Court Order: ಪತಿ ಪತ್ನಿ ಇನ್ಮುಂದೆ ಈ ಕೆಲಸ ಮಾಡುವಂತಿಲ್ಲ, ನೇರವಾಗಿ ಜೈಲಿಗೆ ಕೋರ್ಟ್ ಆದೇಶ

ಪತಿ ಪತ್ನಿಯರು ಸಾಮಾಜಿಕ ಜಾಲತಾಣದಲ್ಲಿ ಈ ತಪ್ಪುಗಳನ್ನ ಮಾಡಿದರೆ ಶಿಕ್ಷೆ ಖಂಡಿತವಾಗಿ ಅನುಭವಿಸಬೇಕಾಗುತ್ತದೆ.

Children’s Photo Share In Social Media: ಇತ್ತೀಚಿನ ದಿನಗಳಲ್ಲಿ ಎಲ್ಲರು ಹೆಚ್ಚಾಗಿ ಸೋಶಿಯಲ್ ಮೀಡಿಯಾವನ್ನು (social Media) ಬಳಸುತ್ತಾರೆ. ಸೋಶಿಯಲ್ ಮೀಡಿಯಾದ ಮೂಲಕ ಅನೇಕ ಉಪಯುಕ್ತ ಮಾಹಿತಿ ಲಭಿಸುತ್ತದೆ. ಆದರೆ ಸೋಶಿಯಲ್ ಮೀಡಿಯಾ ಎಷ್ಟು ಉಪಯೋಗಕಾರಿ ಆಗಿರುತ್ತದೆಯೋ ಅಷ್ಟೇ ಅಪಾಯವನ್ನು ಕೂಡ ಉಂಟುಮಾಡುತ್ತದೆ.

ಸೋಶಿಯಲ್ ಮೀಡಿಯಾದ ಮೂಲಕ ಅನೇಕ ವಂಚನೆಯ ಪ್ರಕರಣಗಳು ನಡೆಯುತ್ತದೆ. ಇದೀಗ ಸಾಮಾಜಿಕ ಜಾಲತಾಣವನ್ನು ಬಳಸುವ ಪೋಷಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ತಪ್ಪನ್ನು ಮಾಡಿದರೆ ನೀವು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

Children's Photo Share In Social Media
Image Credit: Searchenginejournal

ಸಾಮಾಜಿಕ ಜಾಲತಾಣದಲ್ಲಿ ಈ ತಪ್ಪು ಮಾಡಬಾರದು
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಚಿಕ್ಕ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಜನಿಸಿದ ಮಗು ತಿಂಗಳು ಮುಗಿಯುತ್ತಿದಂತೆ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಇದೀಗ ಟ್ರೆಂಡಿಂಗ್ ನಲ್ಲಿದೆ.

ಆದರೆ ಕೆಲವರು ಮಕ್ಕಳ ಫೋಟೋವನ್ನು ಹಂಚಿಕೊಂಡರೆ ಇನ್ನು ಕೆಲ ಸೆಲೆಬ್ರೆಟಿಗಳು ತಮ್ಮ ಮಕ್ಕಳ ಫೋಟೋವನ್ನು ಮರೆಮಾಚುತ್ತಾರೆ. ತಮ್ಮ ಮಕ್ಕಳ ಮುಖವನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸುವುದಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯ ಕೆಲಸವಾಗಿದೆ. ಮಕ್ಕಳ ಫೋಟೋವನ್ನು ಹಂಚಿಕೊಳ್ಳುವುದು ಅಪಾಯಕಾರಿಯಾಗಿದೆ.

Children's Photo Share In Social Media
Image Credit: Marketingminds

ಪೋಷಕರು ಮಕ್ಕಳ ಫೋಟೋವನ್ನು ಹಂಚಿಕೊಳ್ಳುವಂತಿಲ್ಲ
ಇದೀಗ ಅಸ್ಸಾಂ ಪೊಲೀಸರು ಮಕ್ಕಳ ಫೋಟೋವನ್ನು ಹಂಚಿಕೊಳ್ಳದಂತೆ ಪೋಷಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾರೊಬ್ಬರ ಫೋಟೋವನ್ನು ಹಂಚಿಕೊಳ್ಳುವ ಮೊದಲು ಅವರ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಆದರೆ ಮಕ್ಕಳ ಫೋಟೋವನ್ನು ಹಂಚಿಕೊಳ್ಳುವ ಸಮಯದಲ್ಲಿ ಪೋಷಕರು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

Join Nadunudi News WhatsApp Group

ಆದರೆ ಅಸ್ಸಾಂ ಪೊಲೀಸರು ಇದನ್ನು ತಪ್ಪು ಎಂದು ಪರಿಗಣಿಸುತ್ತಾರೆ. ಏಕೆಂದರೆ ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಮಾಹಿತಿ ಮತ್ತು ಫೋಟೋಗಳನ್ನು ಹಂಚಿಕೊಳ್ಳುವುದು ಅನೇಕ ರೀತಿಯಲ್ಲಿ ಅಪಾಯವನ್ನು ಉಂಟುಮಾಡುತ್ತದೆ. ಈ ಕಾರಣಕ್ಕಾಗಿಯೇ ಅಸ್ಸಾಂ ಪೊಲೀಸರು ವಿಶೇಷ ಅಭಿಯಾನ ನಡೆಸುವ ಮೂಲಕ ಪೋಷಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಹೀಗಾಗಿ ನೀವು ನಿಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಕ್ಕಿಂತ ಮರೆಮಾಚುವುದೇ ಉತ್ತಮ.ಇನ್ನು ಸುದ್ದಿಯನ್ನ ನೋಡಿದ ಕರ್ನಾಟಕದ ಜಾಣರು ನಮ್ಮ ರಾಜ್ಯದಲ್ಲಿ ಕೂಡ ಸರ್ಕಾರ ಈ ನಿಯಮವನ್ನ ಜಾರಿಗೆ ತರಬೇಕು ಎಂದು ಅಭಿಪ್ರಾಯವನ್ನ ಹೊರಹಾಕಿದ್ದಾರೆ.

Join Nadunudi News WhatsApp Group