ್ನು ಎಲ್ಲ ಶಾಲಾ ಕಾಲೇಜುಗಳು ತಪ್ಪದೆ ಪಾಲಿಸಬೇಕಿದೆ.
ಇನ್ನುಮುಂದೆ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದು ಕಡ್ಡಾಯ
ರಾಜ್ಯದ ಎಲ್ಲಾ ಸರ್ಕಾರೀ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಭಾರತದ ಸಾಂವಿಧಾನ ಪೀಠಿಕೆಯನ್ನು ಫಲಕದಲ್ಲಿ ಅಳವಡಿಸಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ. ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ ಸಂವಿಧಾನ ಶಿಲ್ಪಿ Dr. B .R Ambedkar ಅವರು ಹೇಳಿರುವಂತಹ ಸಂವಿಧಾನ ಪೀಠಿಕೆ ಅದರ ಆತ್ಮವಾಗಿದೆ. ಹೀಗಾಗಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ಕಾನೂನು ಇಲಾಖೆಯ ಕೇಂದ್ರದಿಂದ ಸಂವಿಧಾನ ಪೀಠಿಕೆಯನ್ನು ಖರೀದಿಸಿ ಕಾಲೇಜಿನಲ್ಲಿ ಫಲಕ ಪ್ರಕಟಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.