K.H Muniyappa: ವೈಟ್ ಬೋರ್ಡ್ ಕಾರ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ಇನ್ನೊಂದು ಘೋಷಣೆ.
ಕಾರ್ ಹೊಂದಿರುವವರಿಗೆ ಇನ್ನೊಂದು ಘೋಷಣೆ ಮಾಡಿದ ರಾಜ್ಯ ಸರ್ಕಾರ
New Rules For White Board Car: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಹಲವು ಘೋಷಣೆಗಳನ್ನ ಮಾಡಿದ್ದು ಈಗಾಗಲೇ ಕೆಲವು ಯೋಜನೆಯನ್ನ ರಾಜ್ಯದಲ್ಲಿ ಜಾರಿಗೆ ತಂದಿದೆ. ಹೌದು ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಮತ್ತು ಯುವ ನಿಧಿ ಯೋಜನೆಯನ್ನ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಈಗ BPL ಕಾರ್ಡುದಾರರಿಗೆ ಇನ್ನೊಂದು ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು.
ಹೌದು BPL ಕಾರ್ಡ್ ಹೊಂದಿರುವ ಬಡಜನರಿಗೆ ಈಗಾಗಲೇ ಕೆಲವು ಯೋಜನೆಯನ್ನ ಪರಿಚಯ ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ಇನ್ನೊಂದು ಘೋಷಣೆಯನ್ನ ಮಾಡಿದ್ದು ಇದು ಜನರ ಸಂತಸಕ್ಕೆ ಕಾರಣವಾಗಿದೆ.
ರದ್ದಾಗಲಿದೆ ಇಂತವರ ರೇಷನ್ ಕಾರ್ಡ್
ಹೌದು ರಾಜ್ಯದಲ್ಲಿ ಸಾಕಷ್ಟು ಅನರ್ಹರು ಕೂಡ ಬಡವರ ರೇಷನ್ ಧಾನ್ಯಗಳನ್ನ ಪಡೆದುಕೊಳ್ಳುತ್ತಿದ್ದು ಅಂತವರ ರೇಷನ್ ಕಾರ್ಡುಗಳನ್ನ ರದ್ದು ಮಾಡಲು ಈಗ ಸರ್ಕಾರ ಮುಂದಾಗಿದೆ ಎಂದು ಹೇಳಬಹುದು. ಈಗಾಗಲೇ ರಾಜ್ಯದಲ್ಲಿ ಕೆಲವು ರೇಷನ್ ಕಾರ್ಡ್ ನಿಯಮಗಳನ್ನ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಅನರ್ಹರ ಪಟ್ಟಿಯನ್ನ ಕೂಡ ಬಿಡುಗಡೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಕಾರ್ ಹೊಂದಿರುವವರ ರೇಷನ್ ಕಾರ್ಡ್ ರದ್ದು
ಹೌದು ಸದ್ಯ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಾರ್ ಹೊಂದಿರುವ ಕುಟುಂಬದವರ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗುತ್ತದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ಇದರ ಬಗ್ಗೆ ಈಗ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ ವೈಟ್ ಬೋರ್ಡ್ ಹೊಂದಿರುವವರ ರೇಷನ್ ಕಾರ್ಡ್ ರದ್ದು ಮಾಡಲಾಗುವುದಿಲ್ಲ ಎಂದು ಘೋಷಣೆಯನ್ನ ಮಾಡಿದೆ.
ಅದೇ ರೀತಿಯಲ್ಲಿ ಯಲ್ಲೋ ಬೋರ್ಡ್ ಕಾರುಗಳನ್ನ ವ್ಯವಹಾರ ಉದ್ದೇಶದಿಂದ ಬಳಸಲಾಗುತ್ತದೆ ಈ ಕಾರಣಕ್ಕೆ ಅಂತಹ ಕುಟುಂಬಗಳ BPL ರೇಷನ್ ಕಾರ್ಡ್ ರದ್ದು ಮಾಡುವ ತೀರ್ಮಾನ ರಾಜ್ಯ ಸರ್ಕಾರ ಮಾಡಿದೆ ಎಂದು ಹೇಳಲಾಗುತ್ತಿದೆ.
ಹೊಸ ರೇಷನ್ ಕಾರ್ಡ್ ವಿತರಿಸಲು ನಿರ್ಧಾರ ಮಾಡಿದ ಸರ್ಕಾರ
ಆದ್ಯ ರಾಜ್ಯ ಸರ್ಕಾರ ಜನರಿಗೆ ಹೊಸ BPL ಮತ್ತು APL ರೇಷನ್ ಕಾರ್ಡುಗಳನ್ನ ವಿತರಣೆ ಮಾಡಲು ತೀರ್ಮಾನವನ್ನ ಮಾಡಿದೆ. ಈಗಾಗಲೇ ಲಕ್ಷಾಂತರ ಜನರು ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿಯನ್ನ ಸಲ್ಲಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಅವರಿಗೆ ಹೊಸ ರೇಷನ್ ಕಾರ್ಡುಗಳನ್ನ ವಿತರಣೆ ಮಾಡಲಾಗುತ್ತದೆ ಎಂದು ಸಚಿವರಾದ ಕೆ ಎಚ್ ಮುನಿಯಪ್ಪ ಅವರು ಹೇಳಿದ್ದಾರೆ. ಅದೇ ರೀತಿಯಲ್ಲಿ ವೈಟ್ ಬೋರ್ಡ್ ಕಾರ್ ಹೊಂದಿರುವ ಜನರ ರೇಷನ್ ಕಾರ್ಡ್ ರದ್ದು ಮಾಡುವ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸರ್ಕಾರ ಘೋಷಣೆಯನ್ನ ಮಾಡಿರುತ್ತದೆ.