License Renewal: ವಾಹನ ಮಾಲೀಕರಿಗೆ ಮೇ 1 ರಿಂದ ಹೊಸ ನಿಯಮ, ಪರವಾನಿಗೆ ಶುಲ್ಕ ಕಟ್ಟುವಂತಿಲ್ಲ.

ಮೇ 1 ನೇ ತಾರೀಕಿನಿಂದ ವಾಹನ ಮಾಲೀಕರು ಪರವಾನಿಗೆ ನವೀಕರಣಕ್ಕೆ ಶುಲ್ಕ ಕಟ್ಟುವ ಅಗತ್ಯ ಇಲ್ಲ.

Vehicle License Renewal Fee: ಇದೀಗ ವಾಹನ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಮೇ 1 ರಿಂದ ಬ್ಯಾಟರಿ ಎಥನಾಲ್ ಇಂಧನ ಮೂಲಕ ಚಲಿಸುವ ಪ್ರವಾಸಿ ವಾಹನಗಳು ಪರವಾನಗಿ ಪಡೆಯಲು ಮತ್ತು ನವೀಕರಣಕ್ಕಾಗಿ ಶುಲ್ಕ ಪಾವತಿಸಬೇಕಿಲ್ಲ.

ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು ಪ್ರವಾಸಿ ವಾಹನಗಳಿಗೆ ಪರವಾನಗಿ ವಿತರಣೆ ಸುಗಮಗೊಳಿಸಲು ಹಾಗು ಪ್ರವಾಸಿ ವಾಹನ ನಿರ್ವಾಹಕರ ತೊಂದರೆ ಕಡಿಮೆ ಮಾಡಲು ಕ್ರಮ ಕೈಗೊಂಡಿದೆ.

Vehicle License Renewal Fee
Imageg Source: Oneindia kannada

ರಸ್ತೆ ಸಾರಿಗೆ ಸಚಿವಾಲಯದ ಹೊಸ ನಿರ್ಧಾರ
ಅರ್ಜಿ ಸಲ್ಲಿಸಿದ ದಿನಾಂಕದಿಂದ 7 ದಿನಗಳ ಒಳಗೆ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ವಾಹನಗಳಿಗೆ ಪರ್ಮಿಟ್ ಗಳನ್ನೂ ನೀಡುವುದನ್ನು ಕೂಡ ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸಾರಿಗೆ ಪ್ರಾಧಿಕಾರಿಗಳು ಅರ್ಜಿ ಸ್ವೀಕರಿಸಿದ 7 ದಿನಗಳಲ್ಲಿ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ನೀಡಬೇಕಿದೆ. ಸದ್ಯ ವಾಹನಗಳಿಗೆ ನೀಡಲಾಗುವ ಪರ್ಮಿಟ್ ನಲ್ಲಿ ಮೇ 1 ನೇ ತಾರೀಕಿನಿಂದ ಹೊಸ ನಿಯಮ ಜಾರಿಗೆ ಬರಲಿದೆ.

Vehicle License Renewal Fee
Image Source: India Today

ಆಲ್ ಇಂಡಿಯಾ ಪರ್ಮಿಟ್
ಇದುವರೆಗೆ ಆಲ್ ಇಂಡಿಯಾ ಪರ್ಮಿಟ್ ಗಾಗಿ ಟ್ಯಾಕ್ಸಿಗಳಿಗೆ ವಾರ್ಷಿಕ 20,000 ರೂಪಾಯಿ ಅಥವಾ ತ್ರೈಮಾಸಿಕವಾಗಿ 6,000 ರೂಪಾಯಿ ಶುಲ್ಕ ಕಟ್ಟಬೇಕಿತ್ತು. 5 ರಿಂದ 9 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯದ ಪ್ರವಾಸಿ ವಾಹನಗಳಿಗೆ ವಾರ್ಷಿಕ 30,000 ಅಥವಾ ತ್ರೈಮಾಸಿಕವಾಗಿ 9,000 ರೂಪಾಯಿ ಶುಲ್ಕ ಪಾವತಿಸಬೇಕಿತ್ತು. ಕೆಲವು ಪರವಾನಿಗೆಯ ರಿಯಾಯಿತಿ ನೀಡಲಾಗಿದೆ.

ಸದ್ಯ ಮೇ 1 ನೇ ತಾರೀಕಿನಿಂದ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರತಿ ತಿಂಗಳು ಮತ್ತು ತ್ರೈಮಾಸಿಕವಾಗಿ ಪರ್ಮಿಟ್ ತೆಗೆದುಕೊಳ್ಳುವವರಿಗೆ ಈ ಹೊಸ ನಿಯಮ ಬಹಳ ಸಹಕಾರಿ ಕೂಡ ಆಗಲಿದೆ.

Join Nadunudi News WhatsApp Group

23 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಸಾಮರ್ಥ್ಯದ ಬಸ್ಸ ಗಳು ವಾರ್ಷಿಕ ಶುಲ್ಕ ಮೂರೂ ಲಕ್ಷ ಅಥವಾ ತ್ರೈಮಾಸಿಕ ಶುಲ್ಕ 90,000 ರೂಪಾಯಿ ಪಾವತಿಸಬೇಕಿತ್ತು. ಮೇ 1 ನೇ ತಾರೀಕಿನಿಂದ ವಾಹನ ಮಾಲೀಕರು ವಾಹನಗಳ ಪರ್ಮಿಟ್ ಗಾಗಿ ಕಟ್ಟುವ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ನಿಯಮ ಜಾರಿಗೆ ಬಂದರೆ ಸಾಕಷ್ಟು ವಾಹನ ಮಾಲೀಕರಿಗೆ ಸಹಕಾರಿ ಆಗಲಿದೆ.

Vehicle License Renewal Fee
Image Courtesy: India Today

 

Join Nadunudi News WhatsApp Group