Tax 2024: ಟ್ಯಾಕ್ಸ್ ಕಟ್ಟುವವರಿಗೆ ಬಿಗ್ ರಿಲೀಫ್ ನೀಡಿದ ಮೋದಿ ಸರ್ಕಾರ, 7.5 ಲಕ್ಷದ ತನಕದ ಈ ಆದಾಯ ತೆರಿಗೆ ಮುಕ್ತ.
ಇನ್ಮುಂದೆ 7.5 ಲಕ್ಷದ ತನಕದ ಈ ಆದಾಯಗಳಿಗೆ ಯಾವುದೇ ತೆರಿಗೆ ಇಲ್ಲ, ಕೇಂದ್ರದ ಘೋಷಣೆ
Tax Free Income In India 2024: ಸದ್ಯ ಹೊಸ ವರ್ಷದಲ್ಲಿ 2024 ಬಜೆಟ್ ಮಂಡನೆ ಆಗಲಿದೆ. ಹಣಕಾಸು ಸಚಿವಾಲಯ ಘೋಷಿಸಲಿರುವ ಈ ಬಜೆಟ್ ನ ಬಗ್ಗೆ ತೆರಿಗೆ ಪಾವತಿದಾರರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿಯಾದರೂ ಸರ್ಕಾರ ತೆರಿಗೆ ವಿನಾಯಿತಿ ನೀಡುತ್ತದೆಯೇ ಎಂದು ತೆರಿಗೆದಾರರು ಕಾಯುತ್ತಿದ್ದಾರೆ. ಫೆಬ್ರವರಿಯಲ್ಲಿ ಮಂಡಿಸಲಾಗುವ ಮಧ್ಯಂತರ ಬೆಜೆಟ್ ನಲ್ಲಿ ಹೊಸ ತೆರಿಗೆ ವ್ಯವಸ್ಥೆ ಜಾರಿಯಾಗಲಿದೆ. ಹೊಸ ತೆರಿಗೆ ವ್ಯವಸ್ಥೆಯಡಿ ತೆರಿಗೆ ವಿನಾಯಿತಿ ಘೋಷಿಸಿಯುವ ಸಾಧ್ಯತೆ ಹೆಚ್ಚಿದೆ.
ಟ್ಯಾಕ್ಸ್ ಕಟ್ಟುವವರಿಗೆ ಬಿಗ್ ರಿಲೀಫ್ ನೀಡಿದ ಮೋದಿ ಸರ್ಕಾರ
ಕಳೆದ ವರ್ಷದ ಬಜೆಟ್ ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ವಿನಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಅಲ್ಲದೆ ಆದಾಯ ತೆರಿಗೆ ಸ್ಲಾಬ್‌ಗಳ ಸಂಖ್ಯೆಯನ್ನು 7 ರಿಂದ 6 ಕ್ಕೆ ಇಳಿಸಲಾಗಿದೆ. ಸದ್ಯ 2024 ಬಜೆಟ್ ಮಂಡನೆಯ ವೇಳೆ ಮತ್ತೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ವಿನಾಯಿತಿ ಮಿತಿಯನ್ನು 7 ಲಕ್ಷದಿಂದ 7.5 ಲಕ್ಷಕ್ಕೆ ಹೆಚ್ಚಿಸಬಹುದು. ಇದು ಸಂಭವಿಸಿದಲ್ಲಿ 8 ಲಕ್ಷದಇನ್ಮುಂದೆ 7.5 ಲಕ್ಷದ ತನಕದ ಈ ಆದಾಯಗಳಿಗೆ ಯಾವುದೇ ತೆರಿಗೆ ಇಲ್ಲ, ಕೇಂದ್ರದ ಘೋಷಣೆ ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಇದರಲ್ಲಿ 50,000 ರೂ. ಗಳ ಪ್ರಮಾಣಿತ ಕಡಿತವೂ ಸೇರಿದೆ. ಇದಕ್ಕಾಗಿ, ಹಣಕಾಸು ಮಸೂದೆಯಲ್ಲಿ ಬದಲಾವಣೆಗಳನ್ನು ಮಾಡಬಹುದು.
7.5 ಲಕ್ಷದ ತನಕದ ಈ ಆದಾಯ ತೆರಿಗೆ ಮುಕ್ತ
ಫೆ.1 ರಂದು ಮಂಡನೆಯಾಗಲಿರುವ ಮಧ್ಯಂತರ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಹೆಚ್ಚಳದ ಪ್ರಸ್ತಾವನೆಗೆ ಹಣಕಾಸು ಮಸೂದೆಯನ್ನು ತರಬಹುದು. ತೆರಿಗೆ ಸ್ವೀಕೃತಿಯ ವ್ಯಾಪ್ತಿಯನ್ನು ಹೆಚ್ಚಿಸುವ ಜತೆಗೆ ತೆರಿಗೆದಾರರ ಮೇಲಿನ ತೆರಿಗೆ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಹಣಕಾಸು ಸಚಿವಾಲಯವು 2023-24 ರ ಹಣಕಾಸು ವರ್ಷಕ್ಕೆ ಹೊಸ ತೆರಿಗೆ ಪದ್ಧತಿ ಮತ್ತು ಹಳೆಯ ತೆರಿಗೆ ಪದ್ಧತಿ ಎರಡನ್ನೂ ಜಾರಿಗೆ ತಂದಿದೆ. ತೆರಿಗೆದಾರರು ITR ಅನ್ನು ಸಲ್ಲಿಸಲು ಮತ್ತು ತೆರಿಗೆ ವಿನಾಯಿತಿಯನ್ನು ಪಡೆಯಲು ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಹೊಸ ತೆರಿಗೆ ಪದ್ಧತಿಯನ್ನು ಡೀಫಾಲ್ಟ್ ಆಗಿ ಇರಿಸಲಾಗಿದೆ. ನೀವು ಹಳೆಯ ತೆರಿಗೆ ಪದ್ಧತಿಯ ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಅದನ್ನು ಆಯ್ಕೆ ಮಾಡುವುದು ಮುಖ್ಯ.