New Rule: ಜೂಲೈ ಅಂತ್ಯದ ಒಳಗೆ ಮಾಡಿ ಈ 4 ಕೆಲಸ, ಇಲ್ಲವಾದರೆ ಕಟ್ಟಬೇಕು ದೊಡ್ಡ ಮೊತ್ತದ ದಂಡ.

ಜೂಲೈ ಅಂತ್ಯದ ಒಳಗೆ ಈ ಕೆಲಸಗಳನ್ನ ಮಾಡದೆ ಇದ್ದರೆ ಅಗತ್ಯವಾಗಿ ದಂಡವನ್ನ ಕಟ್ಟಬೇಕು.

New Rule In India: ಇನ್ನು 2023 ರ ಪ್ರತಿ ತಿಂಗಳು ಮುಗಿಯುತ್ತಿದ್ದಂತೆ ಹೊಸ ಹೊಸ ನಿಯಮಗಳು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಆರಂಭದಿಂದ ಸಾಕಷ್ಟು ನಿಯಮಗಳು ಬದಲಾಗಿವೆ. ಇನ್ನೇನು ಜೂನ್ ತಿಂಗಳು ಮುಗಿದು ಜುಲೈ ಆರಂಭಗೊಳ್ಳಲಿದೆ. ಜುಲೈ ತಿಂಗಳ ಆರಂಭದಲ್ಲಿ ಕೂಡ ಅನೇಕ ನಿಯಮಗಳು ಬದಲಾಗಲಿದೆ.

ಜುಲೈ ತಿಂಗಳ ಆರಂಭಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ. ಇನ್ನು ಜುಲೈ ತಿಂಗಳಿನಲ್ಲಿ ಸಾಕಷ್ಟು ಕೆಲಸಗಳು ಪೂರ್ಣಗೊಳಿಕೊಳ್ಳಬೇಕು. ಜುಲೈ ಅಂತ್ಯದವಳಗೆ ಈ ನಾಲ್ಕು ಕೆಲಸಗಳನ್ನು ಮಾಡುವುದು ಅಗತ್ಯವಾಗಿದೆ. ಜುಲೈ ಮುಕ್ತಾಯದ ಒಳಗೆ ನೀವು ಈ ನಾಲ್ಕು ಕೆಲಸಗಳನ್ನು ಮಾಡದೆ ಇದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.

Complete these four tasks by the end of June
Image Credit: Navi

ಜುಲೈ ಅಂತ್ಯದ ಒಳಗೆ ಈ ನಾಲ್ಕು ಕೆಲಸಗಳನ್ನು ಪೂರ್ಣಗೊಳಿಸಿ
*ಮುಂಗಡ ತೆರಿಗೆ ಪಾವತಿ ಅಗತ್ಯ
ಸ್ವಂತ ವ್ಯವಹಾರ ಮಾಡುತ್ತಿರುವವರು ನಿಮ್ಮ ತೆರಿಗೆಯು 10 ಸಾವಿರ ರೂ. ಗಿಂತ ಹೆಚ್ಚಿದ್ದರೆ ಅದನ್ನು ನಿಗದಿತ ಸಮಯದೊಳಗೆ ತುಂಬುವುದು ಮುಖ್ಯ. ನಿಗದಿತ ಸಮಯದೊಳಗೆ ಮುಂಗಡ ಪಾವತಿಯನ್ನು ಮಾಡದಿದ್ದರೆ ಮೊದಲ ಮೂರು ಕಂತುಗಳಲ್ಲಿ 3 % ಮತ್ತು ಕೊನೆಯ ಕಂತುಗಳಲ್ಲಿ 1 % ದರದಲ್ಲಿ ಒಟ್ಟು ಮುಂಗಡ ತೆರಿಗೆ ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

*ಪಾನ್ ಆಧಾರ್ ಲಿಂಕ್ ಗೆ ಕೊನೆಯ ದಿನಾಂಕ
ಆಧಾರ್ ಪಾನ್ ಲಿಂಕ್ ಗೆ ಜೂನ್ 30 ಕೊನೆಯ ದಿನಾಂಕವಾಗಿದೆ. 2023 ರ ಜುಲೈ 1 ರಿಂದ ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಇದರ ಪರಿಣಾಮ ಪ್ಯಾನ್ ದಾಖಲೆ ಅಗತ್ಯವಿರುವ ರಿಫಂಡ್ ಗಳು ನೆರವೇರುವುದಿಲ್ಲ. ಟಿಡಿಎಸ್ ಮತ್ತು ಟಿಸಿಎಸ್ ಕಡಿತದ ಪ್ರಮಾಣ ಹೆಚ್ಚಲಿದೆ. ನಿಮಗೆ IT ರಿಟರ್ನ್ ಸಲ್ಲಿಕೆ ತಡವಾಗಿ ಹೆಚ್ಚಿನ ದಂಡ ಕಟ್ಟಬೇಕಾಗುತ್ತದೆ.

Complete these four tasks by the end of June
Image Credit: Businessinsider

*ಲಾಕರ್ ಒಪ್ಪಂದ ಕಡ್ಡಾಯ
ಜೂನ್ 30 ರಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ ಆಗಲಿದೆ. ಜೂನ್ 30 ರೊಳಗೆ ಪರಿಷ್ಕ್ರತ ಲಾಕರ್ ಒಪ್ಪಂದಕ್ಕೆ ಸಹಿ ಹಾಕಲು ಇಂಟರ್ನೆಟ್ ನಲ್ಲಿ ಲಾಕರ್ ಹೊಂದಿರುವವರಿಗೆ ಮನವಿ ಮಾಡಲಾಗಿದೆ. ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಗ್ರಾಹಕರು ಸಹಿ ಹಾಕುವಂತೆ ಬ್ಯಾಂಕ್ ಗ್ರಾಹಕರಿಗೆ ಸಲಹೆ ನೀಡುತ್ತಿದೆ. ಆರ್‌ಬಿಐ ಜೂನ್ 30 2023 ಅನ್ನು ಲಾಕರ್ ಒಪ್ಪಂದಕ್ಕಾಗಿ ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ.

Join Nadunudi News WhatsApp Group

*ವಿದೇಶಿಯ ಪ್ರಯಾಣ ದುಬಾರಿಯಾಗಲಿದೆ
ವಿದೇಶಿ ಪ್ರವಾಸಕ್ಕೆ ಹೋಗಲು ಬಯಸುವವರು ಪೊರೆಕ್ಸ್ ಕಾರ್ ನೊಂದಿಗೆ ಬುಕಿಂಗ್ ಮಾಡಲು ಜೂನ್ 30 ಕೊನೆಯ ದಿನಾಂಕವಾಗಿದೆ. ಸರ್ಕಾರವು ಎಲ್ಆರ್ ಎಸ್ ನಿಯಮದ ಅಡಿಯಲ್ಲಿ ವಿದೇಶಿ ರಾವಣಗಳಿಗೆ ತೆರಿಗೆ ದರವನ್ನು ಶೇ. 5 ರಿಂದ ಶೇ. 20 ರಷ್ಟು ಹೆಚ್ಚಿಸಿದೆ. ಈ ಕಾರಣದಿಂದ ಜುಲೈ 1 ರಿಂದ ವಿದೇಶಿ ಪ್ರಯಾಣದ ಟಿಕೆಟ್ ದುಬಾರಿಯಾಗಬಹುದು.

Complete these four tasks by the end of June
Image Credit: Economictimes

Join Nadunudi News WhatsApp Group