July Rule: ಜುಲೈ 1 ರಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ.

ಜೂಲೈ ಮೊದಲ ವಾರವೇ ಕೆಲವು ನಿಯಮಗಳಲ್ಲಿ ಬದಲಾವಣೆ ಆಗಲಿದ್ದು ಇದು ಜನರ ಜೇಬಿಗೆ ಕತ್ತರಿ ಹಾಕಲಿದೆ.

New Rule From July 1st:  ಹೊಸ ಹಣಕಾಸು ವರ್ಷ ಆರಂಭದ ದಿನದಿಂದ ಸಾಕಷ್ಟು ನಿಯಮಗಳು ಬದಲಾಗುತ್ತಿದೆ. ಪ್ರತಿ ತಿಂಗಳು ಮುಗಿಯುತ್ತಿದ್ದಂತೆ ಹೊಸ ಹೊಸ ನಿಯಮಗಳು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಆರಂಭದಿಂದ ಸಾಕಷ್ಟು ನಿಯಮಗಳು ಬದಲಾಗಿವೆ.

ಇದೀಗ ಜೂನ್ ತಿಂಗಳು ಮುಗಿದು ಜುಲೈ ಆರಂಭಗೊಳ್ಳಲಿದೆ. ಜುಲೈ ತಿಂಗಳ ಆರಂಭದಲ್ಲಿ ಕೂಡ ಅನೇಕ ನಿಯಮಗಳು ಬದಲಾಗಲಿದೆ. ಇನ್ನು ಜುಲೈ 1 ರಿಂದ ಕೆಲವು ನಿಯಮಗಳು ಬದಲಾಗಲಿವೆ. ಜುಲೈ ತಿಂಗಳ ಆರಂಭದಲ್ಲಿ ಯಾವ ಯಾವ ನಿಯಮಗಳು ಬದಲಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

All these rules will change from July 1
Image Credit: Economictimes

ಜುಲೈ 1 ರಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು
*ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಇಳಿಕೆ ಸಾಧ್ಯತೆ
ಪ್ರತಿ ತಿಂಗಳ ಆರಂಭದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಪರಿಷ್ಕರಣೆ ಆಗುವುದು ಕಡ್ಡಾಯವಾಗಿದೆ. ಜೂನ್ 1 ರಿಂದ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇಳಿಕೆ ಆಗಿದೆ. 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 83.50 ರೂ. ಗೆ ಇಳಿಕೆಯಾಗಿತ್ತು.

ಇನ್ನು ಜುಲೈ ತಿಂಗಳ ಆರಂಭದಲ್ಲಿ ಕೂಡ ಎಲ್ ಪಿಜಿ ದರ ಪರಿಷ್ಕರಣೆ ಆಗಲಿದೆ. ಕಳೆದ ಎರಡು ತಿಂಗಳಿನಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಕಾರಣಕ್ಕೆ ಜುಲೈ ನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

All these rules will change from July 1
Image Credit: Timesnownews

*ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ
ದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಇನ್ನು ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡಲು TCS ಅನ್ನು ಅನ್ವಯಿಸಲಾಗಿದೆ. ಜುಲೈ 1 ರಿಂದ ಕ್ರೆಡಿಟ್ ಕಾರ್ಡ್ ಗಳ ಮೇಲೆ TCS ಅನ್ವಯಿಸುತ್ತದೆ.

Join Nadunudi News WhatsApp Group

ಈ ಹೊಸ ನಿಯಮದಡಿ 7 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಮೇಲೆ 20 ಪ್ರತಿಶತದವರೆಗೆ TCS ಶುಲ್ಕವನ್ನು ವಿಧಿಸಲಾಗುತ್ತದೆ. ಶಿಕ್ಷಣ ಮತ್ತು ವೈದ್ಯಕೀಯಕ್ಕಾಗಿ ಈ ಶುಲ್ಕವನ್ನು 5 ಪ್ರತಿಶತಕ್ಕೆ ಇಳಿಸಲಾಗುತ್ತದೆ. ನೀವು ವಿದೇಶದಲ್ಲಿ ಶಿಕ್ಷಣ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ ಈ ಶುಲ್ಕವನ್ನು ಶೇ. 0 .5 ಕ್ಕೆ ಇಳಿಸಲಾಗುತ್ತದೆ.

All these rules will change from July 1
Image Credit: Economictimes

*ಸಿಎನ್ ಜಿ ಮತ್ತು ಪಿಎನ್ ಜಿ ದರದಲ್ಲಿ ಬದಲಾವಣೆ
ಪ್ರತಿ ತಿಂಗಳ ಆರಂಭದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಪರಿಷ್ಕರಣೆ ಜೊತೆಗೆ ಸಿಎನ್ ಜಿ ಮತ್ತು ಪಿಎನ್ ಜಿ ದರ ಕೂಡ ಪರಿಷ್ಕರಣೆ ಆಗಲಿದೆ. ಜುಲೈ ನಲ್ಲಿ ಸಿಎನ್ ಜಿ ಮತ್ತು ಪಿಎನ್ ಜಿ ದರದಲ್ಲಿ ಇಳಿಕೆ ಸಾಧ್ಯತೆ ಇದೆ.

All these rules will change from July 1
Image Credit: Indiafilings

*ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ
ಜುಲೈ ನಲ್ಲಿ ಐಟಿ ರಿಟರ್ನ್ ಸಲ್ಲಿಕೆಯಲ್ಲಿ ಕೂಡ ಅನೇಕ ನಿಯಮಗಳು ಬದಲಾಗಿವೆ.ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು.

Join Nadunudi News WhatsApp Group