House Loan: ಬಾಡಿಗೆ ಮನೆಯಲ್ಲಿ ಇರುವವರಿಗೆ ಮತ್ತು ಸ್ವಂತ ಮನೆ ಇಲ್ಲದವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಇಂದೇ ಅರ್ಜಿ ಸಲ್ಲಿಸಿ.
ಬಾಡಿಗೆ ಮನೆಯಲ್ಲಿ ಇರುವವರಿಗೆ ಮತ್ತು ಸ್ವಂತ ಮನೆ ಇಲ್ಲದವರಿಗೆ ಕೇಂದ್ರದಿಂದ ಹೊಸ ಯೋಜನೆ.
New Scheme For Home Loan: ಸಾಮಾನ್ಯವಾಗಿ ಸ್ವಂತ ಮನೆ ನಿರ್ಮಾಣದ ಕನಸು ಎಲ್ಲರಲ್ಲೂ ಇರುತ್ತದೆ. ತಮ್ಮದೇ ಆದ ಸ್ವಂತ ಮನೆಯಲ್ಲಿ ಜೀವನ ನಡೆಸಬೇಕೆಂದು ಸಾಕಷ್ಟು ಮಂದಿ ಆಶಿಸುತ್ತಾರೆ. ಇನ್ನು ಮನೆ ನಿರ್ಮಾಣದ ಕನಸನ್ನು ನನಸು ಮಾಡಲು ವಿವಿಧ ಬ್ಯಾಂಕುಗಳ ಹಾಗೂ ಸಂಸ್ಥೆಗಳು ಗೃಹ ಸಾಲವನ್ನು ನೀಡುತ್ತದೆ. ಆದರೆ ಗೃಹ ಸಾಲವನ್ನು (Home Loan) ಪಡೆದು ಮನೆ ನಿರ್ಮಾಣ ಮಾಡಿದರೆ ನಂತರ ಸಾಲವನ್ನು ತೀರಿಸುವಾಗ ಜನರು ಪರಿತಪಿಸಬೇಕಾಗುತ್ತದೆ.
ಸ್ವಂತ ಮನೆ ನಿರ್ಮಾಣದ ಕನಸಿಗಾಗಿ ಹೊಸ ಯೋಜನೆ ಜಾರಿಗೆ
ಮಧ್ಯಮ ವರ್ಗದ ಜನರ ಸ್ವಂತ ಮನೆ ನಿರ್ಮಾಣದ ಕನಸು ಹಾಗೆಯೇ ಉಳಿದುಕೊಂಡಿದೆ. ಈಗಾಗಲೇ ಕೇಂದ್ರದ ಮೋದಿ ಸರ್ಕಾರ ದೇಶದ ಬಡ ಜನರಿಗೆ ನೆರವಾಗಲು ಸಾಕಷ್ಟು ಯೋಜನೆಯನ್ನು ರೂಪಿಸಿದೆ. ಈಗಾಗಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ದೇಶದ ನಿರ್ಗತಿಕರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ದೇಶದ ಲಕ್ಷಾಂತರ ಫಲಾನುಭವಿಗಳು ಮನೆಯನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಹೊಸ ಯೋಜನೆಯ ಜಾರಿಗೆ ಸಿದ್ಧತೆ ನಡೆಸುತ್ತಿದೆ.
ಸೆಪ್ಟೆಂಬರ್ ನಲ್ಲಿ ಜಾರಿಯಾಗಲಿದೆ ಹೊಸ ಯೋಜನೆ
ಇದೀಗ ಕೇಂದ್ರ ಮೋದಿ ಸರ್ಕಾರ ಜನರ ಮನೆ ನಿರ್ಮಾಣದ ಕನಸನ್ನು ನನಸು ಮಾಡುವ ಉದ್ದೇಶದಿಂದ ಹೊಸ ಯೋಜನೆಯನ್ನು ರೂಪಿಸುವುದಾಗಿ ಘೋಷಣೆ ಹೊರಡಿಸಿದೆ. ಈ ಮೂಲಕ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರಿಗೆ ಸಿಹಿ ಸುದ್ದಿ ನೀಡಿದೆ. ಸದ್ಯದಲ್ಲೇ ಜನರಿಗೆ ಬ್ಯಾಂಕ್ ಸಾಲಗಳ ಬಡ್ಡಿದರದ ಮೇಲೆ ವಿನಾಯಿತಿ ಒದಗಿಸುವ ಯೋಜನೆಯನ್ನು ರೂಪಿಸುವುದಾಗಿ ನಗರ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ ನಲ್ಲಿಹೊಸ ಯೋಜನೆ ಜಾರಿಯಾಗುವುದಾಗಿ ಘೋಷಿಸಲಾಗಿದೆ. ಶೀಘ್ರದಲ್ಲೇ ದೇಶದ ಜನತೆ ತಮ್ಮ ಮನೆ ನಿರ್ಮಾಣದ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಬ್ಯಾಂಕುಗಳು ಗೃಹ ಸಾಲವನ್ನು ನೀಡುತ್ತಿವೆ. ಈ ಹೊಸ ಯೋಜನೆಯು ಬ್ಯಾಂಕ್ ಗೃಹ ಸಾಲದ ಬಡ್ಡಿದರವನ್ನು ಕಡಿಮೆ ಮಾಡಲು ಉತ್ತೇಜಿಸಲಿದೆ. ಹೊಸ ಯೋಜನೆ ಜಾರಿಯಾದರೆ ಬ್ಯಾಂಕುಗಳ ಗೃಹ ಸಾಲದ ಬಡ್ಡಿದರ ಕಡಿಮೆ ಆಗಲಿದೆ.