UPI Lite X: UPI ಬಳಸುವವರಿಗೆ ಇನ್ನೊಂದು ಹೊಸ ಸೇವೆ, UPI ಲೈಟ್ X ಮೂಲಕ ಡೇಟಾ ಇಲ್ಲದೆ ಹಣ ಕಳುಹಿಸಿ.

ಇನ್ನುಮುಂದೆ ಆಫ್ ಲೈನ್ ನಲ್ಲಿ ಕೂಡ ಯುಪಿಐ ವಹಿವಾಟನ್ನು ಮಾಡಬಹುದಾಗಿದೆ.

New UPI Lite X Feature For UPI Payment: ದೇಶದಲ್ಲಿ UPI ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. UPI ಬಳಕೆದಾರರಿಗೆ ವಾರಕ್ಕೆ ವೊಂದಾದರೂ ಹೊಸ ಹೊಸ Update ಪರಿಚಯವಾಗುತ್ತಿದೆ. UPI ಬಳಕೆದಾರರು ಇತ್ತೀಚಿಗೆ ಹೆಚ್ಚಿನ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಜನರು ಹೆಚ್ಚಾಗಿ ನಗದು ರಹಿತ ವಹಿವಾಟನ್ನು ಬಳಸುತ್ತಿದ್ದಾರೆ ಎನ್ನಬಹುದು.

UPI Payment ಗಾಗಿ Google pay ,PhonePe Paytm ಸೇರಿದಂತೆ ಇನ್ನಿತರ Application ಗಳು ಬಳಕೆಯಲ್ಲಿವೆ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ದೇಶದ ಕೋಟ್ಯಂತರ ಜನರ ಸ್ನೇಹಿಯಾಗಿರುವ UPI ಸದ್ಯ ಮತ್ತೊಂದು ನೂತನ ಫೀಚರ್ ಅನ್ನು ಗ್ರಾಹಕರಿಗೆ ನೀಡಲಿದೆ. ಈ ಹೊಸ ಫೀಚರ್ UPI ಬಳಕೆದಾರರಿಗೆ ಇನ್ನಷ್ಟು ಸಹಾಯವಾಗಲಿದೆ.

UPI Lite X Feature
Image Credit: Indiatimes

UPI ಬಳಕೆದಾರರಿಗೆ ಲಭ್ಯವಾಗಲಿದೆ UPI Lite X
ಇನ್ನು ಸಾಮಾನ್ಯವಾಗಿ ಯುಪಿಐ ವಹಿವಾಟುಗಳನ್ನು ನಡೆಸಲು ಇಂಟರ್ನೆಟ್ ನ ಅಗತ್ಯವಿರಬೇಕಾಗುತ್ತದೆ. ಇನ್ನುಮುಂದೆ ಆಫ್ ಲೈನ್ ನಲ್ಲಿ ಕೂಡ ಯುಪಿಐ ವಹಿವಾಟನ್ನು ಮಾಡಬಹುದಾಗಿದೆ. ಆಫ್ ಲೈನ್ ನಲ್ಲಿ ಯುಪಿಐ ವಹಿವಾಟನ್ನು ನಡೆಸಲು ಇದೀಗ ಹೊಸ ಸೇವೆಯನ್ನು ಪರಿಚಯಿಸಲಾಗಿದೆ.

ಸದ್ಯ UPI ಬಳಕೆದಾರರಿಗಾಗಿ UPI Lite X ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಈ ವೈಶಿಷ್ಯ್ಯವು ನಿಮಗೆ ಇಂಟರ್ನೆಟ್ ಇಲ್ಲದೆ ವಹಿವಾಟನ್ನು ನಡೆಸಲು ಸಹಾಯ ಮಾಡುತ್ತದೆ. National Payment Corporation of India ಸದ್ಯ UPI Lite X ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಇತ್ತೀಚಿಗೆ ನಡೆದ Global FinTech Fest ನಲ್ಲಿ UPI Lite X ವೈಶಿಷ್ಟ್ಯವನ್ನು NPCI ಪರಿಚ್ಯಿಸಿದೆ. ಇನ್ನುಮುಂದೆ ನಿಮ್ಮ ಫೋನ್ NFC ಸೌಲಭ್ಯವನ್ನು ಹೊಂದಿದ್ದರೆ ನೀವು UPI Lite X ಅನ್ನು ಬಳಸಬಹುದು.

New UPI Lite X Feature For UPI Payment
Image Credit: Bqprime

UPI Lite X ಅನ್ನು ಬಳಸುವ ವಿಧಾನ ಹೇಗೆ..?
*UPI Lite X ನ ವೈಶಿಷ್ಟ್ಯವು ಭೀಮ್ ಅಪ್ಲಿಕೇಶನ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ವಿಶಿಷ್ಟ್ಯವನ್ನು ಬಳಸಲು ಬಳಕೆದಾರರಿಗೆ NFC ಬೆಂಬಲದೊಂದಿಗೆ Android ಸ್ಮಾರ್ಟ್‌ ಫೋನ್ ಅಗತ್ಯವಿದೆ. ಈ ವೈಶಿಷ್ಟ್ಯವು iPhone ನಲ್ಲಿ ಬೆಂಬಲಿಸುವುದಿಲ್ಲ.

Join Nadunudi News WhatsApp Group

*UPI Lite X ವೈಶಿಷ್ಟ್ಯವನ್ನು ಬಳಸಲು, ಕಳುಹಿಸುವವರು ಮತ್ತು ಸ್ವೀಕರಿಸುವವರು ಇಬ್ಬರೂ BHIM ಅಪ್ಲಿಕೇಶನ್‌ ನ ಇತ್ತೀಚಿನ ಆವೃತ್ತಿಯನ್ನು ಸ್ಥಾಪಿಸಿರಬೇಕು.

*BHIM ಅಪ್ಲಿಕೇಶನ್ ತೆರೆಯಿರಿ ಮತ್ತು ‘UPI ಲೈಟ್ X ಬ್ಯಾಲೆನ್ಸ್’ ಮೆನುಗೆ ಹೋಗಿ ನಂತರ
ಸಕ್ರಿಯಗೊಳಿಸು ಬಟನ್ ಮೇಲೆ ಕ್ಲಿಕ್ ಮಾಡಿ.

New UPI Lite X Feature For UPI Payment
Image Credit: Timesofindia

*Offline Payment ಅನುಮತಿಸಲು ಟಿಕ್‌ ಬಾಕ್ಸ್ ಅನ್ನು ಟಾಗಲ್ ಮಾಡಿ ಮತ್ತು ನಂತರ ‘ಈಗ ಸಕ್ರಿಯಗೊಳಿಸಿ’ ಟ್ಯಾಪ್ ಮಾಡಬೇಕು.

*ನಿಮ್ಮ UPI ಲೈಟ್ ವ್ಯಾಲೆಟ್‌ ಗೆ ಹಣವನ್ನು ಸೇರಿಸಲು ಅಪ್ಲಿಕೇಶನ್ ನಿಮ್ಮನ್ನು ಪ್ರೇರೇಪಿಸುತ್ತದೆ. ಮೊತ್ತವನ್ನು ನಮೂದಿಸಿ ಹಾಗೂ UPI ಲೈಟ್ X ಸಕ್ರಿಯಗೊಳಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.

*ನೀವು UPI ಪಿನ್ ನಮೂದಿಸಲು ನಂತರ ನಿಮ್ಮ ವ್ಯಾಲೆಟ್‌ ಗೆ ಹಣವನ್ನು ಸೇರಿಸಲಾಗುತ್ತದೆ.ಇದಾದ ಬಳಿಕ ನೀವು UPI ಲೈಟ್ X ಅನ್ನು ಬಳಸಲು ಪ್ರಾರಂಭಿಸಬಹುದು.

Join Nadunudi News WhatsApp Group