ಕರೋನ ಮಹಾಮಾರಿ ಈ ಭೂಮಿಗೆ ಬಂದು ಎರಡು ವರ್ಷಗಳು ಕಳೆದಿದ್ದು ಇದು ಲಕ್ಷಾಂತರ ಜನರ ಪ್ರಾಣವನ್ನ ಬಲಿ ತೆಗೆದುಕೊಳ್ಳುವುದರ ಮೂಲಕ ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕಾಲ ಕಳೆಯುವಂತೆ ಮಾಡಿದೆ. ಇನ್ನು ಈಗಲೂ ಅದೆಷ್ಟೋ ಜನರು ಕರೋನ ಮಹಾಮಾರಿಯ ಕಾರಣ ಸಾವು ಬದುಕಿನ ನಡುವೆ ಹೋರಾಟವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಕರೋನ ಲಸಿಕೆ ಅಭಿಯಾನ ಬಹಳ ವೇಗವಾಗಿ ಸಾಗುತ್ತಿದ್ದರು ಕೂಡ ಕರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನು ಈಗ ಕರೋನ ಸೋಂಕಿನ ಆತಂಕದ ನಡುವೆ ಜನರಿಗೆ ಇನ್ನೊಂದು ಶಾಕ್ ಎದುರಾಗಿದೆ ಎಂದು ಹೇಳಬಹುದು. ಹೌದು ಕರೋನ ಒಂಕಿಂದ ಚೇತರಿಸಿಕೊಳ್ಳುವ ಮುನ್ನವೇ ಈಗ ಇನ್ನೊಂದು ಮಹಾಮಾರಿ ಕಾಣಿಸಿಕೊಂಡಿದ್ದು ಹಲವು ಈ ಸೋಂಕಿನ ಕಾರಣ ಜೀವವನ್ನ ಕಳೆದುಕೊಂಡಿದ್ದಾರೆ.
ಹಾಗಾದರೆ ಈ ಸೋಂಕು ಯಾವುದು ಮತ್ತು ಇದರ ಲಕ್ಷಣಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಕರೋನ ಸೋಂಕು ಕಡೀ ಆಗುತ್ತಿರುವ ಬೆನ್ನಲ್ಲೇ ಹಾಂಕಾಂಗ್ ನಲ್ಲಿ ಬ್ಯಾಕ್ಟೀರಿಯಲ್ ಸೋಂಕು ಹರಡಿದ ಸುದ್ದಿ ಭಯ ಹುಟ್ಟಿಸಿದೆ. ಈ ಸೋಂಕಿಗೆ ಈಗಾಗಲೇ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ. ಇನ್ನು ಈ ಸೋಂಕು ಹರಡಲು ಕಾರಣ ಸಿಹಿ ನೀರಿನ ಮೀನಿನ ಸೇವನೆ ಕಾರಣ ಏನು ಹೇಳಲಾಗುತ್ತಿದೆ. ಅಲ್ಲಿನ ಸಮುದ್ರಾಹಾರ ತಜ್ಞರು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಿಹಿ ನೀರಿನ ಮೀನನ್ನು ಮುಟ್ಟದಂತೆ ಎಚ್ಚರಿಕೆ ನೀಡಿದ್ದಾರೆ. ಗ್ರೂಪ್ ಬಿಯ ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾ ಸೋಂಕಿನ 79 ಪ್ರಕರಣಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2021 ರಲ್ಲಿ ವರದಿಯಾಗಿದ್ದವು ಮತ್ತು ಇದಾದ ನಂತರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ, ಇನ್ನು 79 ಮಂದಿಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆಂದು ವರದಿ ಮಾಡಲಾಗಿದೆ. ಪ್ರತಿ ತಿಂಗಳು ಸುಮಾರು 26 ಹೊಸ ಪ್ರಕರಣಗಳು ಪತ್ತೆಯಾಗ್ತಿವೆ. ವರದಿ ಪ್ರಕಾರ ತ್ಸುಯೆನ್ ವಾನ್‌ನ ವೆಟ್ ಮಾರ್ಕೆಟ್ ಮತ್ತು ಯುಯೆನ್ ಲಾಂಗ್‌ನಲ್ಲಿರುವ ಕಂಪನಿಯಲ್ಲಿ ಹೊಸ ಪ್ರಕರಣಗಳು ಕಾಣಿಸಿಕೊಳ್ತಿವೆ. ಈ ರೋಗಿಗಳು ಸಿಹಿನೀರಿನ ಮೀನುಗಳನ್ನು ನೋಡಿಕೊಳ್ಳುವವರಾಗಿದ್ದು ಮತ್ತು ಅದರಲ್ಲಿ ಕೆಲವರು ಅದನ್ನು ಕೈನಲ್ಲಿ ಮುಟ್ಟಿದವರಿದ್ದಾರೆ. ಇದನ್ನು ಗ್ರೂಪ್ ಬಿ ಸ್ಟ್ರೆಪ್‌ಎಂದೂ ಕರೆಯುತ್ತಾರೆ.
ಇದು ಸಾಮಾನ್ಯವಾಗಿ ಕರುಳು, ಮೂತ್ರ ಮತ್ತು ಸಂತಾನೋತ್ಪತ್ತಿಯಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕರಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಯಾವುದೇ ರೋಗಲಕ್ಷಣ ಕಾಣಿಸುವುದಿಲ್ಲ, ಆದರೆ ರಕ್ತ, ಮೂಳೆ, ಶ್ವಾಸಕೋಶಗಳಲ್ಲಿ ಸೋಂಕು ಉಂಟುಮಾಡುತ್ತದೆ. ನವಜಾತ ಶಿಶುಗಳು, ವೃದ್ಧರು ಹಾಗೂ ಅನೇಕ ದಿನಗಳಿಂದ ರೋಗದಿಂದ ಬಳಲುತ್ತಿರುವವರಿಗೆ ಹೆಚ್ಚಿನ ಹಾನಿಯುಂಟು ಮಾಡುತ್ತದೆ. ಇನ್ನು ಈ ಸೋಂಕಿನ ನಂತ್ರ ನ್ಯುಮೋನಿಯಾ, ರಕ್ತದ ಸೋಂಕು, ಮೂತ್ರದ ಸೋಂಕು ಕಾಣಿಸಿಕೊಳ್ಳುತ್ತದೆ. ಈ ಪ್ರಕರಣ ಹೆಚ್ಚಾಗುತ್ತಿದ್ದಂತೆ ಸಮುದ್ರ ಆಹಾರವನ್ನು ಹಸಿಯಾಗಿ ಸೇವನೆ ಮಾಡಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಗುರುವಾರ ಮತ್ತೆ 8 ಪ್ರಕರಣ ಕಾಣಿಸಿಕೊಂಡಿದ್ದು ಒಟ್ಟು 88 ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಸ್ನೇಹಿತರೆ ಈ ಸೋಂಕಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.