10 Rs Coin: 10 ರೂ ನಾಣ್ಯಗಳ ಮೇಲೆ ದಿಡೀರ್ ಇನ್ನೊಂದು ಘೋಷಣೆ ಮಾಡಿದ RBI, ಹೊಸ ಮಾರ್ಗಸೂಚಿ ಪ್ರಕಟ.

10 ರೂ ನಾಣ್ಯಗಳ ಮೇಲೆ ಹೊಸ ಮಾರ್ಗಸೂಚಿ ಪ್ರಕಟ.

RBI About 10 Rs Coin: ದೇಶಿಯ ಮಾರುಕಟ್ಟೆಯಲ್ಲಿ ಇದೀಗ 2000 ರೂ. ನೋಟು ಅಮಾನ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಮೇ 19 ರಿಂದ 2000 ರೂ ನೋಟುಗಳು ಚಲಾವಣೆಯಿಂದ ಹೊರನಡೆದಿದ್ದು, ಸೆಪ್ಟೆಂಬರ್ 30 ನೋಟು ವಿನಿಮಯ ಹಾಗೂ ಠೇವಣಿಗೆ ಕೊನೆಯ ದಿನಾಂಕವಾಗಿದೆ. ಇನ್ನು ಇತ್ತೀಚೆಗಂತೂ ನೋಟು ಹಾಗೂ ನಾಣ್ಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳುವಿರಾಲ್ ಆಗುತ್ತಿವೆ.

ಇದೀಗ ಮತ್ತೆ ನಾಣ್ಯಗಳ ವಿಷಯವಾಗಿ ಮಾರುಕಟ್ಟೆಯಲ್ಲಿ ಗೊಂದಲ ಸ್ರಷ್ಟಿಯಾಗಿದೆ. ಕೆಲವು ನಾಣ್ಯಗಳು ಚಲಾವಣೆಯಲ್ಲಿ ಇಲ್ಲ ಎನ್ನುವ ಕಾರಣ ನಾಣ್ಯಗಳ ವಿನಿಮಯ ಪ್ರಕ್ರಿಯೆ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಅದರಲು 10 ರೂ. ನಾಣ್ಯಗಳು ರದ್ದಾಗಿವೆ ಎನ್ನುವ ಬಗ್ಗೆ ಸುದ್ದಿ ಸಾಕಷ್ಟು ಹರಡಿದೆ. ಈ ನಿಟ್ಟಿನಲ್ಲಿ ಆರ್ ಬಿಐ (RBI) ಇದೀಗ ನಾಣ್ಯಗಳ ವಿಚಾರವಾಗಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

RBI About 10 Rs Coin
Image Source: Mint

10 ರೂ. ನಾಣ್ಯಗಳ ವಿಚಾರವಾಗಿ RBI ಹೊಸ ಮಾರ್ಗಸೂಚಿ
ಸದ್ಯ 10 ರೂ. ನಾಣ್ಯಗಳ ಚಲಾವಣೆಯ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಈ ಕಾರಣದಿಂದಾಗಿ ಅಂಗಡಿಯ ಮಾಲೀಕರು ನಾಣ್ಯಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಚಿಲ್ಲರೆ ಅಂಗಡಿಗಳಲ್ಲಿ ನಾಣ್ಯಗಳ ಸಂಗ್ರಹಣೆ ಹೆಚ್ಚಾಗಿರುತ್ತದೆ.

ನಾಣ್ಯಗಳ ವಿನಿಮಯವನ್ನು ನಿರಾಕರಿಸಿರುವುದು ಜನರಿಗೆ ಕಷ್ಟವನ್ನು ತಂದಿದೆ. ಬ್ಯಾಂಕ್ ಗಳು ಕೂಡ ನಾಣ್ಯಗಳ ವಿನಿಮಯವನ್ನು ನಿರಾಕರಿಸುತ್ತಿದೆ. ಈ ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿ ನಾಣ್ಯಗಳ ಮೇಲೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

RBI About 10 Rs Coin
Image Source: India Today

10 ರೂ. ನಾಣ್ಯಗಳನ್ನು ನಿರಾಕರಿಸುವಂತಿಲ್ಲ
ಆರ್ ಬಿಐ ಯಾವುದೇ ನಾಣ್ಯವನ್ನು ಚಲಾವಣೆಯಿಂದ ತೆಗೆದುಹಾಕಿಲ್ಲ. ಇನ್ನು ಯಾವುದೇ ಅಂಗಡಿಯವರು ಅಥವಾ ಬ್ಯಾಂಕ್ ಗಳು ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದರೆ ಸಂಬಂಧಪಟ್ಟವರು ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.

Join Nadunudi News WhatsApp Group

ಭಾರತೀಯ ದಂಡ ಸಂಹಿತೆಯ 489A ನಿಂದ 489E ಸೆಕ್ಷನ್ ಅಡಿಯಲ್ಲಿ ನೋಟು ಹಾಗು ನಾಣ್ಯಗಳ ಕುರಿತು ಯಾವುದೇ ಕಾನೂನುಬಾಹಿರ ಘಟನೆ ನಡೆದರೆ ಅಥವಾ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಕಾನೂನು ನ್ಯಾಯಾಲಯದಿಂದ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನು ವಿಧಿಸುವ ಅವಕಾಶವಿದೆ. ಇನ್ನು 10 ರೂ. ನಾಣ್ಯಗಳನ್ನು ಸ್ವೀಕರಿಸುವುದನ್ನು ನಿರಾಕರಿಸುವುದು ಕಾನೂನು ನಿಯಾಮ ಉಲ್ಲಂಘನೆಯಾಗುತ್ತದೆ ಎಂದು ಆರ್ ಬಿಐ ತಿಳಿಸಿದೆ.

Join Nadunudi News WhatsApp Group