TCS Update: ವಿದೇಶದಲ್ಲಿರುವ ಮಕ್ಕಳಿಗೆ ಹಣ ಕಳುಹಿಸುವವರಿಗೆ ಮತ್ತು ಹಣ ಪಡೆಯುವವರಿಗೆ ಹೊಸ ನಿಯಮ, ಇಷ್ಟು ತೆರಿಗೆ ಕಡ್ಡಾಯ.

TCS ನಿಯಮದಲ್ಲಿ ಮಹತ್ವದ ಬದಲಾವಣೆ ತಂದ ಕೇಂದ್ರ ಸರ್ಕಾರ.

New TCS Rule From October 1st: October ತಿಂಗಳ ಆರಂಭದಲ್ಲಿ ಅನೇಕ ನಿಯಮಗಳು ಬದಲಾಗಲಿವೆ. ಗ್ಯಾಸ್ ಸಿಲಿಂಡರ್ ಪ್ರೈಸ್, GST , ATF ಸೇರಿದಂತೆ ಅನೇಕ ನಿಯಮಗಳು ಅಕ್ಟೋಬರ್ 1 ರಿಂದ ಬದಲಾಗಲಿವೆ.

ಈ 2023 ರ October ತಿಂಗಳು ಜನರಿಗೆ ಒಂದು ರೀತಿಯ ಆರ್ಥಿಕ ಹೊರೆಯನ್ನು ನೀಡಲಿದೆ ಎಂದರೆ ತಪ್ಪಾಗಲಾರದು. ಇದೀಗ ವಿದೇಶಿ ಪ್ರಯಾಣ ಮಾಡುವವರಿಗೆ ಹಾಗೂ ವಿದೇಶದಲ್ಲಿ ವಾಸಿಸುತ್ತಿರುವವರಿಗೆ ಮಹತ್ವವಾದ ಮಾಹಿತಿಯೊಂದು ಹೊರಬಿದ್ದಿದೆ. ಇನ್ನುಮುಂದೆ ನಿಮ್ಮ ವಿದೇಶಿ ಪ್ರಯಾಣ ದುಬಾರಿ ಆಗುವ ಸಾಧ್ಯತೆ ಇದೆ.

New TCS Rule From October 1st
Image Credit: Traveltradeinsider

TCS ನಿಯಮದಲ್ಲಿ ಮಹತ್ವದ ಬದಲಾವಣೆ ತಂದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ ಇದೀಗ TCS ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದೆ. ವಿದೇಶದಲ್ಲಿ ಅಧ್ಯಯನ ಮಾಡುತ್ತಿರುವ ನಿಮ್ಮ ಮಗ ಅಥವಾ ಮಗಳಿಗೆ ನೀವು ಹಣವನ್ನು ಕಳುಹಿಸುತ್ತಿದ್ದರೆ ಅಥವಾ ವಿದೇಶಿ ಪ್ರಯಾಣದ ಬಗ್ಗೆ ಯೋಜನೆ ಮಾಡಿದ್ದರೆ ಕೇಂದ್ರ ಸರ್ಕಾರದ TCS ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಮೂಲದಲ್ಲಿಯೇ ಸಂಗ್ರಹಿಸಲಾದ ತೆರಿಗೆ ದರವು ವಿದೇಶದಲ್ಲಿ ಮಾಡಿದ ಶಿಕ್ಷಣ ವೆಚ್ಚಗಳಿಗೆ ಅನ್ವಯಿಸುವುದಿಲ್ಲ. ಆದರೂ ಮೂಲ ತೆರಿಗೆ ಸಂಗ್ರಹ ದರದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.

ವಿದೇಶಿ ಪ್ರಯಾಣದ TCS ದರ ಹೆಚ್ಚಳ
ವಿದೇಶಕ್ಕೆ ಕಳುಹಿಸುವ ಹಣದ ಮೇಲೆ ಎಷ್ಟು ಪ್ರಮಾಣದಲ್ಲಿ TCS ಅನ್ವಯವಾಗುತ್ತದೆ ಎನ್ನುವ ಬಗ್ಗೆ ಸಾಕಷ್ಟು ಜನರು ಗೊಂದಲದಲ್ಲಿರುತ್ತಾರೆ. ಇದೀಗ ಹಣಕಾಸು ಸಚಿವೆಯ ಟಿಸಿಎಸ್ ಬಗ್ಗೆ ಸ್ಪಷ್ಟನೆ ನೀಡಿದೆ. ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಮಕ್ಕಳು ವಿದೇಶದಲ್ಲಿದ್ದರೆ ನೀವು ನಿಮ್ಮ ಮಕ್ಕಳಿಗೆ 7 ಲಕ್ಷ ರೂ. ಗಿಂತ ಹೆಚ್ಛಿನ ಹಣವನ್ನು ಕಳುಹಿಸುವಂತಿಲ್ಲ. 7 ಲಕ್ಷ ರೂ. ಗಿಂತ ಹೆಚ್ಛಿನ ಹಣವನ್ನು ರವಾನಿಸಿದೆ ಅಥವಾ ಆ ಹಣವನ್ನು ಸಾಲದ ಮೂಲಕ ಪಡೆಯದಿದ್ದರೆ ಶೇ. 5 ರಷ್ಟು TCS ಪಾವತಿಸಬೇಕಾಗುತ್ತದೆ.

Central Govt brought significant change in TCS rules
Image Credit: Cleartax

ಅಕ್ಟೊಬರ್ 1 ರಿಂದ ಹೊಸ TCS ದರ ಜಾರಿ
ಇನ್ನು ಟಿಸಿಎಸ್ ಮೇಲಿನ ಹೆಚ್ಛಿನ ದರಗಳು ಅಕ್ಟೊಬರ್ 1 ರಿಂದ ಜಾರಿಯಾಗಲಿದೆ. LRS ಅಡಿಯಲ್ಲಿ ಹಣವನ್ನು ಕಳುಹಿಸಲು ಪೋಷಕರು ಅಥವಾ ಹಣ ಕಳುಹಿಸುವವರು ಫಾರ್ಮ್ ಎ2 ಮಾರು ಎಲ್ ಆರ್ ಎಸ್ ಘೋಷಣೆ ಮಾಡಿದ ಫಾರ್ಮ್ ಅನ್ನು ಬ್ಯಾಂಕ್ ಗೆ ಸಲ್ಲಿಸಬೇಕು. October 1 ರಿಂದ TCS ದರದ್ದ ಶೇ. 20 ರಷ್ಟು ಹೆಚ್ಚಳವಾಗಲಿದೆ.

Join Nadunudi News WhatsApp Group

ಒಂದುವೇಳೆ ಸಾಲ ಪಡೆದು ಹಣ ರವಾನೆ ಮಾಡಿ, ಶೇ. 0.5ರಷ್ಟು ಕಡಿಮೆ ಟಿಸಿಎಸ್‌ ಪಡೆಯಬೇಕಾದರೆ ವಿದ್ಯಾರ್ಥಿ ಹೆಸರು ಮತ್ತು ಸಹ-ಸಾಲಗಾರರಾಗಿರುವ ಪೋಷಕರೊಂದಿಗೆ ಶಿಕ್ಷಣ ಸಾಲ ಮಂಜೂರಾತಿ ಪತ್ರ ಸಲ್ಲಿಸಬೇಕು. ಮೂಲ ಸಾಲದಿಂದ ಹಣ ಕ್ರೋಡೀಕರಿಸಿರುವುದಾಗಿ ಎಲ್ ಆರ್ ಎಸ್ ಅರ್ಜಿಯ ಮೇಲೆ ಗ್ರಾಹಕರ ಘೋಷಣೆ ಇರಬೇಕು. ಉದಾರೀಕೃತ ರವಾನೆ ಯೋಜನೆಯ ಅಡಿಯಲ್ಲಿ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಪೋಷಕರು TCS ವ್ಯಾಪ್ತಿಗೆ ಒಳಪಡದೆ 7 ಲಕ್ಷ ರೂ. ವರೆಗೆ ಹಣ ಕಳುಹಿಸಬಹುದು ಮತ್ತು ಈ ಮಿತಿಯನ್ನು ದಾಟುವಂತಿಲ್ಲ.

Join Nadunudi News WhatsApp Group