Traffic Rules: ವಾಹನಗಳ ಮೇಲೆ ಈ ರೀತಿ ಬರೆಸಿಕೊಂಡರೆ 2000 ರೂ ದಂಡ, ಜಾರಿಗೆ ಬಂತು ಹೊಸ ಟ್ರಾಫಿಕ್ ರೂಲ್ಸ್.
ವಾಹನ ಸವಾರರೆ ಎಚ್ಚರ, ವಾಹನಗಳಲ್ಲಿ ಈ ರೀತಿ ಬರೆಸಿಕೊಂಡರೆ ಕಟ್ಟಬೇಕು ಹೆಚ್ಚಿನ ದಂಡ.
New Rule For Vehicle Owners: ಇತ್ತೀಚಿಗೆ ವಾಹನ ಸವಾರರರಿಗೆ ಹೊಸ ಹೊಸ ನಿಯಮ ಜಾರಿಯಾಗುತ್ತಿದೆ. ಈಗಾಗಲೇ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡವನ್ನು ವಿಧಿಸಲಾಗುತ್ತಿದೆ. ಸರ್ಕಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದೀಗ ವಾಹನ ಮಾಲೀಕರು ಸಂಚಾರ ನಿಯಮ ಉಲ್ಲಂಘನೆಯ ಜೊತೆಗೆ ಈ ನಿಯಮವನ್ನು ನಿರ್ಲಕ್ಷಿಸಿದರೆ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ.
ವಾಹನ ಸವಾರರಿಗೆ ಮಹತ್ವದ ಮಾಹಿತಿ
ಈಗಾಗಲೇ ಜಾತಿ, ಧರ್ಮದ ಹೆಸರಿನಲ್ಲಿ ಸಾಕಷ್ಟು ವಿವಾದಾತ್ಮಕ ಪ್ರಕರಣಗಳು ನಡೆಯುತ್ತವೆ. ಬೇರೆ ಜಾತಿಗೆ ಸೇರಿದವರು ಇನ್ನೊಂದು ಜಾತಿಯ ಬಗ್ಗೆ ನಿಂದನೆ ಮಾಡುವುದು ಸಾಮಾನ್ಯ. ಇದೀಗ ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ವಿವಾದಗಳನ್ನು ತಡೆಯಲು ಹೊಸ ನಿಯಮ ಜಾರಿಗೊಳಿಸಲಾಗಿದೆ. ವಾಹನ ಮಾಲೀಕರು ಈ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ.
ವಾಹನಗಳ ಹಿಂದೆ ಬರೆಸುವವರಿಗೆ ಹೊಸ ನಿಯಮ
ಕೆಲ ವಾಹನಗಳ ಹಿಂದೆ ಸಾಲುಗಳನ್ನು ಬರೆಯಲಾಗುತ್ತದೆ. ಗಾದೆ ಮಾತುಗಳು, ಹಿತ ನುಡಿಗಳನ್ನು ಕೆಲವರು ಬರೆದಿರುತ್ತಾರೆ. ಇನ್ನು ಕೆಲವು ವಾಹನಗಳಲ್ಲಿ ಜಾತಿ, ಧರ್ಮ ಇತ್ಯಾಧಿಗಳ ಬಗ್ಗೆ ಬರೆಸಲಾಗುತ್ತದೆ. ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿರುವ ಯೋಗಿ ಆದಿತ್ಯನಾಥ್ ಅವರು ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವಾಹನಗಳ ಮೇಲೆ ಜಾತಿ, ಧರ್ಮವನ್ನು ಬಿಂಬಿಸುವ ಸಾಲುಗಳನ್ನು ಬರೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಇಂತಹ ವಾಹನಗಳಿಗೆ 2000 ದಂಡ
ಕಾರುಗಳು, ಬೈಕ್ ಗಳು ಸೇರಿದಂತೆ ಯಾವುದೇ ರಸ್ತೆಯಲ್ಲಿ ಸಂಚರಿಸುವ ವಾಹನಗಳಲಲ್ಲಿ ಜಾತಿ,ಧಾರ್ಮಿಕ ಅಥವಾ ಪ್ರಭಾವಶಾಲಿ ಸರ್ಕಾರೀ ಸ್ಟನ್ ಸಂಬಂಧಿತ ಸ್ಟಿಕ್ಕರ್ ಗಳನ್ನೂ ಅಂಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಾಗುತ್ತದೆ. ಜಾತಿ, ಧರ್ಮದ ಬಗ್ಗೆ ವಾಹನಗಳಲ್ಲಿ ಬರೆಸಿಕೊಂಡರೆ 2000 ದಂಡ ಪಾವತಿಸಬೇಕಾಗುತ್ತದೆ.
ಈಗಾಗಲೇ 2300 ವಾಹನ ಮಾಲೀಕರಿಗೆ ದಂಡ ವಿಧಿಸಲಾಗಿದೆ. ವಾಹನ ಮೋಟಾರು ಕಾಯ್ದೆ ಅಡಿಯಲ್ಲಿ ಈ ಪ್ರಕರಣಕ್ಕೆ ದಂಡ ವಿಧಿಸಲಾಗುತ್ತದೆ. ಸದ್ಯ ಈ ನಿಯಮ ಉತ್ತರ ಪ್ರದೇಶದಲ್ಲಿ ಜಾರಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.