ಬೆರಳಚ್ಚು ಅಂದರೆ Finger Print ಬಹುತೇಕ ಎಲ್ಲಾ ಜನರು ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಹೌದು ನಮ್ಮ ಹೆಚ್ಚಿನ ದಾಖಲೆಗಳಿಗೆ ನಮ್ಮ ಬೆರಳಚ್ಚನ್ನ ಪಡೆದುಕೊಳ್ಳಲಾಗುತ್ತದೆ ಎಂದು ಹೇಳಬಹುದು. ಇನ್ನು ನಾವು ಮೊಬೈಲ್ ಪಾಸ್ವರ್ಡ್ ಮತ್ತು ಹೆಚ್ಚಿನ ಕೆಲಸಗಳಿಗೆ ಬೆರಳಚ್ಚನ್ನ ಬಳಸುತ್ತೇವೆ ಎಂದು ಹೇಳಬಹುದು. ನಿಮಗೆಲ್ಲ ತಿಳಿದಿರುವ ಒಬ್ಬರ ಬೆರಳಚ್ಚು ಒಬ್ಬರಿಗೆ ಹೋಲಿಕೆ ಆಗುವುದಿಲ್ಲ ಮತ್ತು ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ Finger Print ಬೇರೆ ಆಗಿರುತ್ತದೆ. ಇನ್ನು ಕೆಳವರ ತಲೆಯಲ್ಲಿ ಇರುವ ಪ್ರಶ್ನೆ ಏನು ಅಂದರೆ ನಾವು ಸತ್ತ ನಂತರ ಕೆಲವು ಕಳ್ಳರು ನಮ್ಮ ದಾಖಲೆಯನ್ನ ಕದಿಯಲು ನಮ್ಮ ಬೆರಳಚ್ಚನ್ನ ಬಳಕೆ ಮಾಡಬಹುದಲ್ಲವೇ ಅನ್ನುವುದು ಆಗಿದೆ.
ಸ್ನೇಹಿತರೆ ನಿಮ್ಮ ಪ್ರಶ್ನೆಗೆ ಉತ್ತರವನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಸಿನಿಮಾಗಳಲ್ಲಿ ಓರ್ವ ವ್ಯಕ್ತಿ ಸತ್ತ ಬಳಿಕ ಖಳನಾಯಕ ಆ ವ್ಯಕ್ತಿಯ ಹೆಬ್ಬೆರಳಿನ ಗುರುತುಗಳನ್ನು ಆಸ್ತಿಯ ಕಾಗದದ ಮೇಲೆ ತೆಗೆದುಕೊಳ್ಳುವುದನ್ನು ನೀವು ಚಲನಚಿತ್ರಗಳಲ್ಲಿ ನೋಡಿರಬೇಕು, ಆದರೆ ನಿಜ ಜೀವನದಲ್ಲಿ ಇದು ಅಸಾಧ್ಯ. ಹೌದು ಸ್ನೇಹಿತರೆ ಒಬ್ಬ ವ್ಯಕ್ತಿಯ ಮರಣದ ನಂತರ ಅವನ ಬೆರಳಚ್ಚುಗಳು ಮೊದಲಿನಂತೆ ಇರುವುದಿಲ್ಲ, ಅವು ಬದಲಾಗುತ್ತವೆ. ವ್ಯಕ್ತಿಯ ಮರಣದ ತಕ್ಷಣ ಆತನ ದೇಹದಲ್ಲಿನ ವಿದ್ಯುತ್ ಶಕ್ತಿ ಮುಕ್ತಾಯವಾಗುತ್ತದೆ.
ದೇಹದ ಜೀವಕೋಶ ವ್ಯವಸ್ಥೆಯು ಆ ವಿದ್ಯುತ್ ಚಾರ್ಜ್ನೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಇನ್ನು ವ್ಯಕ್ತಿಯ ಫಿಂಗರ್‌ಪ್ರಿಂಟ್‌ಗಳು ಆತನ ಸಾವಿನ ಮೊದಲು ಸ್ಪಷ್ಟವಾಗಿರುತ್ತವೆ ಮತ್ತು ಅರ್ಥವಾಗುವಂತಹದ್ದಾಗಿರುತ್ತವೆ, ಆದರೆ ಅವು ಆತನ ಮರಣದ ನಂತರ ಬದಲಾಗುತ್ತವೆ ಮತ್ತು ಹೆಚ್ಚು ಮಸುಕಾಗುತ್ತವೆ ಹೆಚ್ಚಿನ ಪ್ರಮಾಣದಲ್ಲಿ ಅಸ್ಪಷ್ಟವಾಗುತ್ತವೆ ಮತ್ತು ಅವುಗಳ ತೀಕ್ಷ್ಣತೆ ಕಣ್ಮರೆಯಾಗುತ್ತದೆ.
ಇನ್ನು ಒಬ್ಬ ವ್ಯಕ್ತಿಯ ಮರಣದ ನಂತರ ಅವನ ದೇಹವು ಗಡುಸಾಗುವುದನ್ನು ನೀವು ನೋಡಿರಬಹುದು. ಈ ಸಮಯದಲ್ಲಿ ಅವನ ಬೆರಳುಗಳು ಇತರ ಅಂಗಗಳಂತೆ ಕಠಿಣವಾಗುತ್ತವೆ ಮತ್ತು ಇದರಿಂದಾಗಿ ಅವರ ಬೆರಳಚ್ಚು ತೆಗೆಯುವುದು ಸುಲಭವಾಗುವುದಿಲ್ಲ. ಇನ್ನು ಒಬ್ಬ ವ್ಯಕ್ತಿಯು ಮರಣ ಹೊಂದಿ ತುಂಬಾ ಹೊತ್ತಾಗಿದ್ದರೆ ಅಥವಾ ಮೃತ ದೇಹವು ಕೊಳೆತವಾಗಿದ್ದರೆ, ಅವನ ಬೆರಳಚ್ಚುಗಳನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರ. ಅಂತಹ ವ್ಯಕ್ತಿಯ ಬೆರಳಚ್ಚುಗಳನ್ನು ಆಧುನಿಕ ಪ್ರಯೋಗಾಲಯಗಳಲ್ಲಿ ವಿಧಿವಿಜ್ಞಾನ ತಜ್ಞರು (Fingerprint Scan) ಮಾತ್ರ ತೆಗೆದುಕೊಳ್ಳಬಹುದು. ಸ್ನೇಹಿತರೆ ಇದೊಂದು ಉಪಯುಕ್ತ ಮಾಹಿತಿಯಾಗಿದ್ದು ಇದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.