ದೇಶದಲ್ಲಿ ಅತೀ ಹೆಚ್ಚು ಜನರು ಬಳಕೆ ಮಾಡುವ ಸಿಮ್ ಅಂದರೆ ಅದು ಏರ್ಟೆಲ್ ಮತ್ತು ಜಿಯೋ ಸಿಮ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಏರ್ಟೆಲ್ ಮತ್ತು ಜಿಯೋ ಜನರಿಗೆ ಬಹಳ ಒಳ್ಳೆಯ ಸೇವೆಯನ್ನ ನೀಡುತ್ತಿದ್ದು ಜನರು ಹೆಚ್ಚು ಈ ಸಿಮ್ ಗಳನ್ನ ಬಳಕೆ ಮಾಡುತ್ತಾರೆ. ಇನ್ನು ಜಿಯೋ ಸಿಮ್ ದೇಶಕ್ಕೆ ಬರುವ ಮುನ್ನವೇ ದೇಶದಲ್ಲಿ ಅತೀ ಹೆಚ್ಚು ಜನರು ಬಳಕೆ ಮಾಡುತ್ತಿದ್ದ ಸಿಮ್ ಅಂದರೆ ಅದು ಏರ್ಟೆಲ್ ಎಂದು ಹೇಳಬಹುದು. ಹೌದು ಏರ್ಟೆಲ್ ತನ್ನ ಗ್ರಾಹಕರಿಗೆ ಅದೆಷ್ಟೋ ವರ್ಷಗಳಿಂದ ಬಹಳ ಒಳ್ಳೆಯ ಸೇವೆಯನ್ನ ನೀಡುತ್ತಾ ಬರುತ್ತಿದ್ದು ಜನರ ವಿಶ್ವಾಸವನ್ನ ಗಳಿಸಿಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಏರ್ಟೆಲ್ ಸಿಮ್ ಬಳಕೆ ಮಾಡುವವರಿಗೆ ದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ಇಂದಿನಿಂದ ಹೊಸ ನಿಯಮ ಜಾರಿಗೆ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಭಾರತದ ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದು, ಡೇಟಾ ಮತ್ತು ಕರೆಗಳ ದರ ಇಂದಿನಿಂದ ಹೆಚ್ಚಳ ಮಾಡಿದೆ. ಭಾರತೀಯ ವಿವಿಧ ಯೋಜನೆಗಳಿಗೆ ಟೆಲಿಕಾಂ ಆಪರೇಟರ್ ತನ್ನ ಪ್ರೀಪೇಯ್ಡ್ ಯೋಜನೆಯ ಬೆಲೆಗಳನ್ನು ಹೆಚ್ಚಿಸಲಿದೆ ಎಂದು ಭಾರ್ತಿ ಏರ್ ಟೆಲ್ ಇಂದು ಘೋಷಿಸಿದೆ.
ಇನ್ನು ನೀವು ಏರ್ಟೆಲ್ ಗ್ರಾಹಕರಾಗಿದ್ದು ನೀವು ಇನ್ನುಮುಂದೆ ಕರೆ ಮಾಡಲು ರಿಚಾರ್ಜ್ ಮಾಡುದಾದರೆ ಶೇಕಡಾ 20 ರಷ್ಟು ಹೆಚ್ಚಿನ ಹಣವನ್ನ ರಿಚಾರ್ಜ್ ಮಾಡುವ ಸಮಯದಲ್ಲಿ ನೀಡಬೇಕು. ಇನ್ನು ನೀವು ಅನಿಯಮಿತ ಕರೆಯ ಜೊತೆಗೆ ಡೇಟಾ ಸೇವೆಗೆ ರಿಚಾರ್ಜ್ ಮಾಡಿಸಿದರೆ ನೀವು ಶೇಕಡಾ 25 ರಷ್ಟು ಹೆಚ್ಚಿನ ಹಣವನ್ನ ರಿಚಾರ್ಜ್ ಮಾಡುವ ಸಮಯದಲ್ಲಿ ನೀಡಬೇಕು ಎಂದು ಕಂಪನಿ ತಿಳಿಸಿದೆ. ನೀವು ಇನ್ನುಮುಂದೆ ಅನಿಯಮಿತ ಕರೆ ಅಥವಾ ದಾಟವನ್ನ ರಿಚಾರ್ಜ್ ಮಾಡಿದರೆ ಶೇಕಡಾ 25 ರಷ್ಟು ಹಣವನ್ನ ಹೆಚ್ಚು ಪಾವತಿ ಮಾಡ್ಬಾಕೆಕು ಮತ್ತು ಖಾಲಿ ಕರೆ ಮಾಡಲು ರಿಚಾರ್ಜ್ ಮಾಡಿಸಿದರೆ ಶೇಕಡಾ 20 ರಷ್ಟು ಹೆಚ್ಚು ಪಾವತಿ ಮಾಡಬೇಕು.
ಬಹುತೇಕ ಎಲ್ಲಾ ರಿಚಾರ್ಜ್ ಗಳ ಬೆಲೆಯಲ್ಲಿ ಏರಿಕೆ ಮಾಡಲು ಏರ್ಟೆಲ್ ಕಂಪನಿ ನಿರ್ಧಾರವನ್ನ ಮಾಡಿದ್ದು ಈ ಹೊಸ ದರಗಳು ಇಂದಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಭಾರ್ತಿ ಏರ್ಟೆಲ್ ತನ್ನ ಮಾಹಿತಿಯಲ್ಲಿ ತಿಳಿಸಿದೆ ಎಂದು ಹೇಳಬಹುದು. ಏರ್ಟೆಲ್ ಕಂಪನಿಯ ಈ ಹೊಸ ನಿಯಮ ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಕಳೆದ ಕೆಲವು ಸಮಯಗಳ ಹಿಂದೆ ಜಿಯೋ ಕಂಪನಿ ಕೂಡ ತನ್ನ ದರಗಳ ಬೆಲೆಗಳನ್ನ ಏರಿಕೆ ಮಾಡಿತ್ತು, ಆದರೆ ಈಗ ಏರ್ಟೆಲ್ ದರಗಳನ್ನ ಏರಿಕೆ ಮಾಡಿರುವುದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಸ್ನೇಹಿತರೆ ನೀವು ಕೂಡ ಏರ್ಟೆಲ್ ಗ್ರಾಹಕರಾಗಿದ್ದರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಏರ್ಟೆಲ್ ಸಿಮ್ ಬಳಕೆದಾರರಿಗೆ ತಲುಪಿಸಿ.