December Update: ಡಿಸೆಂಬರ್ 31 ರೊಳಗೆ ಎಲ್ಲರೂ ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲದವಾದರೆ ನಿಮ್ಮ ಎಲ್ಲಾ ವಹಿವಾಟು ಬಂಧ್.

December ಅಂತ್ಯದೊಳಗೆ ಜನರು ಈ ಕೆಲಸ ಪೂರ್ಣಗೊಳಿಸುವುದು ಅಗತ್ಯವಾಗಿದೆ.

New Rule From December: ತಿಂಗಳ ಆರಂಭದಲ್ಲಿ ಹೊಸ ಹೊಸ ನಿಯಮಗಳು ಜಾರಿಗೆ ಬರುವುದಂತೂ ಸಹಜ. ನಾವೀಗ 2023 ರ ಕೊನೆಯ ತಿಂಗಳು December ನಲ್ಲಿದ್ದೇವೆ. December ತಿಂಗಳಿನಲ್ಲಿ ಕೂಡ ಈ ಬಾರಿ ಅನೇಕ ನಿಯಮಗಳು ಬದಲಾಗಳಿವೆ. ನಿಯಮಗಳ ಬದಲಾವಣೆಯ ಜೊತೆಗೆ ಸರ್ಕಾರ ಕೆಲ ವಹಿವಾಟುಗಳು ಗಡುವನ್ನು ವಿಧಿಸಿದೆ.

December ಅಂತ್ಯದೊಳಗೆ ಜನರು ತಮ್ಮ ಕೆಲಸವನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ. ಡಿಸೇಂಬರ್ ತಿಂಗಳಿನಲ್ಲಿ ಬದಲಾಗಲಿರುವ ನಿಯಮಗಳು ಹಣಕಾಸಿನ ವಹಿವಾಟಿನ ಮೇಲೆ ಪರಿಣಾಮ ಬೀರಬಹುದು. ಇದೀಗ ನಾವು December ನಲ್ಲಿ ಬದಲಾಗುವಂತಹ ನಿಯಮಗಳ ಬಗ್ಗೆ ವಿವರ ತಿಳಿಯೋಣ.

Bank Locker Rules
Image Credit: NDTV

ಡಿಸೆಂಬರ್ 31 ರೊಳಗೆ ಎಲ್ಲರೂ ಈ ಕೆಲಸ ಮಾಡುವುದು ಕಡ್ಡಾಯ
*ಬ್ಯಾಂಕ್ ಲಾಕರ್ ಒಪ್ಪಂದ
ಇನ್ನು Reserve Bank Of India ಬ್ಯಾಂಕ್ ಲಾಕರ್ ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಪ್ರತಿವರ್ಷ ಗ್ರಾಹಕರು ತಮ್ಮ ಬ್ಯಾಂಕುಗಳೊಂದಿಗೆ ಲ್ಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ RBI ಆದೇಶಿಸಿದೆ. ಬಳಕೆದಾರರು ಬಾಡಿಗೆ ಪಾವತಿಸುವುದನ್ನು ಮುಂದುವರೆಸಿದರೆ ಮಾತ್ರ ಲಾಕರ್ ಗಳನ್ನೂ ಬಳಸಲು ಅವಕಾಶವಿರುತ್ತದೆ. ಈ ಒಪ್ಪಂದವನ್ನು ಮಾಡಲು December 31 ಕೊನೆಯ ದಿನಾಂಕವಾಗಿದೆ.

*ಆಧಾರ್ ನವೀಕರಣ
ಇತ್ತೀಚೆಗಷ್ಟೇ UIDAI ಹತ್ತು ವರ್ಷಗಳಿಗೊಮ್ಮೆ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಆನ್ಲೈನ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಬಳಕೆದಾರರು ತಮ್ಮ ಹೆಸರು, ವಿಳಾಸ, ಲಿಂಗ, ಫೋನ್ ಸಂಖ್ಯೆ, ಲಿಂಗ ಮತ್ತು ಇಮೇಲ್ ಇತ್ಯಾದಿಯನ್ನು ಉಚಿತವಾಗಿ ಬದಲಾಯಿಸಬಹುದಾಗಿದೆ. ಬಳಕೆದಾರರು ತಮ್ಮ ದಾಖಲೆಗಳನ್ನು ಡಿಸೇಂಬರ್ 14 ರೊಳಗೆ ನವೀಕರಿಸುದು ಕಡ್ಡಾಯವಾಗಿದೆ.

Aadhar Update
Image Credit: Original Source

*ಮ್ಯೂಚುವಲ್ ಫಂಡ್ ನಾಮನಿರ್ದೇಶನ ಸಲ್ಲಿಕೆಗೆ ಗಡುವು
ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆದಾರರಿಗೆ ನಾಮನಿರ್ದೇಶನ ವಿವರಗಳನ್ನು ಒದಗಿಸಲು December 31 2023 ರವರೆಗೆ SEBI ಗಡುವನ್ನು ನೀಡಿದೆ. ಭೌತಿಕ ಭದ್ರತೆ ಹೊಂದಿರುವವರು ತಮ್ಮ ಪಾನ್, ನಾಮನಿರ್ದೇಶನ, ಸಂಪರ್ಕ ವಿವರ ಎಲ್ಲವನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕು.

Join Nadunudi News WhatsApp Group

*UPI ಸೇವೆ ಸ್ಥಗಿತ
ಸದ್ಯ National Payment Corporation Of India ಇದೀಗ UPI ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ವರ್ಷಗಳಿಂದ ಬಳಸದೆ ಇರುವ UPI ID ಗಳನ್ನೂ ಸ್ಥಗಿತಗೊಳಿಸಲು NPCI ನಿರ್ಧಾರ ಕೈಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳಿಲ್ಲದ UPI ID ಗಳನ್ನೂ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದು ವರ್ಷದಲ್ಲಿ ಯಾವುದೇ ವಹಿವಾಟು ಕಂಡುಬರದಿದ್ದರೆ, ಅಂತಹ UPI ID ಯನ್ನು December 31 ರ ನಂತರದ ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ. ಹೀಗಾಗಿ ನಿಮ UPI ID ಯನ್ನು ಉಳಿಸಿಕೊಳ್ಳಲು December 31 ರೊಳಗೆ ಒಮ್ಮೆಯಾದರೂ ವಹಿವಾಟು ನಡೆಸುವುದು ಉತ್ತಮ.

Join Nadunudi News WhatsApp Group