Ads By Google

New Swift 2024: ಗ್ರಾಂಡ್ ಲುಕ್ ನಲ್ಲಿ 2024 ರ ಹೊಸ ಸ್ವಿಫ್ಟ್ ಕಾರ್, ಕಡಿಮೆ ಬೆಲೆ ಮತ್ತು 28 ಕಿಲೋಮೀಟರ್ ಮೈಲೇಜ್

maruti suzuki swift 2024 model price and features

Image Credit: Original Source

Ads By Google

Suzuki Swift Cool Rev Concept: 2024 ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೇವಲ ಒಂದು ದಿನ ಮುಗಿದರೆ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಇನ್ನು ಹೊಸ ವರ್ಷದಲ್ಲಿ ಹೊಸ ಹೊಸ ಮಾದರಿಯ ಕಾರ್ ಗಳು ಭಾರತೀಯ ಆಟೋ ವಲಯವನ್ನು ಪ್ರವೇಶಿಸಲಿದೆ. ಹೊಸ ವರ್ಷಕ್ಕೆ ಜನರಿಗೆ ಹೊಸ ಹೊಸ ಕಾರ್ ಗಳು ಖರೀದಿಗೆ ಲಭ್ಯವಾಗಲಿದೆ.

ಜನರು ತಮಗೆ ಇಷ್ಟವಾಗುವ ಕಾರ್ ಗಳನ್ನೂ ಖರೀದಿಸಬಹುದಾಗಿದೆ. ಇನ್ನು ಮಾರುಕಟ್ಟೆಯಲ್ಲಿ Maruti Suzuki ಹೆಚ್ಚಿನ ಫೀಚರ್ ಇರುವ ಕಾರನ್ನು 2024 ರಲ್ಲಿ ಪರಿಚ್ಯಿಸಲಿದೆ. ನೂತನ ಸ್ವಿಫ್ಟ್ ಮಾದರಿ ಹೊಸ ವರ್ಷದಲ್ಲಿ ಬಿಡುಗಡೆಗೊಳ್ಳುತ್ತಿರುವ ಎಲ್ಲ ಮಾದರಿಯ ಕಾರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಹೊಸ ವರ್ಷಕ್ಕೆ ಹೊಸ ಅವರತದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ಬರಲಿದ್ದು ಸದ್ಯ ಕಾರಿನ ಬೆಲೆ ಮತ್ತು ಮೈಲೇಜ್ ಕಂಡು ಜನರು ಮೆಚ್ಚುಗೆಯನ್ನ ಹೊರಹಾಕಿದ್ದಾರೆ.

Image Credit: Original Source

Suzuki Swift Cool Rev Concept
ಟೆಕ್ ವಲಯದಲ್ಲಿ Maruti ಸದ್ಯ Suzuki Swift Cool Rev Concept ಅನ್ನು ಆಕರ್ಷಕ ವಿನ್ಯಾಸದೊಂದಿಗೆ ಪರಿಚಯಿಸಲಿದೆ. ಈ ಸ್ವಿಫ್ಟ್ ಮಾದರಿ ಸ್ಟ್ಯಾಂಡರ್ಡ್ ಸ್ವಿಫ್ಟ್ ಗೆ ಹೋಲಿಸಿದರೆ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಪರಿಚಯವಾಗಲಿದೆ. ಹೊಸ ಪರಿಕಲ್ಪನೆಯು ಸ್ಟ್ಯಾಂಡರ್ಡ್ 2024 ಸ್ವಿಫ್ಟ್‌ ಗಿಂತ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾತ್ರ ಪಡೆಯುತ್ತದೆ. ಇದು ಕಪ್ಪು ರೂಫ್ ಮತ್ತು ಡೆಕಲ್‌ ಗಳೊಂದಿಗೆ ತಂಪಾದ ಹಳದಿ ಲೋಹೀಯ ಬಣ್ಣದ ಫಿನಿಶಿಂಗ್ ಹೊಂದಿದೆ. ‘Fourth generation Swift’ ಎಂದು ಹೇಳುವ ಹೊಸ ಗ್ರಾಫಿಕ್ಸ್ ಬದಿಯಲ್ಲಿದೆ.

ಆಕರ್ಷಕ ವಿನ್ಯಾಸದೊಂದಿಗೆ ಹೊಸ ವರ್ಷಕ್ಕೆ ಗ್ರಾಂಡ್ ಎಂಟ್ರಿ
ಸುಜುಕಿಯು ಗ್ರಿಲ್ ಮತ್ತು ಫಾಗ್ ಲ್ಯಾಂಪ್ ಹೌಸಿಂಗ್‌ ಗಾಗಿ ಗ್ಲಾಸ್ ಬ್ಲ್ಯಾಕ್ ಅನ್ನು ಬಳಸುತ್ತಿದೆ ಆದರೆ ಮುಂಭಾಗದ ಸ್ಪ್ಲಿಟರ್ ಮ್ಯಾಟ್ ಬ್ಲ್ಯಾಕ್ ಆಗಿದೆ. ಈ ಮಾರುತಿ ಸ್ವಿಫ್ಟ್ ಕೂಲ್ ಯೆಲ್ಲೋ ರೆವ್ ಕಾರಿನ ಹೆಡ್‌ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್‌ ಗಳು ಸಹ ಸ್ಮೋಕ್ ಎಫೆಕ್ಟ್ ಪಡೆಯುವಂತಿದೆ.

Image Credit: Original Source

2024 ರ ಸುಜುಕಿ ಸ್ವಿಫ್ಟ್‌ ನ ಹೊರಭಾಗ ಮತ್ತು ಒಳಭಾಗವನ್ನು ನವೀಕರಿಸಲಾಗಿದೆ. ಆದರೆ ಇದು ತನ್ನ ಸಾಂಪ್ರದಾಯಿಕ ಸಿಲೂಯೆಟ್ ಅನ್ನು ಉಳಿಸಿಕೊಂಡಿದೆ. ಹೊರಭಾಗವು ಈಗ ಹೊಸ LED ಟೈಲ್ ಲ್ಯಾಂಪ್‌ ಗಳು ಮತ್ತು ಹೆಡ್‌ ಲ್ಯಾಂಪ್‌ ಗಳನ್ನು ಪಡೆಯುತ್ತದೆ. 2024 ರ ಜಪಾನಿನ ಆಟೋ ಎಕ್ಸ್ಪೋದಲ್ಲಿ Suzuki Swift Cool Rev Concept ಅದ್ದೂರಿ ಪ್ರದರ್ಶನಗೊಳ್ಳಲಿದೆ. ಸುಮಾರು 7 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಆಗುವ ಮಾರುತಿ ಸುಜುಕಿ ಸ್ವಿಫ್ಟ್ ಕಾರ್ CNG ಮಾದರಿಯೂ 28 ರಿಂದ 30 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in