Railway Update: ಜನರಲ್ ಬೋಗಿಯಲ್ಲಿ ಪ್ರಯಾಣಿಸುವವರಿಗೆ ಹೊಸ ಯೋಜನೆ ಬಿಡುಗಡೆ, ಇನ್ನುಮುಂದೆ 20 ರೂ ಮಾತ್ರ.
ರೈಲು ಪ್ರಯಾಣಿಕರಿಗಾಗಿ ಹೊಸ ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ.
Indian Railway Food Price: ಇತ್ತೀಚಿಗೆ ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ವಿವಿಧ ರೀತಿಯ ಸೌಲಭ್ಯವನ್ನು ಒದಗಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಅನೇಕ ರೀತಿಯ ನಿಯಮಗಳ ಜೊತೆಗೆ ವಿವಿಧ ಸೌಲಭ್ಯವನ್ನು ಒದಗಿಸುತ್ತದೆ. ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ರೈಲ್ವೆ ಟಿಕೆಟ್ ನಲ್ಲಿ ಕೂಡ ಅನೇಕ ರೀತಿಯ ಸೌಲಭ್ಯವನ್ನುಒದಗಿಸಿತ್ತು. ಇದೀಗ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.
ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ
ರೈಲಿನಲ್ಲಿ ಊಟ ನೀಡುವ ಅಂಗಡಿಗಳನ್ನು ಜನರಲ್ ಬೋಗಿಗಳು ನಿಲ್ಲುವ ಪ್ಲಾಟ್ ಫಾರಂ ನ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಬಗೆಯಲ್ಲಿ ಈ ಊಟವನ್ನು ವಿಧಿಸಲಾಗಿದ್ದು, 7 ಪೂರಿಗಳು, ಡ್ರೈ ಆಲೂ ಮತ್ತು ಉಪ್ಪಿನಕಾಯಿ ಹೊಂದಿರುವ ಪ್ಯಾಕೆಟ್ ಗೆ 20 ರೂಪಾಯಿ ಹಾಗು 2 ಬಗೆಯ ಊಟ ಹೊಂದಿರುವ ಪ್ಯಾಕೆಟ್ ಗೆ 50 ರೂಪಾಯಿ ಬೆಲೆ ಇರಲಿದೆ. ಅಲ್ಲದೆ ಅನ್ನ, ರಾಜ್ಮಾ, ಚೋಲೆ, ಕಿಚಡಿ, ಬಟೂರೆ, ಪಾವ್ ಬಾಜಿಗಳು ಇಲ್ಲಿ ದೊರೆಯಲಿವೆ ಎಂದು ರೈಲ್ವೆ ತಿಳಿಸಿದೆ.
ರೈಲಿನಲ್ಲಿ ಹೊಸ ಸೇವೆ
ರೈಲಿನಲ್ಲಿ ಜನರಲ್ ಬೋಗಿಗಳಲ್ಲೂ ಕೈಗೆಟಕುವ ದರದಲ್ಲಿ ಊಟ ಮತ್ತು ಪ್ಯಾಕ್ ಮಾಡಲಾದ ನೀರಿನ ಬಾಟಲ್ ಗಳನ್ನೂ ಒದಗಿಸಲು ರೈಲ್ವೆ ನಿರ್ಧರಿಸಿದೆ. ಇದಕ್ಕಾಗಿಯೇ ವಿಶೇಷವಾಗಿ ಇವುಗಳನ್ನು ಉತ್ಪಾದನೆ ಮಾಡಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕ ಮೇಲ್ ಹಾಗು ಎಕ್ಸ್ ಪ್ರೆಸ್ ರೈಲುಗಳು ಕನಿಷ್ಠ ಪಕ್ಷ 2 ಜನರಲ್ ಬೋಗಿಗಳನ್ನು ಹೊಂದಿರುತ್ತವೆ. ಹಾಗಾಗಿ ಈ ಬೋಗಿಗಳು ನಿಲ್ಲುವ ಕಡೆ ಈ ಅಂಗಡಿಗಳನ್ನು ತೆರೆಯಬೇಕು ಎಂದು ನಿಲ್ದಾಣಗಳಿಗೆ ಸೂಚಿಸಲಾಗಿದೆ. ಅಲ್ಲದೆ 6 ತಿಂಗಳೊಳಗೆ ಇದರ ನಿರ್ಮಾಣ ಪೂರ್ಣವಾಗಬೇಕು ಎಂದು ತಿಳಿಸಲಾಗಿದೆ.