5 New Rules 2026: ದೇಶದಲ್ಲಿ ಪ್ರತಿ ವರ್ಷ ಆರಂಭದ ಜೊತೆಗೆ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತದೆ. ಇನ್ನೇನು ಕೆಲವೇ ದಿನದಲ್ಲಿ 2025 ಮುಗಿಯಲಿದ್ದು 2026 ರ ವರ್ಷ ಆರಂಭ ಆಗಲಿದೆ. ಸದ್ಯ 2026 ಜನವರಿ 1 ರಿಂದ ದೇಶದಲ್ಲಿ ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಇದು ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ. ಹಾಗಾದರೆ ನಾವೀಗ 2026 ರ ಆರಂಭದಲ್ಲಿ ಯಾವೆಲ್ಲ ಹೊಸ ನಿಯಮಗಳು ಜಾರಿಗೆ ಬರುತ್ತಿದೆ ಅನ್ನುವ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಯೋಣ.
2026 ರ ಆರಂಭದಲ್ಲಿ ಜಾರಿಗೆ ಬರುತ್ತಿರುವ 5 ಹೊಸ ನಿಯಮಗಳು
ದ್ವಿಚಕ್ರ ವಾಹನಗಳಿಗೆ ABS ಕಡ್ಡಾಯ
ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ. 2026 ರಿಂದ ಎಲ್ಲಾ ಹೊಸ ದ್ವಿಚಕ್ರ ವಾಹನಗಳಿಗೆ Anti-ಲಾಕ್ ಬ್ರೇಕಿಂಗ್ ಸಿಸ್ಟಂ (ABS) ಕಡ್ಡಾಯಗೊಳಿಸಲಾಗಿದೆ. ಇದು ಎಲ್ಲ ದ್ವಿಚಕ್ರ ವಾಹನಗಳಿಗೆ ಅನ್ವಯವಾಗುತ್ತದೆ. ಈ ನಿಯಮದಿಂದ ರಸ್ತೆ ಅಪಘಾತಗಳು ಕಡಿಮೆಯಾಗುವ ನಿರೀಕ್ಷೆ ಇದೆ, ಆದರೆ 2026 ರಿಂದ ಹೊಸ ವಾಹನಗಳ ಬೆಲೆ ಸ್ವಲ್ಪ ಏರಿಕೆಯಾಗಬಹುದು.
ಆಧಾರ್ ಪಾನ್ ಲಿಂಕ್ ಕಡ್ಡಾಯ
ಜನವರು 1,2026 ರಿಂದ ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗದಿದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಅಂದರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ. ಈಗಾಗಲೇ ಹೆಚ್ಚಿನ ಜನರು ಲಿಂಕ್ ಮಾಡಿಸಿಕೊಂಡಿದ್ದಾರೆ. ಪಾನ್ ಕಾರ್ಡ್ ಪ್ರಮುಖವಾದ ವ್ಯಾವಹಾರಿಕ ದಾಖಲೆಯಾಗಿದೆ ಮತ್ತು ಆಧಾರ್ ಕಾರ್ಡ್ ದೇಶದ ಪ್ರಮುಖವಾದ ಗುರುತಿನ ಚೀಟಿಯಾಗಿದೆ. ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯವಾದರೆ ನೀವು ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಪಾನ್ ಕಾರ್ಡ್ ನಿಷ್ಕ್ರಿಯವಾದರೆ 1000 ರೂ ದಂಡ ಪಾವತಿ ಮಾಡಬೇಕಾಗುತ್ತದೆ.
ಆಧಾರ್ ಕಾರ್ಡ್ ವಿನ್ಯಾಸದಲ್ಲಿ ಬದಲಾವಣೆ
ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ವಿನ್ಯಾಸದಲ್ಲಿ ಬದಲಾವಣೆ ಆಗಲಿದೆ. ಹೊಸ ಆಧಾರ್ ಕಾರ್ಡ್ ನಲ್ಲಿ QR ಕೋಡ್ ಅನ್ನು ಅಳವಡಿಸಲಾಗಿರುತ್ತದೆ. ಹಳೆಯ ಆಧಾರ್ ಕಾರ್ಡ್ ಗಳು ಚಾಲ್ತಿಯಲ್ಲಿ ಇರುತ್ತದೆ. 2026 ಜೂನ್ ವರೆಗೆ ಬದಲಾವಣೆ ಅವಕಾಶ ಇರುತ್ತದೆ. ವಯಕ್ತಿಕ ಮಾಹಿತಿಯ ಸುರಕ್ಷತೆಯ ದೃಷ್ಟಿಯಿಂದ ಈ ಡಿಜಿಟಲ್ ನಿಯಮವನ್ನು ಜಾರಿಗೆ ತರಲಾಗಿದೆ. ಜನರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದರ ಮೂಲಕ ಹೊಸ QR ಕೋಡ್ ಇರುವ ಆಧಾರ್ ಕಾರ್ಡ್ ಪಡೆದುಕೊಳ್ಳಬಹುದು.
ಬ್ಯಾಂಕಿಂಗ್ ಮತ್ತು UPI ನಿಯಮದಲ್ಲಿ ಬದಲಾವಣೆ
2026 ರ ಜನವರಿಯಿಂದ ಡಿಜಿಟಲ್ ಪಾವತಿಗಳಲ್ಲಿ ಹಾಗು ಬ್ಯಾಂಕ್ ಕ್ಷೇತ್ರದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಬ್ಯಾಂಕಿಂಗ್ ವಹಿವಾಟಿಗೆ ಪಾನ್ ಮತ್ತು ಆಧಾರ್ ಲಿಂಕ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ. ಡಿಸೆಂಬರ್ 31 ರೊಳಗೆ ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ನಿಷ್ಕ್ರಿಯವಾದ ಪಾನ್ ಕಾರ್ಡ್ ಬಳಕೆ ಮಾಡಿಕೊಂಡು ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಾಧ್ಯವಿಲ್ಲ.
8ನೇ ವೇತನ ಆಯೋಗ ಜಾರಿ
8 ನೇ ವೇತನ ಆಯೋಗ ನವೆಂಬರ್ 2025 ರಲ್ಲಿ ಉಲ್ಲೇಖ ನಿಯಮಗಳನ್ನು (ToR) ಅನುಮೋದಿಸಿ ಸೂಚನೆ ನೀಡಿದೆ, ಇದು ಹಣಕಾಸಿನ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆಗಳನ್ನು ಪರಿಶೀಲಿಸಿ ತನ್ನ ಆದೇಶವನ್ನು ನೀಡುತ್ತದೆ. ಶಿಫಾರಸ್ಸುಗಳು ಜನವರಿ 1, 2026 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ, ಆದರೂ ಅನುಷ್ಠಾನಕ್ಕೆ ಸಮಯ ತೆಗೆದುಕೊಳ್ಳುತ್ತದೆ.
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಸಾರ ಮಾಡಲಾಗುವುದಿಲ್ಲ. ಇದು ಅಧಿಕೃತ ಸುದ್ದಿಯಾಗಿದೆ ಮತ್ತು ಸರ್ಕಾರೀ ವೆಬ್ಸೈಟ್ ನಲ್ಲಿ ಕೂಡ ಈ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

