Ration Rice: ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ದೇಶದಲ್ಲಿ ಜಾರಿಗೆ ಬರಲಿದೆ ದೊಡ್ಡ ಯೋಜನೆ.
ರೇಷನ್ ಕಾರ್ಡ್ ಇದ್ದವರಿಗೆ ಸರ್ವರ್ಧಿಕ ಅಕ್ಕಿ ವಿತರಣೆ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ.
Ration Card Food Supply: ಕೇಂದ್ರ ಸರ್ಕಾರವು (Central Government) ದೇಶದೆಲ್ಲೆಡೆ ಜನಸಾಮಾನ್ಯರಿಗಾಗಿ ಉಚಿತ ಪಡಿತರ ವಿತರಣೆ ನೀಡುತ್ತಿದೆ. ದೇಶದ ಅದೆಷ್ಟೋ ಬಡ ಜನರು ಈ ಉಚಿತ ಪಡಿತರ ವಿತರಣೆಯಿಂದ ಲಾಭವನ್ನು ಪಡೆಯುತ್ತಿದ್ದಾರೆ.
ಇನ್ನು ಪಡಿತರ ವಿತರಣೆಯ ವೇಳೆ ಜನಸಾಮಾನ್ಯರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಉಚಿತ ಪಡಿತರ ವಿತರಣೆಯ ವೇಳೆ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ನೀವು ಪಡಿತರ ಚೀಟಿದಾರರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಕೊಳ್ಳಿ.
ಪಡಿತರ ವಿತರಣೆಯಲ್ಲಿ ಹೊಸ ನಿಯಮ
ಉಚಿತ ಪಡಿತರ ವಿತರಣಾ ಯೋಜನೆಯ ಅಡಿಯಲ್ಲಿ ಸಾಕಷ್ಟು ಜನರು ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಪಡಿತರ ವಿತರ ವ್ಯವಸ್ಥೆಯಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹೊಸ ನಿಯಮವು ಏಪ್ರಿಲ್ 20 ರಿಂದ ಜಾರಿಗೆ ಬಂದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಉತ್ತಮ ಪಡಿತರನ್ನು ನೀಡುವುದು ಸರ್ಕಾರದ ಗುರಿಯಾಗಿದೆ.
ಸಾರವರ್ದಿತ ಅಕ್ಕಿ ವಿತರಣೆ
ಸಾರವರ್ದಿತ ಅಕ್ಕಿಯನ್ನು ದೇಶದಾದ್ಯಂತ ಜಾರಿಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಹೊಸ ನಿಯಮವು 269 ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಇನ್ನು ಮಾರ್ಚ್ 2024 ರೊಳಗೆ ಇಡೀ ದೇಶದಾದ್ಯಂತ ಸಾರವರ್ದಿತ ಅಕ್ಕಿ ವಿತರಣಾ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.
ಇನ್ನು ರಾಜಸ್ಥಾನದ (Rajasthan) ಹಲವು ಜಿಲ್ಲೆಗಳಲ್ಲಿ ಈ ಸಾರವರ್ದಿತ ಅಕ್ಕಿ ವಿತರಣಾ ವ್ಯವಸ್ಥೆ ಜಾರಿಗೆ ಬಂದಿದೆ. ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ರಕ್ತಹೀನತೆಯ ಸಮಸ್ಯೆಯನ್ನು ನೀಗಿಸಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.
ಮೈಕ್ರೋನ್ಯೂಟ್ರಿಯಂಟ್ಗಳನ್ನು ಹೊಂದಿರುವ ಸಾರವರ್ದಿತಾ ಅಕ್ಕಿಯಿಂದಾಗಿ ರಕ್ತ ಹೀನತೆಯ ಸಮಸ್ಯೆ ದೂರವಾಗುತ್ತದೆ. ದೇಶದಲ್ಲಿ ಸುಮಾರು 735 ಕ್ಕೂ ಹೆಚ್ಚು ಜಿಲ್ಲೆಗಳಿವೆ. ಸಾರವರ್ದಿತ ಅಕ್ಕಿ ವಿತರಣೆಯು 269 ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾರಾಜ್ಯ ಜಿಲ್ಲೆಗಳಿಗೂ ಈ ಸಾರವರ್ದಿತ ಅಕ್ಕಿ ವಿತರಣಾ ವ್ಯವಸ್ಥೆ ಜಾರಿಗೆ ಬರಲಿದೆ.