Septembar Update: ಇಂದಿನಿಂದ ಬದಲಾಗಲಿವೆ ಈ 5 ನಿಯಮಗಳು, ವ್ಯವಹಾರ ಮಾಡುವ ಮುನ್ನ ಎಚ್ಚರ.
ಇಂದಿನಿಂದ ಹಣಕಾಸಿಗೆ ಸಂಬಂಧಿಸಿದಂತೆ ಯಾವೆಲ್ಲ ನಿಯಮಗಳು ಬದಲಾಗಲಿದೆ ಎಂದು ತಿಳಿದುಕೊಳ್ಳಿ.
New Rule from Septembar 1st: ಇದೀಗ ಆಗಸ್ಟ್ ತಿಂಗಳು ಮುಗಿದು ಸೆಪ್ಟೆಂಬರ್ ಆರಂಭಗೊಂಡಿದೆ. ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಕೂಡ ಅನೇಕ ನಿಯಮಗಳ ಬದಲಾವಣೆಯ ಬಗ್ಗೆ ಈಗಾಗಲೇ ಮಾಹಿತಿ ಹೊರಬಿದ್ದಿದೆ.
ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಮಾಡುವ ಮುನ್ನ ಬದಲಾಗಿರುವ ನಿಯಮದ ಮಾಹಿತಿ ತಿಳಿಯುವುದು ಉತ್ತಮ. ಸೆಪ್ಟೆಂಬರ್ ತಿಂಗಳು ಕೂಡ ಜನರ ಜೇಬಿಗೆ ಬಾರಿ ಪ್ರಮಾಣದಲ್ಲಿ ಹೊರೆಯಾಗುವ ಸಾಧ್ಯತೆ ಇದೆ. ಇನ್ನು ಇಂದಿನಿಂದ ಹಣಕಾಸಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗಲಿದೆ.
ಇಂದಿನಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು
*ನೋಟು ವಿನಿಮಯಕ್ಕೆ ಕೊನೆಯ ದಿನಾಂಕ
ಸೆಪ್ಟೆಂಬರ್ 30 ರದ್ದಾಗಿರುವ 2,000 ರೂ ಮುಖಬೆಲೆಯ ನೋಟಿನ ಬದಲಾವಣೆ ಅಥವಾ ವಿನಿಮಯಕ್ಕೆ ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ 30 ರೋಳಗೆ ನಿಮ್ಮ ಬಳಿ ಇರುವ 2000 ರೂ ಮುಖಬೆಲೆಯ ನೋಟಿನ ಠೇವಣಿ ಅಥವಾ ವಿನಿಮಯ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಬಹುದು. ಸೆಪ್ಟೆಂಬರ್ 30 ರ ನಂತರ ನಿಮ್ಮ ಬಳಿ ಇರುವ ಪಿಂಕ್ 2000 ರೂ ನೋಟಿಗೆ ಯಾವುದೇ ಮೌಲ್ಯ ಇರುವುದಿಲ್ಲ.
*IDBI ಬ್ಯಾಂಕ್ ಅಮೃತ್ ಮಹೋತ್ಸವ FD ಯೋಜನೆ
ಇನ್ನು IDBI ಬ್ಯಾಂಕ್ ಜನರಿಗಾಗಿ ಅಮೃತ್ ಮಹೋತ್ಸವ FD ಯೋಜನೆಯನ್ನು ನೀಡಿದೆ. ಈ ಯೋಜನೆಯಡಿಯಲ್ಲಿ ಸಾಮಾನ್ಯ ನಾಗರಿಕರು 7.10 ರಷ್ಟು ಹಾಗೆಯೆ ಹಿರಿಯ ನಾಗರಿಕರು ಶೇಕಡಾ 7.60 ರಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ.
*ಟ್ರೇಡಿಂಗ್ & ಡಿಮ್ಯಾಟ್ ಅಕೌಂಟ್ ನಾಮಿನೇಷನ್ ಡೇಟ್
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಟ್ರೇಡಿಂಗ್ & ಡಿಮ್ಯಾಟ್ ಅಕೌಂಟ್ ಗೆ ನಾಮಿನೇಷನ್ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಸೆಪ್ಟೆಂಬರ್ 30 ನಾಮಿನೇಷನ್ ಸಲ್ಲಿಕೆಗೆ ಕೊಣೆಯ ದಿನಾಂಕವಾಗಿದೆ.
*ಉಚಿತ ಆಧಾರ್ ನವೀಕರಣ
ಇನ್ನು UIDAI ಜನರಿಗಾಗಿ ಉಚಿತ ಆಧಾರ್ ನವೀಕರಣವನ್ನು ನೀಡಿತ್ತು. ಸೆಪ್ಟೆಂಬರ್ 14, 2023 ರೊಳಗೆ ಆಧಾರ್ ನವೀಕರಣ ಬಾಕಿ ಇದ್ದವರು ಉಚಿತವಾಗಿ ನವೀಕರಿಸಿಕೊಳ್ಳಬಹುದಾಗಿದೆ. ಸೆಪ್ಟೆಂಬರ್ 14 ರ ನಂತರ 50 ರೂ. ಅನ್ನು ನವೀಕರಣಕ್ಕೆ ಪಾವತಿಸಬೇಕಾಗುತ್ತದೆ. ಉಚಿತ ನವೀಕರಣಕ್ಕೆ ಸೆಪ್ಟೆಂಬರ್ 14 ಕೊನೆಯ ದಿನಾಂಕವಾಗಿದೆ.
*SBI ವೀಕೇರ್ FD ಯೋಜನೆ
ಇನ್ನು ಹಿರಿಯ ನಾಗರೀಕರಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI ವೀಕೇರ್ FD ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರು 7.5 ರ ಬಡ್ಡಿದರವನ್ನು ಪಡೆಯಬಹುದು. ಇನ್ನು ಸೆಪ್ಟೆಂಬರ್ 30 ಯೋಜನೆಯ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.