Ads By Google

ಜೂನ್ 1 ನೇ ತಾರೀಕಿನಿಂದ ಚಿನ್ನ ಕೊಳ್ಳುವವರಿಗೆ ಹೊಸ ನಿಯಮ ಜಾರಿ, ಕೇಂದ್ರದ ಆದೇಶ.

hallmarks for gold
Ads By Google

ಚಿನ್ನ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮಾನವ ಕೂಡ ಚಿನ್ನವನ್ನ ಇಷ್ಟಪಡುತ್ತಾನೆ ಎಂದು ಹೇಳಬಹುದು. ಇನ್ನು ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನ ಖರೀದಿ ಮಾಡಿದರೆ ಇನ್ನು ಕೆಲವು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಚಿನ್ನವನ್ನ ಖರೀದಿ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವು ಚಿನ್ನವನ್ನ ದೊಡ್ಡ ದೊಡ್ಡ ಮಳಿಗೆಗಳಿಗೆ ಹೋಗಿ ಖರೀದಿ ಮಾಡಿದರೆ ಇನ್ನು ಕೆಲವರು ಚಿನ್ನವನ್ನ ಸಣ್ಣಪುಟ್ಟ ಮಾರಾಟಗಾರರ ಬಳಿ ಖರೀದಿ ಮಾಡುತ್ತಾರೆ. ಇನ್ನು ಕೆಲವು ಚಿನ್ನ ಪರಿಶುದ್ಧ ಚಿನ್ನವಾದರೆ ಇನ್ನು ಕೆಲವು ಚಿನ್ನ ಅಷ್ಟೊಂದು ಶುದ್ಧವಾಗಿರುವುದಿಲ್ಲ ಎಂದು ಹೇಳಬಹುದು.

ಇನ್ನು ಈಗ ಚಿನ್ನವನ್ನ ಚಿನ್ನವನ್ನ ಖರೀದಿ ಮಾಡುವ ಅಥವಾ ಮಾರಾಟ ನಿಯಮಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಇದೆ ಜೂನ್ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದ್ದು ಪ್ರತಿಯೊಬ್ಬರೂ ಕೂಡ ಇದನ್ನ ತಿಳಿದುಕೊಳ್ಳುವುದು ಅತ್ಯಾವಶ್ಯಕ ಎಂದು ಹೇಳಬಹುದು. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಇದೆ ಜೂನ್ 1 ನೇ ತಾರೀಕಿನಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಲಾಗುವುದು ಕೇಂದ್ರ ಸರ್ಕಾರ ಆದೇಶವನ್ನ ಹೊರಡಿಸಿದೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2019 ರಲ್ಲೇ ಸ್ಪಷ್ಟನೆಯನ್ನ ಈಗ ದೇಶಾದ್ಯಂತ ಈ ನಿಯಮ ಜೂನ್ 1 ನೇ ತಾರೀಕಿನಿಂದ ಜಾರಿಗೆ ಬರಲಿದೆ. ಇನ್ನು ಹಾಲ್ ಮಾರ್ಕ್ ಇರುವ ಚಿನ್ನ ಪರಿಶುದ್ಧ ಚಿನ್ನವಾಗಿದ್ದು ಇದರ ಬೆಲೆ ಇತರೆ ಚಿನ್ನಗಳಿಂದ ಜಾಸ್ತಿ ಎಂದು ಹೇಳಬಹುದು. ಇನ್ನು ದೇಶದಲ್ಲಿ 40 ರಷ್ಟು ಚಿನ್ನಾಭರಣಗಳಲ್ಲಿ ಮಾತ್ರ ಹಾಲ್ ಮಾರ್ಕ್ ಇದ್ದು ಹೆಚ್ಚಿನ ಚಿನ್ನಗಳಲ್ಲಿ ಈ ಹಾಲ್ ಮಾರ್ಕ್ ಸಂಖ್ಯೆ ಇಲ್ಲದೆ ಇರುವುದು ಗಮನದಲ್ಲಿ ಬಂದಿದೆ. ಇನ್ನು ಹಾಲ್ ಇಲ್ಲದ ಚಿನ್ನಕ್ಕೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಕೂಡ ಸಾಲವನ್ನ ಕೂಡುವುದಿಲ್ಲ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ಗ್ರಾಹಕರು ಚಿನ್ನಾಭರಣವನ್ನ ಖರೀದಿ ಮಾಡುವ ಸಮಯದಲ್ಲಿ ಮೋಸ ಹೋಗ್ಬಾರ್ದು ಅನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹಾಲ್ ಮಾರ್ಕ್ಸ್ ಅನ್ನು ಕಡ್ಡಾಯ ಮಾಡಲು ತೀರ್ಮಾನ ಮಾಡಿದೆ. ಇನ್ನು ಗ್ರಾಹಕರಿಗೆ ಕೇಂದ್ರ ಸರ್ಕಾರ ಮಾಹಿತಿಯನ್ನ ನಿದ್ದು ಮುಂದಿನ ದಿನಗಳಲ್ಲಿ ಹಾಲ್ ಮಾರ್ಕ್ ಇಲ್ಲದ ಚಿನ್ನವನ್ನ ಖರೀದಿ ಮಾಡಬಾರದು ಎಂದು ಮಾಹಿತಿಯನ್ನ ಕೂಡ ನೀಡಿದೆ ಎಂದು ಹೇಳಬಹುದು. ಇನ್ನು ಹಾಲ್ ಮಾರ್ಕ್ ಕಡ್ಡಾಯ ಮಾಡಿರುವುದರಿಂದ ಇನ್ನುಮುಂದೆ ಗ್ರಾಹಕರಿಗೆ ಚಿನ್ನದ ಮಳಿಗೆಗಳಲ್ಲಿ ಪರಿಶುದ್ಧವಾದ ಚಿನ್ನ ಸಿಗಲಿದೆ ಎಂದು ಹೇಳಬಹುದು. ಜೂನ್ 1 ರಿಂದ ಆಭರಣ ವ್ಯಾಪಾರಿಗಳಿಗೆ ಕೇವಲ 14, 18 ಮತ್ತು 22 ಕ್ಯಾರೆಟ್ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ. ಸ್ನೇಹಿತರೆ ಹಾಲ್ ಮಾರ್ಕ್ ಕಡ್ಡಾಯ ಮಾಡಿರುವುದಾರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field