January Rules: ನಾಳೆಯಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು, ಜೇಬಿಗೆ ಕತ್ತರಿ ಜೊತೆಗೆ ದಂಡ ಖಚಿತ

ನಾಳೆಯಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು, ಜನರ ಮೇಲೆ ನೇರ ಪರಿಣಾಮ

New Rule From January 1st In india: 2024 ರ ಅದ್ದೂರಿ ಆರಂಭಕ್ಕಾಗಿ ಜನರು ಕಾಯುತ್ತಿದ್ದಾರೆ ಹೊಸ ವರ್ಷದ ಆರಂಭಕ್ಕೆ ಇನ್ನು ಕೇವಲ ಒಂದೇ ಒಂದು ದಿನ ಮಾತ್ರ ಭಾಕಿ ಇದೆ. ಇಂದಿನ ದಿನ ಮುಗಿದರೆ 2023 ವರ್ಷಕ್ಕೆ ವಿದಾಯ ಹೇಳಿ 2024 ಗೆ ಎಂಟ್ರಿ ಕೊಡಬೇಕಿದೆ. ಇನ್ನು ಹೊಸ ವರ್ಷದಲ್ಲಿ ಅನೇಕ ನಿಯಮಗಳು ಕೂಡ ಬದಲಾಗುತ್ತದೆ.

ಈ ವರ್ಷದ ಅಂತ್ಯದೊಳಗೆ ಮುಗಿಸಿಕೊಳ್ಳಬೇಕಾದ ಸಾಕಷ್ಟು ಕೆಲಸಗಳಿವೆ. ಜನವರಿ 1  2024 ರಿಂದ ಅನೇಕ ನಿಯಮಗಳು ಬದಲಾಗುತ್ತದೆ. ಈ ವರ್ಷಾಂತ್ಯದಲ್ಲಿ ಕೆಲಸಗಳು ಪೂರ್ಣಗೊಳ್ಳದಿದ್ದರೆ ಹೊಸ ನಿಯಮಗಳು ಜನರಿಗೆ ಆರ್ಥಿಕ ಹೊರೆಯನ್ನು ನೀಡಬಹುದು. ಇದೀಗ ನಾವು ಜನವರಿ 1 ರಿಂದ ಬದಲಾಗುವ ನಿಯಾಮಗಳ ಬಗ್ಗೆ ಮಾಹಿತಿ ತಿಳಿಯೋಣ.

new rules from year in india
Image Credit: Original Source

ನಾಳೆಯಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು
1. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಹೊಸ ನಿಯಮ
ಕೆನಡಾದ ಸರ್ಕಾರವು ಜನವರಿ 1, 2024 ರಿಂದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ವಿದೇಶಿ ವಿದ್ಯಾರ್ಥಿಗಳ ವೆಚ್ಚವು ದುಬಾರಿಯಾಗಲಿದೆ. ಕೆನಡಾದಲ್ಲಿ ಅಧ್ಯಯನ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಬಳಿ 20,635 ಡಾಲರ್ (ಅಂದಾಜು ರೂ. 13 ಲಕ್ಷ) ಇದೆ ಎಂದು ತೋರಿಸಬೇಕು. ಈ ಹಿಂದೆ 10000 ಡಾಲರ್ ಇದ್ದ ಮೊತ್ತವನ್ನ ಈಗ 20000 ಕ್ಕೆ ಏರಿಕೆ ಮಾಡಲಾಗಿದೆ.

2. UPI ID ನಿಷ್ಕ್ರಿಯ
ಸದ್ಯ National Payment Corporation Of India ಇದೀಗ UPI ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ವರ್ಷಗಳಿಂದ ಬಳಸದೆ ಇರುವ UPI ID ಗಳನ್ನೂ ಸ್ಥಗಿತಗೊಳಿಸಲು NPCI ನಿರ್ಧಾರ ಕೈಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳಿಲ್ಲದ UPI ID ಗಳನ್ನೂ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದು ವರ್ಷದಲ್ಲಿ ಯಾವುದೇ ವಹಿವಾಟು ಕಂಡುಬರದಿದ್ದರೆ ಅಂತಹ UPI ID ಯನ್ನು December 31 ರ ನಂತರದ ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ.

upi payment rules changes january 2024
Image Credit: Original Source

3. ವಿಮೆ ಪರಿಷ್ಕೃತ ಮಾಹಿತಿ
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ನಿಯಮಗಳನ್ನು ಸ್ಪಷ್ಟಪಡಿಸಲು ಗ್ರಾಹಕರ ಮಾಹಿತಿ ಪಟ್ಟಿಯನ್ನು ಪರಿಷ್ಕರಿಸಿದೆ ಮತ್ತು ಜನವರಿ 1 ರಿಂದ ಜಾರಿಗೆ ಬರುವಂತೆ ಹೊಸ ವಿವರಗಳನ್ನು ಸಲ್ಲಿಸಲು ಪಾಲಿಸಿದಾರರಿಗೆ ಅವಕಾಶ ನೀಡಿದೆ.

Join Nadunudi News WhatsApp Group

4. ಬ್ಯಾಂಕ್ ಲಾಕರ್ ಒಪ್ಪಂದದ ನಿಯಮ
ಹೆಚ್ಚಿನ ಎಲ್ಲಾ ಬ್ಯಾಂಕುಗಳು ಗ್ರಾಹಕರ ಹಕ್ಕುಗಳನ್ನು ಒಳಗೊಂಡಿರುವ ಪರಿಷ್ಕೃತ Bank Locker Agreement ನೀಡಿವೆ. ಬ್ಯಾಂಕ್ ಲಾಕರ್ ಹೊಂದಿರುವ ಗ್ರಾಹಕರು ಅದರಲ್ಲಿ ಸಹಿ ಮಾಡಬೇಕಾಗುತ್ತದೆ. 31 ಡಿಸೆಂಬರ್ 2023 ರೊಳಗೆ ಬ್ಯಾಂಕ್ ಲಾಕರ್ ಹೊಂದಿರುವವರು ಹೊಸ ಒಪ್ಪಂದಕ್ಕೆ ಸಹಿ ಹಾಕುವಂತೆ RBI ಎಲ್ಲಾ ಬ್ಯಾಂಕ್‌ ಗಳಿಗೆ ಆದೇಶಿಸಿದೆ. ಬ್ಯಾಂಕ್‌ ಗಳು ಅಸ್ತಿತ್ವದಲ್ಲಿರುವ ಲಾಕರ್ ಗ್ರಾಹಕರೊಂದಿಗೆ ತಮ್ಮ ಲಾಕರ್ ಒಪ್ಪಂದಗಳನ್ನು ಜನವರಿ 1, 2024 ರ ವರೆಗೆ ನವೀಕರಿಸುತ್ತವೆ.

bank locker rules changes in india
Image Credit: Original Source

5. Income Tax Return
ಆದಾಯ ತೆರಿಗೆಯನ್ನು ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2023, ಆದರೆ ನಿಗದಿತ ದಿನಾಂಕದೊಳಗೆ ಈ ಕೆಲಸವನ್ನು ಮಾಡದವರು, ಅದನ್ನು ಮಾಡಲು ಡಿಸೆಂಬರ್ 31 ರ ವರೆಗೆ ಅವಕಾಶವಿದೆ. ನವೀಕರಿಸಿದ ITR ಅನ್ನು ಈ ಗಡುವಿನವರೆಗೆ ವಿಳಂಬ ಶುಲ್ಕದೊಂದಿಗೆ ಸಲ್ಲಿಸಬಹುದು. ಇನ್ನು ತೆರಿಗೆದಾರರ ಆದಾಯ 5,00,000 ರೂ.ಗಿಂತ ಹೆಚ್ಚಿದ್ದರೆ, 5,000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಆದಾಯವು 5,00,000 ರೂ.ಗಿಂತ ಕಡಿಮೆ ಇದ್ದರೆ 1000 ರೂ. ದಂಡವನ್ನು ಪಾವತಿಸಬೇಕು.

6. ಹೊಸ ಸಿಮ್ ಕಾರ್ಡ್ ಖರೀದಿಗೆ ಹೊಸ ರೂಲ್ಸ್
ಹೊಸ ವರ್ಷದಿಂದ ಅಂದರೆ ಜನವರಿ 1, 2024 ರಿಂದ ಸಿಮ್ ಕಾರ್ಡ್‌ ಗಳನ್ನು ಖರೀದಿಸುವ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗುತ್ತದೆ. ಗ್ರಾಹಕರು ಇ- SIM ಕಾರ್ಡ್ ಪಡೆಯಲು KYC ಮತ್ತು ಈಗ ಕಾಗದ ಆಧಾರಿತ KYC ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಹೊಸ ನಿಯಮದ ಅಡಿಯಲ್ಲಿ ಸಿಮ್ ಕಾರ್ಡ್ ಪಡೆಯಲು, ನೀವು ಇ-ಕೆವೈಸಿ ಜೊತೆಗೆ ಪೇಪರ್ ಆಧಾರಿತ ಕೆವೈಸಿ ಮಾಡಬಹುದಿತ್ತು, ಆದರೆ ಈಗ ಅದನ್ನು ಜನವರಿ 1 ರಿಂದ ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ.

sim card rules changes 2024 in india
Image Credit: Original Source

7. ಕಾರುಗಳ ಬೆಲೆಯಲ್ಲಿ ಬದಲಾವಣೆ
ಜನಪ್ರಿಯ ಕಾರ್ ತಯಾರಕ ಕಂಪೆನಿಯಾದ Maruti Suzuki, Tata Motors, Hyundai, Mercedes and Audi ಕಂಪನಿಗಳು ತನ್ನ ಮಾದರಿಯ ಕಾರ್ ಗಳ ಬೆಲೆಯನ್ನು ಏರಿಕೆ ಮಾಡಲು ನಿರ್ಧರಿಸಿದೆ. ಜನವರಿ 1 ರಿಂದ ಈ ಎಲ್ಲ ಕಂಪನಿಗಳ ಕಾರ್ ದರ ಏರಿಕೆಯಾಗಲಿದೆ.

Join Nadunudi News WhatsApp Group