ಸದ್ಯ ರಾಜ್ಯದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದೂ ಕೋಟಿಗೊಬ್ಬ 3 ಚಿತ್ರದ ವಿಷಯವೆಂದು ಹೇಳೆಬಹುದು. ಹೌದು ರಾಜ್ಯದಲ್ಲಿ ಕೋಟಿಗೊಬ್ಬ 3 ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದ್ದು ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ ಎಂದು ಹೇಳಬಹುದು. ಕೋಟಿಗೊಬ್ಬ 3 ಚಿತ್ರ ನಿಮಗೆಲ್ಲ ತಿಳಿದಿರುವ ಮೊನ್ನೆ ಗುರುವಾರ ರಾಜ್ಯಾದ್ಯಂತ ಬಿಡುಗಡೆ ಆಗಬೇಕಾಗಿತ್ತು, ಆದರೆ ವಿತರಣೆ ಹಕ್ಕು ಸಿಗದ ಕಾರಣ ಮೊನ್ನೆ ಬಿಡುಗಡೆಯಾಗಬೇಕಾಗಿದ್ದ ಸಿನಿಮಾ ನಿನ್ನೆ ಬಿಡುಗಡೆಯಾಯಿತು ಎಂದು ಹೇಳಬಹುದು. ಚಿತ್ರ ಒಂದುದಿನ ತಡವಾಗಿ ಬಿಡುಗಡೆಯಾಗಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ನಟ ಸುದೀಪ್ ಅವರ ಮನವಿ ಮಾಡಿಕೊಂಡ ಕಾರಣ ಅಭಿಮಾನಿಗಳ ಕೋಪ ಸ್ವಲ್ಪ ತಣ್ಣಗಾಯಿತು ಎಂದು ಹೇಳಬಹುದು.
ಸ್ನೇಹಿತರೆ ಕೋಟಿಗೊಬ್ಬ 3 ಚಿತ್ರ ಒಂದುದಿನ ತಡವಾಗಿ ಬಿಡುಗಡೆಯಾದ ಕಾರಣ ನಿರ್ಮಾಪಕರಿಗೆ ಆದ ನಷ್ಟವನ್ನ ಕೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಸ್ನೇಹಿತರೆ ಗುರುವಾರ ಕೋಟಿಗೊಬ್ಬ 3 ಚಿತ್ರ ರದ್ದಾಗಿದ್ದಕ್ಕೆ ಆದ ನಷ್ಟ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿತ್ರ ರದ್ದಾಗಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಕೆಲವು ವಿತರಕರು ಮಾಡಿದ ಮೋಸದ ಕಾರಣ ಕೋಟಿಗೊಬ್ಬ 3 ಒಂದುದಿನ ತಡವಾಗಿ ಬಿಡುಗಡೆಯಾಗಬೇಕಾಯಿತು ಮತ್ತು ಇದರಿಂದ ನಿರ್ಮಾಪಕರಿಗೆ ಕೋಟಿ ಕೋಟಿ ರೂಪಾಯಿ ನಷ್ಟವಾಯಿತು.
ಸ್ನೇಹಿತರೆ ಕೋಟಿಗೊಬ್ಬ 3 ಚಿತ್ರ ಒಂದುದಿನ ರದ್ದಾದ ಕಾರಣ ಚಿತ್ರದ ನಿರ್ಮಾಪಕರಾದ ಸೂರಪ್ಪ ಬಾಬು ಅವರಿಗೆ ಸುಮಾರು 8 ರಿಂದ 10 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಇಂಥ ಪರಿಸ್ಥಿತಿ ಎದುರಾಗಲು ಕಾರಣರಾದ ವಿತರಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ. ಕೆಲವು ವಿತರಕರು ನಮಗೆ ಮೋಸ ಮಾಡಿದ್ದು ಅದರಿಂದ ಚಿತ್ರ ಒಂದುದಿನ ತಡವಾಗಿ ಬಿಡುಗಡೆಯಾಯಿತು ಮತ್ತು ಇದರಿಂದ ನಮಗೆ 8 ರಿಂದ 10 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸೂರಪ್ಪ ಬಾಬು ಅವರು ಆರೋಪ ಮಾಡಿದ್ದು ಅವರ ವಿರುದ್ಧ ಮೊಕದ್ದಮೆಯನ್ನ ದಾಖಲು ಮಾಡಿದ್ದಾರೆ.
ಇವರ ಈ ತಪ್ಪಿನಿಂದ ನಾವು ಒಂದು ದಿನದ ನಂತರ ಸಾಕಷ್ಟು ಕಷ್ಟದಲ್ಲಿ ಬಿಡುಗಡೆ ಮಾಡಬೇಕಾಯಿತು. ಹಾಗಾಗಿ ಈ ಮೇಲೆ ತಿಳಿಸಿದ ವಿತರಕರ ತಪ್ಪಿನಿಂದ ನಮ್ಮ ಸಂಸ್ಥೆಗೆ ಸರಿ ಸುಮಾರು 8ರಿಂದ 10 ಕೋಟಿ ನಷ್ಟವಾಗಿದೆ ಹಾಗೂ ನಮ್ಮ ಸಂಸ್ಥೆಗೂ ಈ ವಿತರಕರಿಗೂ ಆದ ಕರಾರಿನ ಪ್ರಕಾರ ಹಣ ನೀಡದೆ ನಮಗೆ ವಂಚನೆ ಎಸಗಿದ್ದು ನಮಗೆ ಬಹಳಷ್ಟು ಆರ್ಥಿಕ ನಷ್ಟ ಉಂಟು ಮಾಡಿರುತ್ತಾರೆ. ನನ್ನ ಮತ್ತು ನಮ್ಮ ನಾಯಕ ನಟರಿಗೆ ಅಪಖ್ಯಾತಿ ತರಲು ಸಂಚು ಮಾಡಿರುತ್ತಾರೆ. ಅದಕ್ಕಾಗಿ ಮಾನನಷ್ಟ ಮೊಕದ್ದಮೆಯೂ ಸೇರಿದಂತೆ ಯಾವ ರೀತಿಯ ಕಾನೂನು ಕ್ರಮ ಜರುಗಿಸಬೇಕೆಂದು ನಮ್ಮ ಕಾನೂನು ಸಲಹೆಗಾರರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆದಿದೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ.