Toll Tax: ಟೋಲ್ ಕಟ್ಟುವ ವಾಹನ ಸವಾರರಿಗೆ ಹೊಸ ನಿಯಮ, ಹೊಸ ತಂತ್ರಜ್ಞಾನ ಅಳವಡಿಕೆ.

ಟೋಲ್ ಗೇಟ್ ನಲ್ಲಿ ಹೊಸ ರೀತಿಯ ತೆರಿಗೆ ನಿಯಮವನ್ನ ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುತ್ತದೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

New Technology In Toll Plaza: ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಹೆದ್ದಾರಿಯಲ್ಲಿ ಪ್ರಯಾಣಿಸುವವರು ಟೋಲ್ ತೆರಿಗೆ (Toll Tax) ಪಾವತಿಸಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಟೋಲ್ ತೆರಿಗೆಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲಿದೆ. ನಿತಿನ್ ಗುಡ್ಕರಿ (Nitin Gadkari) ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Nitin Gadkari said that the new technology will be implemented in the toll plazas in the near future
Image Credit: sentinelassam

ಟೋಲ್ ತೆರಿಗೆಯ ಹೊಸ ನಿಯಮಗಳು
ಟೋಲ್ ತೆರಿಗೆ ಬಗ್ಗೆ ನಿತಿನ್ ಗುಡ್ಕರಿ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ಟೋಲ್ ತೆರಿಗೆ ಪಾವತಿಸದವರಿಗೆ ಯಾವುದೇ ರೀತಿಯ ಶಿಕ್ಷೆಯನ್ನು ವಿಧಿಸುವ ಅವಕಾಶ ಇಲ್ಲ ಎಂದು ತಿಳಿಸಿದರು. ಇದರೊಂದಿಯೋಗೆ ಮುಂದಿನ ದಿನಗಳಲ್ಲಿ ಟೋಲ್ ತೆರಿಗೆ ಸಂಗ್ರಹಿಸಲು ತಂತ್ರಜ್ಞಾನ ಬಳಸಬೇಕು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಮಸೂದೆ ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ನಿತಿನ್ ಗುಡ್ಕರಿ ಅವರು ಹೇಳಿದ್ದಾರೆ. ಇಲ್ಲಿಯವರೆಗೆ ಟೋಲ್ ಪಾವತಿಸದಿದ್ದಕ್ಕೆ ಶಿಕ್ಷೆಯ ಅವಕಾಶವಿಲ್ಲ, ಆದರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇದಕ್ಕೆ ಪ್ರತ್ಯೇಕ ಕ್ರಮ ಕೈಗೊಳ್ಳುವುದಿಲ್ಲ ಎಂದಿದ್ದಾರೆ.

Nitin Gadkari has said that the technology will be implemented to cut the toll money directly from people's accounts in the coming days.
Image Credit: chinimandi

ಟೋಲ್ ತೆರಿಗೆ ಸಂಗ್ರಹಿಸಲು ತಂತ್ರಜ್ಞಾನ ಅಳವಡಿಕೆ
ಇನ್ನು 2024 ರಲ್ಲಿ ದೇಶದಲ್ಲಿ ಹಸಿರು ಎಕ್ಸ್ ಪ್ರೆಸ್ ವೆ ಗಳು ಸಿದ್ಧವಾಗಲಿದ್ದು, ರಸ್ತೆಗಳ ವಿಷಯದಲ್ಲಿ ಭಾರತವು ಅಮೇರಿಕಾ ದೇಶಕ್ಕೆ ಸಮನಾಗಿರುತ್ತದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಟೋಲ್ ತೆರಿಗೆ ಸಂಗ್ರಹಿಸಲು ತಂತ್ರಜ್ಞಾನ ಬಳಕೆ ಮಾಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಪ್ರಸ್ತುತ ಟೋಲ್ ರಸ್ತೆಯಲ್ಲಿ 10 ಕಿಲೋಮೀಟರ್ ದೂರ ಪ್ರಯಾಣಿಸಿದರೆ 75 ಕಿಲೋಮೀಟರ್ ಶುಲ್ಕ ಪಾವತಿಸಬೇಕು, ಆದರೆ ಹೊಸ ವ್ಯವಸ್ಥೆಯಲ್ಲಿ ಕ್ರಮಿಸಿದ ದೂರಕ್ಕೆ ಮಾತ್ರ ಶುಲ್ಕ ವಿಧಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group