ಜನವರಿ 1 ರಿಂದ ಈ ನಿಯಮಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ, ಇವೆಲ್ಲದಕ್ಕೂ ಕಟ್ಟಬೇಕು ಶುಲ್ಕ.

2021 ರ ವರ್ಷ ಕಳೆದು ಹೊಸ ವರ್ಷ ಆರಂಭ ಆಗಲು ಇನ್ನು ಎರಡು ದಿನಗಳು ಮಾತ್ರ ಭಾಕಿ ಉಳಿದುಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೊಸ ವರ್ಷವನ್ನ ಅದ್ದೂರಿಯಾಗಿ ಸ್ವಾಗತ ಮಾಡಲು ಜನರು ಕಾತುರದಿಂದ ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು. ಪ್ರಸ್ತುತ ವರ್ಷದಲ್ಲಿ ಆದ ಕೆಲವು ಕಹಿ ನೆನಪುಗಳನ್ನ ಮರೆತು ಹೊಸ ವರ್ಷವನ್ನ ಸಂತಸದಿಂದ ಆರಂಭ ಮಾಡಲು ಜನರು ಕಾಯುತ್ತಿದ್ದಾರೆ. ಇನ್ನು ಹೊಸ ವರ್ಷದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡ ಕೆಲವು ಹೊಸ ನಿಯಮಗಳನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಿದ್ದು ಇದು ಜನರಿಗೆ ಶಾಕ್ ಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಜನವರಿ ಮೊದಲ ದಿನದಿಂದ ಕೆಲವು ನಿಯಮಗಳಲ್ಲಿ ಮಹತ್ವದ ಬದಲಾವಣೆ ಆಗುತ್ತಿದ್ದು ಇದು ಜನರ ಜೇಬಿಗೆ ನೇರವಾಗಿ ಕತ್ತರಿಯನ್ನ ಹಾಕಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಜನವರಿ 1 ನೇ ತಾರೀಕಿನಿಂದ ಆಗಲಿರುವ ಆ ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಬದಲಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೇ ಏಟಿಎಂ ಬಳಸುವವರಿಗೆ ಹೊಸ ವರ್ಷ ಬಹಳ ದುಬಾರಿಯಾಗಲಿದೆ ಎಂದು ಹೇಳಬಹುದು. ಏಟಿಎಂ ವಹಿವಾಟಿನ ಶುಲ್ಕ ಹೊಸ ವರ್ಷದಿಂದ ಬಹಳ ಏರಿಕೆ ಆಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಹೊಸ ವರ್ಷದಿಂದ ಜನರು ಉಚಿತ ವಹಿವಾಟಿನ ಮಿತಿಗಿಂತ ಹೆಚ್ಚಿನ ಸಮಯದ ಏಟಿಎಂ ಬಳಕೆ ಮಾಡಿದರೆ 21 ರೂಪಾಯಿಯ ಜೊತೆಗೆ GST ಕೂಡ ಪಾವತಿ ಮಾಡಬೇಕು.

new year changes

ಈ ಹಿಂದೆ ಜನರು ಉಚಿತ ವಹಿವಾಟಿನ ನಂತರ ಏಟಿಎಂ ಬಳಕೆ ಮಾಡಿದರೆ 20 ರೂಪಾಯಿ ಮಾತ್ರ ಶುಲ್ಕ ಪಾವತಿ ಮಾಡಬೇಕಿತ್ತು, ಆದರೆ ಇನ್ನುಮುಂದೆ ಜನರು 21 ರೂಪಾಯಿ ಜೊತೆಗೆ GST ಶುಲ್ಕ ಪಾವತಿ ಮಾಡಬೇಕು. ಇನ್ನು ಕಳೆದ ಎರಡು ತಿಂಗಳುಗಳಿಂದ ಸ್ಥಿರತೆಯನ್ನ ಕಾಯ್ದುಕೊಂಡು ಬಂದಿದ್ದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ವರ್ಷದ ಮೊದಲ ದಿನವೇ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಅಂಚೆ ಕಚೇರಿಯಲ್ಲಿ ಯಾವುದೇ ಖಾತೆಯನ್ನ ಹೊಂದುರುವ ಜನರು ಇನ್ನುಮುಂದೆ ಹಣ ತೆಗೆಯುವಾಗ ಮತ್ತು ಹಣವನ್ನ ಜಮಾ ಮಾಡುವ ಶುಲ್ಕವನ್ನ ಪಾವತಿ ಮಾಡಬೇಕು.

ಹೌದು ಅಂಚೆ ಕಚೇರಿಯ ಪ್ರತಿ ವಹಿವಾಟಿಗೆ ಇನ್ನುಮುಂದೆ ಜನರು 25 ರೂಪಾಯಿ ಶುಲ್ಕವನ್ನ GST ಜೊತೆ ಪಾವತಿ ಮಾಡಬೇಕು. ಇನ್ನು ಖಾಸಗಿ ವಲಯದ ಸಾಲದಾತ ICICI ಬ್ಯಾಂಕ್ ಜನವರಿ 1 ರಿಂದ ಜಾರಿಗೆ ಬರುವಂತೆ ಉಳಿತಾಯ ಖಾತೆಗಳಿಗೆ ತನ್ನ ಸೇವಾ ಶುಲ್ಕವನ್ನು ಹೆಚ್ಚಿಸಲಿದೆ. ಇನ್ನು ಜನವರಿ ಮೊದಲ ದಿನದಿಂದ ಜನರು ಖರೀದಿ ಮಾಡುವ ಎಲ್ಲಾ ರೀತಿಯ ಬಟ್ಟೆಗಳ ದರದಲ್ಲಿ ಏರಿಕೆ ಆಗಲಿದೆ. ಹೌದು ಕೇಂದ್ರ ಸರ್ಕಾರವು ಜವಳಿ ಮೇಲಿನ ಜಿಎಸ್ ಟಿ ದರವನ್ನು ಶೇಕಡಾ 5 ರಿಂದ 12 ಕ್ಕೆ ಏರಿಸಿದೆ. ಸ್ನೇಹಿತರೆ ಹೊಸ ವರ್ಷದಿಂದ ಏರಿಕೆ ಆಗುತ್ತಿರುವ ಈ ಎಲ್ಲಾ ದರಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

new year changes

Join Nadunudi News WhatsApp Group