TVS Electric: 2 ಘಂಟೆ ಚಾರ್ಜ್ ಮಾಡಿದರೆ 80 Km ಮೈಲೇಜ್, ಅಗ್ಗದ ಇನ್ನೊಂದು TVS ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್.
ಟಿವಿಎಸ್ ತನ್ನ ಹೊಸ ಎಲೆಕ್ಟ್ರಿಕ್ ಮಾದರಿಯನ್ನು ಆಗಸ್ಟ್ 23 ರಂದು ಬಿಡುಗಡೆಗೊಳಿಸಲು ತಯಾರಾಗಿದೆ.
TVS Creon Electric Scooter: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಲಗ್ಗೆ ಇಡುತ್ತಿವೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿದೆ. ಪೆಟ್ರೋಲ್ ಡೀಸಲ್ ಬೆಲೆಯ ಏರಿಕೆಯ ಪರಿಣಾಮವಾಗಿ ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಸೇಲ್ ಕಾಣುತ್ತಿದೆ.
ಬೇಡಿಕೆ ಹೆಚ್ಚುತ್ತಿರುವ ಕಾರಣ ವಿವಿಧ ಪ್ರತಿಷ್ಠಿತ ಕಂಪನಿಗಳು ಹೊಸ ಹೊಸ ಮಾದರಿಯ ಸ್ಕೂಟರ್ ಅನ್ನು ಪರಿಚಯಿಸುತ್ತಿವೆ. ಇದೀಗ ಮಾರುಕಟ್ಟೆಯಲ್ಲಿ ಟಿವಿಎಸ್ (TVS) ತನ್ನ ಹೊಸ ಎಲೆಕ್ಟ್ರಿಕ್ ಮಾದರಿಯಲ್ಲಿ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
ಬಿಡುಗಡೆಗೆ ಸಜ್ಜಾಗಿದೆ ಟಿವಿಎಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್
ಟಿವಿಎಸ್ ತನ್ನ ಹೊಸ ಎಲೆಕ್ಟ್ರಿಕ್ ಮಾದರಿಯನ್ನು ಆಗಸ್ಟ್ 23 ರಂದು ಬಿಡುಗಡೆಗೊಳಿಸಲು ತಯಾರಾಗಿದೆ. ಹೊಸ ಟೀಸರ್ ಬಿಡುಗಡೆಗೊಳ್ಳುವ ಮೂಲಕ ಟಿವಿಎಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ ಅನಾವರಣಗೊಂಡಿದೆ. TVS ಹೊಸ ಎಲೆಕ್ಟ್ರಿಕ್ ಸ್ಕೂಟರ್ ಓಲಾ S1 ಪ್ರೊ, Ather 450X ಮತ್ತು ಸಿಂಪಲ್ ಒನ್ ಸ್ಕೂಟರ್ ಗಳ ಜೊತೆ ಸ್ಪರ್ದಿಸಲಿದೆ.
ಟಿವಿಎಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ Creon ಆಧಾರಿತ ಫೀಚರ್ ಅನ್ನು ಹೊಂದಿದೆ. ನೂತನ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ಧಿಯ ಹಂತದಲ್ಲಿದೆ. ಇನ್ನು ನೂತನ ಎಲೆಕ್ಟ್ರಿಕ್ ಮಾದರಿಯ ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಸದ್ಯದಲ್ಲೇ ನೂತನ ವೈಶಿಷ್ಟ್ಯಗಳೊಂದಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.
ಟಿವಿಎಸ್ Creon ಇ – ಸ್ಕೂಟರ್
2018 ರ ಆಟೋ ಎಕ್ಸ್ಪೋದಲ್ಲಿ Creon ಇ – ಸ್ಕೂಟರ್ ಅನ್ನು ಬಹಿರಂಗಪಡಿಸಲಾಗಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್ ತೀಕ್ಷ್ಣವಾದ ಪ್ಯಾನೆಲಿಂಗ್, ಅಗಲವಾದ ಹ್ಯಾಂಡಲ್ ಬಾರ್, ಬ್ಲ್ಯಾಕ್ಡ್-ಔಟ್ ಹೆಡ್ ಲ್ಯಾಂಪ್ ಕೇಸಿಂಗ್, ಸ್ಪೋರ್ಟಿ ಗ್ರಾಫಿಕ್ಸ್, ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದೆ. ಇನ್ನು ಟಿವಿಎಸ್ Creon ಇ – ಸ್ಕೂಟರ್ ಗೆ ಮಾರಿಕಟ್ಟೆಯಲ್ಲಿ 1.60 ಲಕ್ಷ ಬೆಲೆಯನ್ನು ನಿಗದಿಪಡಿಸಲಾಗಿದೆ.
ಈ ಟಿವಿಎಸ್ Creon ಇ – ಸ್ಕೂಟರ್ ಬರೋಬ್ಬರಿ 80 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಂಪನಿಯು ಸದ್ಯದಲ್ಲಿ ಬಿಡುಗಡೆಗೊಳಿಸಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ Creon ಸ್ಕೂಟರ್ ಗಿಂತ ಹೆಚ್ಚಿನ ಮೈಲೇಜ್ ನೀಡಲಿದೆ. ಹೆಚ್ಚಿನ ಫೀಚರ್ ಗಳನ್ನೂ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸಿದ ಕಾರಣ ಹಳೆಯ ಮಾದರಿಯ Creon ಸ್ಕೂಟರ್ ಗಿಂತ ಬೆಲೆ ಕೊಂಚ ಅಧಿಕವಿರಲಿದೆ. ಇನ್ನು ಸ್ಕೂಟರ್ ಚಾರ್ಜ್ ಮಾಡಲು ಎರಡು ಘಂಟೆ ಸಮಯ ತಗೆದುಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.