ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ನಂತರ ದೇಶದಲ್ಲಿ ಎಷ್ಟು ಸಮಸ್ಯೆ ಉಂಟಾಗಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಅದೆಷ್ಟೋ ಜನರು ಕರೋನ ಮಹಾಮಾರಿಯ ಕಾರಣ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದ ಹಲವು ರಾಜ್ಯಗಳನ್ನ ಲಾಕ್ ಡೌನ್ ಮಾಡಲಾಗಿದ್ದು ಜನರು ಮನೆಯಲ್ಲಿಯೇ ಇರುವ ಕಾರಣ ಕೆಲವರಿಗೆ ಊಟಕ್ಕೆ ಕೂಡ ಬಹಳ ಕಷ್ಟವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಅದೆಷ್ಟೋ ಜನರು ಕರೋನ ಮಹಾಮಾರಿಯ ಕಾರಣ ತಮ್ಮ ಕೆಲಸವನ್ನ ಕಳೆದುಕೊಂಡಿದ್ದು ಕರೋನ ಬಡವರನ್ನ ಇನ್ನು ಬಡವರನ್ನಾಗಿ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಕರ್ನಾಟಕದಲ್ಲಿ ಕೂಡ ಸದ್ಯ ಕರೋನ ಲಾಕ್ ಡೌನ್ ಮಾಡಲಾಗಿದ್ದು ಜನರು ಬಹಳ ಕಷ್ಟದಲ್ಲಿ ಮುಳುಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕರೋನ ಮಹಾಮಾರಿಯ ಕಾರಣ ನೊಂದ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ನಮ್ಮ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ನಿಮಗೆ ಗೊತ್ತಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ರಾಜ್ಯದಲ್ಲಿ ಕಾರ್ಮಿಕ ಮಾಡಿಸಿಕೊಂಡವರಿಗೆ ಬಂಪರ್ ಗುಡ್ ನ್ಯೂಸ್ ಬಂದಿದ್ದು ಅವರಿಗೆ ದೊಡ್ಡ ಪ್ರಮಾಣದ ಕರೋನ ಪರಿಹಾರ ಹಣ ಬಿಡುಗಡೆಯಾಗಿದೆ ಎಂದು ಹೇಳಬಹುದು. ಹಾಗಾದರೆ ಈ ಕಾರ್ಮಿಕ ಕಾರ್ಡ್ ಇದ್ದವರು ಈ ಕರೋನ ಪರಿಹಾರ ಹಣ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ನೋಂದಾಯಿತ ಕಟ್ಟಡ ಕಾರ್ಮಿಕ ಮತ್ತು ಇತರೆ ಕಾರ್ಮಿಕರಿಗೆ 3000 ರೂಪಾಯಿಗಳ ವಿಶೇಷ ಲಾಕ್ ಡೌನ್ ಪರಿಚಾರ ಧನವನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇನ್ನು ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾದ ನಂತರ ಅದೆಷ್ಟೋ ಬಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಹೇಳಬಹುದು ಮತ್ತು ಅವರಿಗೆ ಅನುಕೂಲ ಆಗಲಿ ಅನ್ನುವ ಉದ್ದೇಶದಿಂದ ರಾಜ್ಯದ ಮುಖ್ಯ ಮಂತ್ರಿಗಳು ಲಾಕ್ ಡೌನ್ ಪರಿಹಾರ ನಿದಿಯನ್ನ ಘೋಷಣೆ ಮಾಡಿದ್ದಾರೆ.
ಇನ್ನು ಸಂಕಷ್ಟಕ್ಕೆ ಒಳಗಾಗದ ಒಟ್ಟು 2498521 ನೋಂದಾಯಿತ ಎಲ್ಲಾ ಕಟ್ಟಡ ಕಾರ್ಮಿಕರಿಗೆ ತಲಾ 3000 ರೂಪಾಯಿಯಂತೆ ಒಟ್ಟು 749.55 ಕೋಟಿ ರೂಪಾಯಿಯನ್ನ ಬಿಡುಗಡೆ ಮಾಡಲಾಗಿದೆ ಮತ್ತು ಈ ಹಣ ನೇರವಾಗಿ ಕಾರ್ಮಿಕರ ಖಾತೆಗೆ ಜಮಾವಣೆ ಆಗಲಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಗೊಂಡ ಫಲಾನುಭವಿಗಳಿಗೆ ಮಾತ್ರ ಸಹಾಯಧನವನ್ನ ಪಾವತಿ ಮಾಡಲಾಗುತ್ತದೆ. ಸ್ನೇಹಿತರೆ ಈ ಮಾಹಿತಿಯನ್ನ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡಿರುವ ಎಲ್ಲರಿಗೂ ತಲುಪಿಸಿ.