Ads By Google

April Rule: ಏಪ್ರಿಲ್ 1 ರಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ.

Ads By Google

New Rule from April 1st 2024: ಇನ್ನೇನು ಕೇವಲ 6 ದಿನಗಳಲ್ಲಿ 2023 -24 ರ ಹಣಕಾಸು ವರ್ಷ ಮುಗಿಯಲಿದೆ. ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ 2024 -25 ಆರಂಭಗೊಳ್ಳುತ್ತದೆ. ಇನ್ನು ಪ್ರಸಕ್ತ ಹಣಕಾಸು ವರ್ಷ ಮುಗಿಯುವುದರೊಳಗೆ ಅನೇಕ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕಿದೆ.

ಏಕೆಂದರೆ April 1 ಹೊಸ ಹಣಕಾಸು ವರ್ಷದಿಂದ ಹೊಸ ಹೊಸ ನಿಯಮಗಳು ಜಾರಿಯಾಗುತ್ತದೆ. ಹೊಸ ನಿಯಮಗಳು ಜಾರಿಯಾಗುತ್ತಿದ್ದಂತೆ ಅನೇಕ ರೀತಿಯ ವ್ಯವಹಾರಗಳು ಬದಲಾಗುತ್ತವೆ. ಇದೀಗ ನಾವು ಈ ಲೇಖನದಲ್ಲಿ April 1 ರಿಂದ ಬದಲಾಗುವ ಕೆಲವು ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Image Credit: Aajtak

ಏಪ್ರಿಲ್ 1 ರಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು
•FASTag ಹೊಸ ನಿಯಮ
ನೀವು ಬ್ಯಾಂಕ್‌ ನಿಂದ ನಿಮ್ಮ ಕಾರಿನ ಫಾಸ್ಟ್‌ ಟ್ಯಾಗ್‌ ನ KYC ಅನ್ನು ನವೀಕರಿಸದಿದ್ದರೆ ಏಪ್ರಿಲ್ 1 ರಿಂದ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ FASTag ನ KYC ಅನ್ನು ನೀವು ಮಾಡದಿದ್ದರೆ ಇಂದೇ ಮಾಡಿ. ಏಕೆಂದರೆ ಮಾರ್ಚ್ 31 ರ ನಂತರ ಬ್ಯಾಂಕ್ FASTag ಅನ್ನು ನಿಷ್ಕ್ರಿಯಗೊಳಿಸುತ್ತದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇದಾದ ನಂತರ ಫಾಸ್ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇದ್ದರೂ ಹಣ ಪಾವತಿಯಾಗುವುದಿಲ್ಲ. RBI ಮಾನದಂಡಗಳ ಪ್ರಕಾರ FASTag ಗಾಗಿ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಲು NHAI FASTag ಗ್ರಾಹಕರನ್ನು ಕೇಳಿದೆ.

Image Credit: India TV

•NPS ನಿಯಮದಲ್ಲಿ ಬದಲಾವಣೆ
ಏಪ್ರಿಲ್ ತಿಂಗಳಿನಿಂದ ಪಿಂಚಣಿ ನಿಧಿ ನಿಯಂತ್ರಕ ಅಂದರೆ PFRDA ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಸ್ತಿತ್ವದಲ್ಲಿರುವ ಲಾಗಿನ್ ಪ್ರಕ್ರಿಯೆಯನ್ನು ಬದಲಾಯಿಸಲು ನಿರ್ಧರಿಸಿದೆ. ಹೊಸ ನಿಯಮವು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ. ಹೊಸ ನಿಯಮದ ಅಡಿಯಲ್ಲಿ NPS ಖಾತೆಗೆ ಲಾಗಿನ್ ಮಾಡಲು ಎರಡು ಪರಿಶೀಲನೆಗಳು ಅಂದರೆ ಎರಡು ಅಂಶಗಳ ದೃಢೀಕರಣದ ಅಗತ್ಯವಿದೆ. NPS ಚಂದಾದಾರರು ಆಧಾರ್ ಪರಿಶೀಲನೆ ಮತ್ತು ಮೊಬೈಲ್‌ ನಲ್ಲಿ ಸ್ವೀಕರಿಸಿದ OTP ಮೂಲಕ ಲಾಗಿನ್ ಮಾಡಬಹುದು.

•ಪಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್
ಪ್ಯಾನ್ ಅನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡಲು ಹಲವಾರು ಗಡುವನ್ನು ವಿಸ್ತರಿಸಲಾಗಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ ಗೆ ಲಿಂಕ್ ಮಾಡಲು ಕೊನೆಯ ದಿನಾಂಕ 31 ಮಾರ್ಚ್ 2024. ಈ ಮಾರ್ಚ್ ಅಂತ್ಯದೊಳಗೆ ಆಧಾರ್ ನೊಂದಿಗೆ ಪಾನ್ ಅನ್ನು ಲಿಂಕ್  ಮಾಡದಿದ್ದರೆ ಅಂತವರ  ಪ್ಯಾನ್ ಸಂಖ್ಯೆಯನ್ನು ರದ್ದುಗೊಳಿಸಲಾಗುತ್ತದೆ.

Image Credit: Informal Newz

•EPFO ನಿಯಮದಲ್ಲಿ ಬದಲಾವಣೆ
ಹೊಸ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿಯು ಏಪ್ರಿಲ್ 1 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ, ನೀವು ಉದ್ಯೋಗವನ್ನು ಬದಲಾಯಿಸಿದರೆ ನಿಮ್ಮ ಹಳೆಯ ಪಿಎಫ್ ಅನ್ನು ಆಟೋ ಮೋಡ್‌ ಗೆ ವರ್ಗಾಯಿಸಲಾಗುತ್ತದೆ. ಅಂದರೆ, ಉದ್ಯೋಗವನ್ನು ಬದಲಾಯಿಸುವಾಗ ನೀವು ಪಿಎಫ್ ಮೊತ್ತವನ್ನು ವರ್ಗಾಯಿಸಲು ವಿನಂತಿಸುವ ಅಗತ್ಯವಿಲ್ಲ. ಹೊಸ ಆರ್ಥಿಕ ವರ್ಷದಿಂದ ಈ ಅವ್ಯವಸ್ಥೆ ಕೊನೆಗೊಳ್ಳಲಿದೆ.

•SBI ಕ್ರೆಡಿಟ್ ಕಾರ್ಡ್ ನಿಯಮ
ಇನ್ನು SBI ಕ್ರೆಡಿಟ್ ಕಾರ್ಡ್ ಬಳಕೆದಾರರಾಲಿಗೂ ಕೂಡ ಹೊಸ ನಿಯಮ ಜಾರಿಯಾಗಲಿದೆ. ಏಪ್ರಿಲ್ 1, 2024 ರಿಂದ, SBI ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಏಪ್ರಿಲ್ 1 ರಿಂದ ನೀವು ಬಾಡಿಗೆಯನ್ನು ಪಾವತಿಸಿದರೆ ನಿಮಗೆ ಯಾವುದೇ ರಿವಾರ್ಡ್ ಪಾಯಿಂಟ್‌ ಗಳನ್ನು ನೀಡಲಾಗುವುದಿಲ್ಲ. ಈ ನಿಯಮವು ಕೆಲವು ಕ್ರೆಡಿಟ್ ಕಾರ್ಡ್‌ ಗಳಿಗೆ ಏಪ್ರಿಲ್ 1 ರಿಂದ ಅನ್ವಯಿಸುತ್ತದೆ ಮತ್ತು ಕೆಲವು ಕ್ರೆಡಿಟ್ ಕಾರ್ಡ್‌ ಗಳಿಗೆ ಈ ನಿಯಮವು ಏಪ್ರಿಲ್ 15 ರಿಂದ ಅನ್ವಯಿಸುತ್ತದೆ.

Image Credit: Zeenews
Ads By Google
Nagarathna Santhosh

Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: april April Rule New Rule from April 1st 2024 new rules 2024 new rules in april rules changes

Recent Stories

  • Blog
  • Business
  • Information
  • Main News
  • money

2000 Rs Note: ರಾತ್ರೋರಾತ್ರಿ 2000 ರೂ. ನೋಟುಗಳ ಮೇಲೆ ಇನ್ನೊಂದು ಆದೇಶ ಹೊರಡಿಸಿದ RBI.

RBI New Update On 2000 Rs Note: ದೇಶದಲ್ಲಿ ಎರಡು ಬಾರಿ ನೋಟ್ ಬ್ಯಾನ್ ಸಂಭವಿಸಿದೆ. ಇನ್ನು 2023…

2024-05-11
  • Blog
  • Business
  • Information
  • Main News
  • money
  • Technology

Okaya Sports Bike: ಪ್ರತಿ ಕಿಲೋಮೀಟರಿಗೆ ಕೇವಲ 25 ಪೈಸೆ ಖರ್ಚು, ಈ ಬೈಕ್ ಖರೀದಿಗೆ ಕೇಂದ್ರದಿಂದ ಸಿಗಲಿದೆ ಸಬ್ಸಿಡಿ.

Okaya Ferrato Disruptor Sports Bike: ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳನ್ನೂ ಲಾಂಚ್ ಆಗುತ್ತಿದೆ. ಯುವಕರು ನೂತನ…

2024-05-11
  • Headline
  • Information
  • Main News
  • money
  • Society

8th Pay: ದೇಶದಲ್ಲಿ 8 ನೇ ವೇತನ ಜಾರಿಗೆ ಬಂದರೆ ನಿಮ್ಮ ಸಂಬಳ ಎಷ್ಟಾಗಲಿದೆ…? ಇಲ್ಲಿದೆ ಡೀಟೇಲ್ಸ್.

8th Pay Commission Latest Update: ಸದ್ಯ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿರುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ…

2024-05-11
  • Education
  • Information
  • Main News

Best Course: SSLC ಪಾಸ್ ಆದ ಮಕ್ಕಳೇ ಗಮನಿಸಿ, ನಿಮ್ಮ ಮುಂದಿನ ವ್ಯಾಸಂಗಕ್ಕೆ ಇಲ್ಲಿದೆ ಬೆಸ್ಟ್ ಕೋರ್ಸ್.

After 10th Best Course: ಸದ್ಯ ನಿನ್ನೆ ಮೇ 9 ರಂದು SSLC ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ…

2024-05-11
  • Blog
  • Business
  • Information
  • Main News
  • money
  • Technology

Swift 2024: ಈ ಒಂದು ಕಾರಣಕ್ಕೆ ಬೆಲೆ ಹೆಚ್ಚಾದರೂ ಜನರು ಬುಕ್ ಮಾಡುತ್ತಿದ್ದಾರೆ 2024 ರ ಸ್ವಿಫ್ಟ್ ಕಾರ್, ಭರ್ಜರಿ ಡಿಮ್ಯಾಂಡ್

Swift 2024 Price And Feature: ಪ್ರಸ್ತುತ ಮಾರುಕಟ್ಟೆಯಲ್ಲಿ ಇದೀಗ Swift 2024 ಗ್ರಾಂಡ್ ಎಂಟ್ರಿ ಕೊಟ್ಟಿದೆ. ಜನರು ಇನ್ನುಮುಂದೆ…

2024-05-11
  • Blog
  • Business
  • Information
  • Main News
  • money
  • Technology

TVS Zest 110: ಕೇವಲ 33 ಸಾವಿರ ಕೊಟ್ಟು ಮನೆಗೆ ತನ್ನಿ ಕಡಿಮೆ ತೂಕದ ಈ ಸ್ಕೂಟರ್, ಹುಡುಗಿಯರಿಗೆ ಬೆಸ್ಟ್.

TVS Zest 110 Scooter: ಮಾರುಕಟ್ಟೆಯಲ್ಲಿ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹತ್ತು ಹಲವು ಮಾದರಿಯ…

2024-05-11