Credit Card Rules: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬೇಸರದ ಸುದ್ದಿ, ಜುಲೈ 1 ರಿಂದ ಹೊಸ ನಿಯಮ.
ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಜುಲೈ 1 ನೇ ತಾರೀಕಿನಿಂದ ಹೊಸ ನಿಯಮ ಜಾರಿಗೆ.
Credit Cards Updates: ದೇಶದ ಅನೇಕ ಬ್ಯಾಂಕ್ (Bank) ಗಳು ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ (Credit Card) ಹಾಗು ಡೆಬಿಟ್ ಕಾರ್ಡ್ (Debit Card) ಸೌಲಭ್ಯವನ್ನು ನೀಡುತ್ತವೆ. ಇನ್ನು ಇತ್ತೀಚೆಗಂತೂ ಬ್ಯಾಂಕ್ ಗಳ ಅನೇಕ ನಿಯಮಗಳಲ್ಲಿ ಬದಲಾವಣೆ ಆಗಿದೆ. ಇದೀಗ ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಶಾಕಿಂಗ್ ಸುದ್ದಿಯೊಂದು ವೈರಲ್ ಆಗಿದೆ. ಕ್ರೆಡಿಟ್ ನ ಬಗ್ಗೆ ಮಾಹಿತಿಯನ್ನು ತಿಳಿಯೋಣ.
ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ
ಹೊಸ ಹಣಕಾಸು ವರ್ಷ ಆರಂಭದ ಬೆನ್ನಲ್ಲೇ ಸಾಕಷ್ಟು ನಿಯಮಗಳು ಬದಲಾಗಿವೆ. ಈ ಬಾರಿಯ ಹಣಕಾಸು ವರ್ಷ ಹಣದುಬ್ಬರದ ಪರಿಸ್ಥಿಯನ್ನು ತಂದಿದೆ. 2023 ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕ್ರೆಡಿಟ್ ಕಾರ್ಡ್ ಕುರಿತಾಗಿ ಮಹತ್ವದ ನಿರ್ಧಾರವನ್ನು ತಂದಿದೆ. ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆಯನ್ನು (TCS) ಹೆಚ್ಚಿಸುವ ಮೂಲಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ವಿದೇಶಿ ಪ್ರಯಾಣದ ಪ್ಯಾಕೇಜ್ ದರದಲ್ಲಿ ಹೆಚ್ಚಳ
ಜುಲೈ 1 ರಿಂದ ವಿದೇಶಿ ಪ್ರಯಾಣದ ಪ್ಯಾಕೇಜ್ ದರದಲ್ಲಿ ಹೆಚ್ಚಳ ಆಗಲಿದೆ. ಇದುವರಗೆ ವಿದೇಶಿ ರವಾನೆ ಮೇಲೆ ಶೇ. 5 ರಷ್ಟು ಟಿಸಿಎಸ್ ಇದ್ದಿತ್ತು, ಆದರೆ ಇನ್ನು ಮುಂದಿನ ದಿನಗಳಲ್ಲಿ ಟಿಸಿಎಸ್ ದರ ಶೇ. 20 ತಲುಪಲಿದೆ.
ವಿದೇಶಿ ಪ್ರಯಾಣದ ಪ್ಯಾಕೇಜ್ ದರದಲ್ಲಿ ಹೆಚ್ಚಳವು ವಿದೇಶಿ ಪ್ರವಾಸ ಮಾಡುವವರಿಗೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ. ವಿದೇಶಿ ಪ್ರವಾಸಗಳಿಗೆ ಸಂಬಂಧಿಸಿದಂತೆ ಕ್ರೆಡಿಟ್ ಕಾರ್ಡ್ ಪಾವತಿಗಳ ಮೇಲೆ ಶೇ. 20 ರಷ್ಟು ಟಿಸಿಎಸ್ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕ್ರೆಡಿಟ್ ಕಾರ್ಡ್ ನಲ್ಲಿ ಪ್ರವಾಸದ ಪ್ಯಾಕೇಜ್ ಗಳು ಜುಲೈ 1 ರಿಂದ ಹೆಚ್ಚಾಗಲಿದೆ.