ಕರೋನ ಮಹಾಮಾರಿ ದೇಶದಲ್ಲಿ ಎಷ್ಟು ಜನರ ಪ್ರಾಣವನ್ನ ಬಲಿ ತೆಗೆದುಕೊಂಡಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶದಲ್ಲಿ ಕೋಟಿಗೂ ಹೆಚ್ಚು ಜನರು ತಮ್ಮ ಪ್ರಾಣವನ್ನ ಕಳೆದುಕೊಂಡರು ಎಂದು ಹೇಳಬಹುದು. ಇನ್ನು ಇನ್ನು ಕರೋನ ಅನ್ನುವ ಮಾಹಾಮಾರಿ ಸೋಂಕು ಚೀನಾ ದೇಶದ ಮಾರುಕಟ್ಟೆಯಿಂದ ಇಡೀ ಭೂಮಿಗೆ ಹರಡಿತು ಮತ್ತು ಈಗ ಈ ವೈರಸ್ ಹಲವು ರೂಪಾಂತರವನ್ನ ಪಡೆದುಕೊಂಡಿದ್ದು ಈಗಲೂ ಕೂಡ ಜನರು ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಈಗ ಕರೋನ ಮಹಾಮಾರಿಯ ಆತಂಕದ ನಡುವೆ ಚೀನಾ ದೇಶದಿಂದ ಇನ್ನೊಂದು ಶಾಕಿಂಗ್ ಸುದ್ದಿ ಜನರಿಗೆ ಬಂದಿದ್ದು ಇಡೀ ವಿಶ್ವವೇ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ ಎಂದು ಹೇಳಬಹುದು.
ಹಾಗಾದರೆ ಏನದು ಶಾಕಿಂಗ್ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಕೊರೊನಾದಿಂದ ಚೇತರಿಸಿಕೊಳ್ಳುವ ಮೊದಲೇ ಚೀನಾ ಮತ್ತೆ ಕಂಟಕವಾಗುವ ಸಾಧ್ಯತೆಯಿದೆ. ಚೀನೀ ಮಾರುಕಟ್ಟೆಯಲ್ಲಿ ಕನಿಷ್ಠ 18 ಅಪಾಯಕಾರಿ ವೈರಸ್‌ಗಳಿವೆ ಅನ್ನುವ ಮಾಹಿತಿ ಈಗ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಚೀನಾದ ಮಾರುಕಟ್ಟೆಯಲ್ಲಿ ಇರುವ ಸೋಂಕುಗಳು ಮತ್ತೊಂದಿಷ್ಟು ರೋಗ ಹರಡುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನ ಹೇಳಿದೆ.
ಸಂಶೋಧಕರು ಚೀನಾದ ಮಾರುಕಟ್ಟೆಯಲ್ಲಿ ಅಧ್ಯಯನವನ್ನ ಮಾಡಿದ್ದು ಚೀನಾದ ಜನರು ಚಿತ್ರವಿಚಿತ್ರ ಆಹಾರ ಸೇವನೆ ಮಾಡುತ್ತಾರೆ. ಚೀನಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರಾಣಿಗಳು ಮತ್ತು ಅವುಗಳ ಮಾಂಸದಲ್ಲಿ ವೈರಸ್ ಕಂಡು ಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಮಾನವ ಮತ್ತು ಪ್ರಾಣಿ ಪಕ್ಷಿಗಳಿಗೆ ಅಪಾಯವನ್ನ ಉಂಟುಮಾಡುವ ಅನೇಕ ಸೋಂಕುಗಳು ಮಾರುಕಟ್ಟೆಯಲ್ಲಿ ಇರುವುದಾಗಿ ಸಂಶೋಧಕರು ಹೇಳಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಸ್ತನಿಗಳ ಮಾಂಸದ ಅಧ್ಯಯನ ನಡೆದಿದೆ ಮತ್ತು ಅವುಗಳಲ್ಲಿ 71 ಬಗೆಯ ವೈರಸ್‌ಗಳು ಇರುವುದು ಕಂಡುಬಂದಿದೆ ಮತ್ತು ಇವುಗಳಲ್ಲಿ 18 ವೈರಸ್ ಸಾಕುಪ್ರಾಣಿಗಳು ಮತ್ತು ಮನುಷ್ಯರಿಗೆ ಅಪಾಯವನ್ನುಂಟು ಮಾಡುತ್ತವೆ ಎಂಬುದು ಗೊತ್ತಾಗಿದೆ.
ಸಿಡ್ನಿ ವಿಶ್ವವಿದ್ಯಾನಿಲಯದ ಲೇಖಕ ಎಡ್ವರ್ಡ್ ಹೋಮ್ಸ್ ದ್ವಿಮುಖ ವೈರಸ್ ಸಂಚಾರವಿದೆ ಎಂದಿದ್ದಾರೆ. ಮನುಷ್ಯನಿಂದ ಪ್ರಾಣಿ ಹಾಗೂ ಪ್ರಾಣಿಯಿಂದ ಮನುಷ್ಯನಿಗೆ ವೈರಸ್ ಸಂಚಾರವಾಗಿದೆ ಎಂದಿದ್ದಾರೆ ಮತ್ತು ಬೆಕ್ಕುಗಳಂತಹ ಮಾಂಸಾಹಾರಿ ಪ್ರಾಣಿಗಳಿಂದ ಹೆಚ್ಚು ವೈರಸ್ ಹರಡುತ್ತದೆ ಎಂದಿದ್ದಾರೆ. ಸ್ನೇಹಿತರೆ ಚೀನಾದ ಮಾರುಕಟ್ಟೆ ಮನುಕುಲಕ್ಕೆ ಕಂಟಕವಾಗುವ ಬಹುತೇಕ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎಂದು ಹೇಳಬಹುದು. ಸ್ನೇಹಿತರೆ ಚೀನಾದ ಈ ಮಾರುಕಟ್ಟೆ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.