Sim KYC: ದೇಶದಲ್ಲಿ ಜಾರಿಗೆ ಬಂತು ಹೊಸ ಸಿಮ್ ಕಾರ್ಡ್ ನಿಯಮ, ಹೊಸ ಸಿಮ್ ಖರೀದಿಸುವವರಿಗೆ ಹೊಸ ನಿಯಮ.

ಸಿಮ್ ಕಾರ್ಡ್ ಖರೀದಿ ಮಾಡುವಾಗ ಈ ತಪ್ಪು ಮಾಡಿದರೆ 10 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ.

New Rule For Sim Card Purchase: ಇತ್ತೀಚಿಗೆ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ವಂಚನೆಯು ಕೂಡ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿದೆ. ತಂತ್ರಜ್ನಾದ ಬೆಳವಣಿಗೆಯು ಒಂದು ರೀತಿಯಲ್ಲಿ ವಂಚನೆ ಮಾಡಲು ಕೂಡ ಉಪಯೋಗವಾಗುತ್ತಿದೆ. ಸರ್ಕಾರ ಹೆಚ್ಚುತ್ತಿರುವ ವಂಚನೆಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚಿಗೆ ಬೆಳಕಿಗೆ ಬಂದಿರುವ ವಂಚನೆಯ ಪ್ರಕರಣದಲ್ಲಿ ಫೋನ್ ಕರೆಯ ಮೂಲಕ ನಡೆಯುತ್ತಿರುವ ವಂಚನೆ ಹೆಚ್ಚಿವೆ ಎನ್ನಬಹುದು.

ಈ ನಿಟ್ಟಿನಲ್ಲಿ ಸರ್ಕಾರ Sim Card Purchase ಮಾಡುವವರಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಟೆಲಿಕಾಂ ಸಚಿವರಾದ Ashwini Vaishnaw ಅವರು ಸಿಮ್ ಖರೀದಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. December 1 ರಿಂದ ದೇಶದಾದ್ಯಂತ ಸಿಮ್ ಕಾರ್ಡ್ ಖರೀದಿಸಲು ಹೊಸ ನಿಯಮ ಜಾರಿಯಾಗುವ ಬಗ್ಗೆ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.

Sim Card News
Image Credit: Zeenews

ಸಿಮ್ ಕಾರ್ಡ್ ಖರೀದಿಸುವ ಮುನ್ನ ಹೊಸ ನಿಯಮ ತಿಳಿದುಕೊಳ್ಳಿ
ಇತ್ತೀಚಿಗೆ ಜನರು ಸುಳ್ಳು ಮಾಹಿತಿಯನ್ನ ನೀಡಿ ಹೆಚ್ಚು ಹೆಚ್ಚು ಸಿಮ್ ಗಳನ್ನೂ ಖರೀದಿಸುತ್ತಿದ್ದಾರೆ. ದೂರ ಸಂಪರ್ಕ ಇಲಾಖೆ ಬಲ್ಕ್ ಸಿಮ್ ಖರೀದಿಯನ್ನು ನಿಷೇದಿಸಿದ್ದು, ಇದರ ಬದಲಾಗಿ ವ್ಯಾಪಾರ ಸಂಪರ್ಕದ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತದೆ. ಬಿಸಿನೆಸ್ KYC ಮಾತ್ರವಲ್ಲದೆ, ಆ ಸಿಮ್ ಪಡೆದುಕೊಂಡ ವ್ಯಕ್ತಿಯ KYC ಕೂಡ ಮಾಡಲಾಗುತ್ತದೆ.

ಸಿಮ್ ಖರೀದಿಯಲ್ಲಿ ಈ ತಪ್ಪಾದರೆ ಕಟ್ಟಬೇಕು 10 ಲಕ್ಷ ರೂ. ದಂಡ
ಇನ್ನುಮುಂದೆ ಹೊಸ ಫೋನ್ ಸಿಮ್ ಡೀಲರ್ ಗಳಿಗೆ ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ಎಲ್ಲಾ ಸೇಲ್ ಡೀಲರ್ ಗಳಿಗೆ ನೋಂದಣಿ ಕಡ್ಡಾಯವಾಗಿದೆ. ಇನ್ನು ಸಿಮ್ ಕಾರ್ಡ್ ಗಳನ್ನೂ ಮಾರಾಟ ಮಾಡುವ ಅಸ್ತಿತ್ವದಲ್ಲಿರುವ ಅಂಗಡಿಗಳು ಸಹ ಈಗಾಗಲೇ ಹೊಸ ನಿಯಮದ ಪ್ರಕಾರ ತಮ್ಮ KYC ಅನ್ನು ಮಾಡಬೇಕಾಗಿದೆ.

New Rule For Sim Card Purchase
Image Credit: Original Source

ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 10 ಲಕ್ಷ ದಂಡ ವನ್ನು ವಿಧಿಸಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ. ಹೆಚ್ಚುತ್ತಿರುವ ನಕಲಿ ಸಿಮ್ ಗಳ ಬಳಕೆಯನ್ನು ತಡೆಗಟ್ಟಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೊಸ ನಿಯಮದ ಪ್ರಕಾರ, ಮಾರಾಟಗಾರರು ಪೂರ್ವ ಸಕ್ರಿಯಗೊಳಿಸಿದ ಸಿಮ್ ಗಳನ್ನೂ ಇತರರಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group

December 1 ರಿಂದಲೇ ಹೊಸ ನಿಯಮ ಜಾರಿ
DoT ನ ಹೊಸ ನಿಯಮಗಳ ಪ್ರಕಾರ, ಕಾರ್ಪೊರೇಟ್ ID ಸಂಖ್ಯೆ ಅಥವಾ CIN ಸಂಖ್ಯೆಯನ್ನು ಪ್ರತಿ SIM ಕಾರ್ಡ್ ಅಂಗಡಿಗೆ ನೀಡಲಾಗುತ್ತದೆ. ಈ ಸಂಖ್ಯೆ ಇಲ್ಲದೆ ಯಾರು ಕೂಡ ಸಿಮ್ ಅನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಈ ಐಡಿ ಇಲ್ಲದೆ ಸಿಮ್ ಕಾರ್ಡ್ ಮಾರಾಟವಾದರೆ ಅಂತಹ ಐಡಿಯನ್ನು ನಿರ್ಬಂಧಿಸಲಾಗುತ್ತದೆ.

ಇನ್ನುಮುಂದೆ ವ್ಯಕ್ತಿಯು ಸಿಮ್ ಕಾರ್ಡ್ ಅನ್ನು ಕಳೆದುಕೊಂಡರೆ ಪರಿಶೀಲನೆ ಪ್ರಕ್ರಿಯೆಯ ಮೂಲಕವೇ ಹೋಗಬೇಕಾಗುತ್ತದೆ. ಈಗಾಗಲೇ ವಂಚನೆಯ ಕರೆಗಳನ್ನು ತಡೆಗಟ್ಟಲು 52 ಲಕ್ಷಕ್ಕೂ ಅಧಿಕ ಸಂಪರ್ಕವನ್ನು ದೂರ ಸಂಪರ್ಕ್ ಇಲಾಖೆ ಕಡಿತಗೊಳಿಸಿದೆ.

Join Nadunudi News WhatsApp Group