March Rule: ದೇಶದಲ್ಲಿ ನಾಳೆಯಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ.

ದೇಶದಲ್ಲಿ ನಾಳೆಯಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು

New Rule From March 1st: 2024 ರ ಎರಡನೇ ತಿಂಗಳು ಇಂದಿಗೆ ಮುಕ್ತಾಯವಾಗಲಿದೆ. ನಾಳೆಯಿಂದ 2024 ರ ಮಾರ್ಚ್ ತಿಂಗಳು ಆರಂಭವಾಗಲಿದೆ. ಇನ್ನು ವರ್ಷದ ಪ್ರತಿ ತಿಂಗಳ ಆರಂಭದಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗುವುದುದರ ಬಗ್ಗೆ ನಿಮಗೆ ಮಹಿತಿ ತಿಳಿದಿದೆ.

ಹೊಸ ವರ್ಷದ ಎರಡು ತಿಂಗಳಿನ ಆರಂಭದಲ್ಲಿ ಕೂಡ ಅನೇಕ ನಿಯಮಗಳು ಬದಲಾಗಿದೆ. ಅದರಂತೆ ಮಾರ್ಚ್ 2024 ರ ಆರಂಭದಿಂದ ಕೂಡ ಸಾಕಷ್ಟು ನಿಯಮಗಳು ಬದಲಾಗಲಿದೆ. ಸದ್ಯ ನಾವೀಗ ಈ ಲೇಖನದಲ್ಲಿ ಮಾರ್ಚ್ 1 ರಿಂದ ಬದಲಾಗಲಿರುವ 4 ಪ್ರಮುಖ ನಿಯಮಗಳ ಬಗ್ಗೆ ಮಾಹಿತಿ ತಿಳಿಯೋಣ.

New Rule From March 1st
Image Credit: Original Source

ದೇಶದಲ್ಲಿ ನಾಳೆಯಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು
•FASTag KYC Deadline
National Highways Authority of India (NHAI) FASTag ನ KYC ಅನ್ನು ನವೀಕರಿಸಲು ಫೆಬ್ರವರಿ 29 ಅನ್ನು ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಿದೆ. ಈ ದಿನಾಂಕದೊಳಗೆ ನಿಮ್ಮ FASTag ನ KYC ಅನ್ನು ನೀವು ನವೀಕರಿಸದಿದ್ದರೆ, ನಿಮ್ಮ FASTag ಅನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ನಿಷ್ಕ್ರಿಯಗೊಳಿಸಬಹುದು ಮತ್ತು ಕಪ್ಪುಪಟ್ಟಿಗೆ ಸೇರಿಸಬಹುದು. ನಿಮ್ಮ FASTag KYC ಅನ್ನು ಫೆಬ್ರವರಿ 29 ರ ಮೊದಲು ಮಾಡಿಕೊಳ್ಳುವುದು ಉತ್ತಮ.

•Gas Cylinder Price
ಪ್ರತಿ ತಿಂಗಳ ಆರಂಭದಲ್ಲಿ, ಸರ್ಕಾರವು ಎಲ್ಪಿಜಿ ಬೆಲೆಯನ್ನು ಪರಿಷ್ಕರಿಸುತ್ತದೆ ಮತ್ತು ಹೊಸ ಬೆಲೆಗಳನ್ನು ಬಿಡುಗಡೆ ಮಾಡುತ್ತದೆ. ಫೆಬ್ರವರಿ ಆರಂಭದಲ್ಲಿ, ಎಲ್ಪಿಜಿ ಬೆಲೆಗಳನ್ನು ಪರಿಷ್ಕರಿಸಿಲ್ಲ. ಇನ್ನು 14.2 ಕೆಜಿ ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1053 ರೂ., ಮುಂಬೈನಲ್ಲಿ 1052.50 ರೂ., ಬೆಂಗಳೂರಿನಲ್ಲಿ 1055.50 ರೂ., ಚೆನ್ನೈನಲ್ಲಿ 1068.50 ರೂ. ಮತ್ತು ಹೈದರಾಬಾದ್‌ ನಲ್ಲಿ ಪ್ರತಿ ಸಿಲಿಂಡರ್‌ಗೆ 1,105.00 ರೂ. ಈ ದರದಲ್ಲೂ ವ್ಯತ್ಯಾಸವಿದೆ. ಸದ್ಯ ಮಾರ್ಚ್ ನಲ್ಲಿ LPG ದರ ಪರಿಷ್ಕರಿಸಬಹುದು. ತೈಲ ಕಂಪನಿಗಳು ಗ್ಯಾಸ್ ಬೆಲೆಯಲ್ಲಿ ಇಳಿಕೆ ಅಥವಾ ಏರಿಕೆಯನ್ನು ಮಾಡಬಹುದು.

Gas Cylinder Price
Image Credit: Fortune India

•Social Media Safety
ಇನ್ನು X, Facebook, YouTube ಮತ್ತು Instagram ನಂತಹ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ ಗಳು ಹೊಸ ನಿಯಮಗಳನ್ನು ಅನುಸರಿಸಬೇಕು. ಮಾರ್ಚ್‌ ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳೊಂದಿಗೆ ಪ್ರಸಾರವಾದ ಯಾವುದೇ ಸುದ್ದಿಗೆ ದಂಡ ವಿಧಿಸಲಾಗುವುದು. ಈ ಮೂಲಕ ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತಗೊಳಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.

Join Nadunudi News WhatsApp Group

•Bank Holiday
ಮಾರ್ಚ್ 2024 ರಲ್ಲಿ ಬ್ಯಾಂಕುಗಳಿಗೆ ಬರೋಬ್ಬರಿ 14 ದಿನಗಳು ಅಂದರೆ ಅರ್ಧ ತಿಂಗಳು ಬ್ಯಾಂಕುಗಳು ಮುಚ್ಚಿರುತ್ತವೆ. ಇನ್ನು ಸೆಂಟ್ರಲ್ ಬ್ಯಾಂಕ್ ಘೋಷಿಸಿದ ಬ್ಯಾಂಕಿಂಗ್ ರಜಾ ದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದ ವಾರದ ರಜಾ ದಿನಗಳು ಸೇರಿವೆ. ಇನ್ನು ಹೋಳಿ, ಮಹಾಶಿವರಾತ್ರಿ, ಶುಭ ಶುಕ್ರವಾರ ಸೇರಿದಂತೆ ಮಾರ್ಚ್‌ ನಲ್ಲಿ ವಿಶೇಷ ಸಂದರ್ಭಗಳಲ್ಲಿ ರಜಾ ದಿನಗಳನ್ನು ಘೋಷಿಸಲಾಗಿದೆ.

Join Nadunudi News WhatsApp Group