Traffic Fine: ಈ ತಪ್ಪಿಗೆ ಕಟ್ಟಬೇಕು 20 ಸಾವಿರ ರೂ ದಂಡ, ಬೈಕ್ ಕಾರ್ ಇದ್ದವರಿಗೆ ಇಂದಿನಿಂದ ಹೊಸ ನಿಯಮ.
ಹೊಸ ಸಂಚಾರ ನಿಯಮದ ಅಡಿಯಲ್ಲಿ ಈ ತಪ್ಪು ಮಾಡಿದರೆ 20 ಸಾವಿರ ದಂಡ.
Traffic Fine For Earphones Use: ದೇಶದಲ್ಲಿ ಇತ್ತೀಚೆಗಂತೂ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ವಿವಿಧ ರೀತಿಯ ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನು ರಸ್ತೆ ಸಂಚಾರ ನಿಯಮವನ್ನು (Traffic Rule) ಉಲ್ಲಂಘಿಸಿದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ.
ರಸ್ತೆಗಳಲ್ಲಿ ವಾಹನ ಚಲಾಯಿಸುವ ಸಮಯದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಯಾದರೆ ದಂಡದ ಜೊತೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ.
ವಾಹನ ಸವಾರರಿಗೆ ಇಲಾಖೆಯಿಂದ ಎಚ್ಚರಿಕೆ
ಈಗಾಗಲೇ ಸಂಚಾರ ನಿಯಮದಲ್ಲಿ ವಿವಿಧ ನಿಯಮಗಳನ್ನು ಅಳವಡಿಸಲಾಗಿದೆ. ವಾಹನ ಸವಾರರಿಗೆ ಚಾಲನಾ ಪರವಾನಗಿ ಅತಿ ಮುಖ್ಯ ದಾಖಲೆಯಾಗಿದೆ. ವಾಹನ ಚಾಲಕರು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದ ಕಾನೂನಿನ ನಿಯಮದ ಪ್ರಕಾರ ಈ ಎಲ್ಲಾ ಸಂಚಾರ ನಿಯಮವನ್ನು ವಾಹನ ಸವಾರರು ಪಾಲಿಸಬೇಕು.
ಇನ್ನು ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಜೊತೆಗೆ ಶಿಕ್ಷೆಯನ್ನು ನೀಡಲಾಗುತ್ತದೆ. ಇದೀಗ ಸಂಚಾರ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ. ಹೊಸ ಸಂಚಾರ ನಿಯಮವನ್ನು ಅಳವಡಿಸುವ ಮೂಲಕ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ನೀವು ರಸ್ತೆಗಳಲ್ಲಿ ವಾಹನ ಚಲಾಯಿಸುವ ಮುನ್ನ ಈ ಹೊಸ ಸಂಚಾರ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಇಯಾರ್ ಫೋನ್ ಬಳಸುವವರಿಗೆ ಇನ್ನುಮುಂದೆ 20 ಸಾವಿರ ದಂಡ
ಇದೀಗ ರಸ್ತೆಗಳಲ್ಲಿ ವಾಹನ ಅಪಘಾತವನ್ನು ತಪ್ಪಿಸಲು ಹೊಸ ಸಂಚಾರ ನಿಯಮವನ್ನು ಜಾರಿಗೊಳಿಸಲಾಗಿದೆ. ಇಯಾರ್ ಫೋನ್ ಹಾಕಿಕೊಂಡು ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ. ರಸ್ತೆ ಅಪಘಾತವನ್ನು ತಪ್ಪಿಸಲು ವಾಹನ ಚಾಲನೆ ಮಾಡುವಾಗ ಇಯಾರ್ ಫೋನ್, ಹೆಡ್ ಸೆಟ್ ಇನ್ನಿತರ ವಸ್ತುಗಳ ಕಿವಿಗೆ ಹಾಕಿಕೊಂಡರೆ 20 ಸಾವಿರ ದಂಡ ವಿಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಆಗಸ್ಟ್ ನಿಂದ ಈ ಹೊಸ ನಿಯಮ ಜಾರಿಯಾಗುವ ಸಾಧ್ಯತೆ
ಬೈಕ್, ಕಾರು, ಆಟೋ ಸೇರಿದಂತೆ ಇನ್ನಿತರ ಯಾವುದೇ ವಾಹನವನ್ನು ಚಲಾಯಿಸುವಾಗ ಇಯಾರ್ ಫೋನ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುವಂತಿಲ್ಲ. ಈ ಹೊಸ ಸಂಚಾರ ನಿಯಮ ಆಗಸ್ಟ್ ನಿಂದ ಜಾರಿಯಾಗಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಆಂಧ್ರ ಪ್ರದೇಶ ಸರ್ಕಾರದ ಸಾರಿಗೆ ಇಲಾಖೆಯ ನಿಯಮಗಳಿಗೆ ತಿದ್ದುಪಡಿ ತಂದಿದೆ. ಇನ್ನುಮುಂದೆ ವಾಹನ ಸವಾರರು ಇಯಾರ್ ಫೋನ್ ಗಳನ್ನೂ ಬಳಸಿದರೆ 20 ಸಾವಿರ ದಂಡ ಕಡ್ಡಾಯವಾಗಿ ಕಟ್ಟಬೇಕೆಗುತ್ತದೆ.