New traffic rule implemented: ವಾಹನ ಸವಾರರಿಗೆ ಈ ನಡುವೆ ಹೊಸ ಹೊಸ ರೀತಿಯ ನಿಯಮಗಳು ಜಾರಿಗೆ ಬರುತ್ತಿವೆ. ಇದೀಗ ಬೈಕ್ ಸವಾರರಿಗೆ ಹೊಸ ನಿಯಮವೊಂದು ಜಾರಿಗೆ ಬಂದಿದೆ. ಈ ಹಿಂದೆ ಹೆಲ್ಮೆಟ್ (Helmet) ಧರಿಸಿದೆ ಇದ್ದರೆ ಮಾತ್ರ ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಹೆಲ್ಮೆಟ್ ಧರಿಸಿದರು ಕೂಡ ನೀವು ದಂಡ ತೆರಬೇಕಾಗುತ್ತದೆ.
ಹೊಸ ಸಂಚಾರ ನಿಯಮ ಜಾರಿ
ನೀವು ಕಾರು ಅಥವಾ ಬೈಕ್ ನಲ್ಲಿ ಹೊರಗೆ ಹೋಗುತ್ತಿದ್ದಾರೆ ಈ ನಿಯಮದ ಬಗ್ಗೆ ತಿಳಿದುಕೊಳ್ಳಿ. ಈ ನಿಯಮವನ್ನು ಪಾಲಿಸದಿದ್ದರೆ ನೀವು 2000 ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ. ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಮತ್ತು ಅಧಿಕಾರಿಗಳು ಹಲವು ಹೊಸ ನಿಯಮಗಳನ್ನು ಪರಿಚಯಿಸುತ್ತಿದ್ದಾರೆ.
ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿಯಂತ್ರಿಸಲು ಹೊಸ ಸಂಚಾರ ನಿಯಮಗಳನ್ನು ಅಳವಡಿಸಲಾಗುತ್ತಿದೆ.
ಹೆಲ್ಮೆಟ್ ಧರಿಸಿದ್ದರು 2000 ಸಾವಿರ ದಂಡ
ಹೆಲ್ಮೆಟ್ ಅನ್ನು ತಲೆಗೆ ಮಾತ್ರ ಧರಿಸಿದ್ದರು ಸರಿಯಾಗಿ ಲಾಕ್ ಮಾಡದ್ದಿದ್ದಲ್ಲಿ ಸೆಕ್ಷನ್ 194 DMVA ಪ್ರಕಾರ 1000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಬಿಐಎಸ್ ನೋಂದಾಯಿತ ಹೆಲ್ಮೆಟ್ ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಹಾಗೂ 1000 ರೂಪಾಯಿ ದಂಡ ತೆರಬೇಕಾಗುತ್ತದೆ. ಒಟ್ಟು ದಂಡ 2000 ಸಾವಿರ ಆಗಬಹುದು ಎಂದು ಹೇಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಚಾರ ನಿಯಮಗಳು ಜಾರಿಗೊಳಿಸಲಾಗಿದೆ. ವಯಸ್ಕರು ಹಾಗೂ ಮಕ್ಕಳು ಕೂಡ ಹೆಲ್ಮೆಟ್ ಧರಿಸುವ ನಿಯಮವನ್ನು ಕಡ್ಡಾಯಗೊಳಿಸಿದೆ. ಬೈಕ್ ನ ವೇಗ 40 ಕಿಲೋಮೀಟರ್ ಹೆಚ್ಚಿದರೂ 1000 ರೂಪಾಯಿ ದಂಡ ತರಬೇಕಾಗುತ್ತದೆ ಎಂದು ನಾಗರಿಕರಿಗೆ ಸೂಚಿಸಲಾಗಿದೆ. ಇದರ ಹೊರತಾಗಿ 3 ತಿಂಗಳವರೆಗೆ ಪರವಾನಗಿಯನ್ನು ರದ್ದುಗೊಳಿಸಬಹುದು.