Traffic Rule: ಇನ್ನುಮುಂದೆ ಈ ತಪ್ಪುಗಳಿಗೆ ಇಷ್ಟು ದಂಡ ಕಡ್ಡಾಯ, ವಾಹನ ಸವಾರರಿಗೆ ಇಲಾಖೆಯಿಂದ ಎಚ್ಚರಿಕೆ.
ಇಲಾಖೆಯ ಮಹತ್ವದ ನಿರ್ಧಾರ, ಈ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡ ಕಡ್ಡಾಯ.
Traffic Fine List: ದೇಶದಲ್ಲಿ ಇತ್ತೀಚೆಗಂತೂ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಇನ್ನು ರಸ್ತೆ ಸಂಚಾರ ನಿಯಮವನ್ನು (Traffic Rule) ಉಲ್ಲಂಘಿಸಿದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ. ರಸ್ತೆಗಳಲ್ಲಿ ವಾಹನ ಚಲಾಯಿಸುವ ಸಮಯದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಯಾದರೆ ದಂಡದ ಜೊತೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ.
ವಾಹನ ಸವಾರರಿಗೆ ಇಲಾಖೆಯಿಂದ ಎಚ್ಚರಿಕೆ
ಈಗಾಗಲೇ ಸಂಚಾರ ನಿಯಮದಲ್ಲಿ ವಿವಿಧ ನಿಯಮಗಳನ್ನು ಅಳವಡಿಸಲಾಗಿದೆ. ವಾಹನ ಸವಾರರಿಗೆ ಚಾಲನಾ ಪರವಾನಗಿ ಅತಿ ಮುಖ್ಯ ದಾಖಲೆಯಾಗಿದೆ. ವಾಹನ ಚಾಲಕರು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದ ಕಾನೂನಿನ ನಿಯಮದ ಪ್ರಕಾರ ಈ ಎಲ್ಲಾ ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಜೊತೆಗೆ ಶಿಕ್ಷೆಯನ್ನು ನೀಡಲಾಗುತ್ತದೆ.
ಇನ್ನುಮುಂದೆ ಈ ತಪ್ಪುಗಳಿಗೆ ಇಷ್ಟು ದಂಡ ಕಡ್ಡಾಯ
*ಅಜಾಗರೂಕರಾಗಿ ವಾಹನ ಚಾಲನೆ ಮಾಡಿದರೆ 1000, ಅತಿ ವೇಗದ ಚಲನೆಗೆ 2000, ರಸ್ತೆ ಮದ್ಯೆ ವಾಹನ ನಿಲ್ಲಿಸಿದರೆ 1000, ಸಮವಸ್ತ್ರ ಧರಿಸದೇ ಇರುವುದು, ಕರ್ಕಶ ಹಾರನ್ ಗೆ 500 ರೂ. ದಂಡ ನೀಡಬೇಕು.
*ಬಲ್ಬು ಹಾರ್ನ್ ಅಳವಡಿಸದಿರುವುದು, ಬ್ರೇಕ್ ಲೈಟ್ ಇಲ್ಲದೇ ಚಾಲನೆ, ಪ್ರಕಾಶಮಾನ ಹೆಡ್ ಲೈಟ್ ಬಳಕೆ ಮಾಡಿದರೆ 500 ರೂ. ದಂಡ ಕಡ್ಡಾಯವಾಗಿದೆ.
*ಪೊಲೀಸ್ ನೋಟಿಸ್ ಗೆ ಸಹಿ ಹಾಕದಿರುವುದು, ಲಘುವಾಹನ ಚಾಲನೆ, ಅಸಭ್ಯರೀತಿಯ ವರ್ತನೆಗೆ 2,000 ದಂಡ ವಿಧಿಸಲಾಗುತ್ತದೆ.
*ವಾಹನವನ್ನು ಬಸ್ಸು ತಂಗುದಾಣದಲ್ಲಿ ನಿಲ್ಲಿಸಿ ನಿಯಮ ಉಲ್ಲಂಘನೆ, ಡಿಎಲ್ ಇಲ್ಲದೆ ವಾಹನ ಚಾಲನೆ, ಡಿಎಲ್ ಪರಿಶೀಲನೆ ತೋರಿಸದೆ ಇರುವುದು ಇಂತಹ ತಪ್ಪುಗಳಿಗೆ 10,00 ದಂಡ ವಿಧಿಸಲಾಗುತ್ತದೆ.
*ಇನ್ನು ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದರೆ 25,000 ದಂಡವನ್ನು ಕೋರ್ಟ್ ವಿಧಿಸುತ್ತದೆ.
*ಎಫ್ ಎ ಬಾಕ್ಸ್ ಹಾಕದೆ ಇರುವುದು, ಆರ್ ಸಿ ವಿವಿರ ಬಾಡಿಗೆಯಲ್ಲಿ ಬರೆಯದೆ ಇರುವುದು, ನಂಬರ್ ಪ್ಲೇಟ್ ಬಳಸದಿರುವುದು, ಸೈಡ್ ಮಿರರ್ ಹಾಗೂ ಹ್ಯಾಂಡ್ ಬ್ರೇಕ್ ಇಲ್ಲದಿರುವುದು, ಅಗ್ನಿ ಶಾಮಕ ಸಾಧನ ಅಳವಡಿಸದಿರುವುದು, ದೂಮಪಾನ ಮಾಡುತ್ತ ವಾಹನ ಓಡಿಸುವುದು, ಟ್ರಾಫಿಕ್ ಲೈಟ್, ಪೊಲೀಸ್ ಸಿಗ್ನಲ್ ಸೇರಿದಂತೆ ರಸ್ತೆ ನಿಯಮವನ್ನು ಉಲ್ಲಂಘಿಸಿದರೆ 5,00 ರೂ. ದಂಡ ಪಾವತಿಸಬೇಕಾಗುತ್ತದೆ.