ಐದು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಬರಲಿದೆ ಈ ಮಾರಕ ಖಾಯಿಲೆ, ಹೊಸ ಸಂಶೋಧನೆ, ನಿರ್ಲಕ್ಷ್ಯ ಮಾಡಬೇಡಿ.

ಒಬ್ಬ ಮನುಷ್ಯನಿಗೆ ಆರೋಗ್ಯ ಎಷ್ಟು ಅವಶ್ಯಕ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ಹೌದು ನಮ್ಮ ಆರೋಗ್ಯ ಸರಿಯಾಗಿ ಇದ್ದರೆ ಮಾತ್ರ ನಾವು ಪ್ರತಿನಿತ್ಯ ಏನಾದರು ಕೆಲಸವನ್ನ ಮಾಡಿಕೊಂಡು ಇರಲು ಸದ್ಯ ಎಂದು ಹೇಳಬಹುದು. ಇನ್ನು ಮಾನವನ ಆರೋಗ್ಯವನ್ನ ಕಾಪಾಡುವಲ್ಲಿ ನಿದ್ರೆ ಬಹಳ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ. ಹೌದು ನಿದ್ರೆ ಅನ್ನುವುದು ನಮ್ಮ ಆರೋಗ್ಯವನ್ನ ಕಾಪಾಡುವಲ್ಲಿ ಬಹಳ ಪಾತ್ರವನ್ನ ವಹಿಸುತ್ತದೆ ಮತ್ತು ನಿದ್ರೆ ಕಡಿಮೆಯಾದರೆ ನಮ್ಮ ದೈನಂದಿನ ಚಟುವಟಿಕೆಯ ಜೊತೆಗೆ ನಮ್ಮ ಆರೋಗ್ಯ ಕೂಡ ಹಾಳಾಗುತ್ತದೆ. ಇನ್ನು ಮಾನವ ಮಾಡುವ ನಿದ್ರೆಯ ಕುರಿತು ಈಗ ಶಾಕಿಂಗ್ ಸುದ್ದಿ ಬಂದಿದ್ದು ಒಬ್ಬ ಮಾನವ ಪ್ರತಿದಿನ 5 ಘಂಟೆಗಿಂತ ಕಡಿಮೆ ನಿದ್ರೆಯನ್ನ ಮಾಡಿದರೆ ಅವನಿಗೆ ಈ ಖಾಯಿಲೆ ಕಾಡುವ ಸಾಧ್ಯತೆ ಹೆಚ್ಚಿದೆ ಎಂದು ಅದ್ಯಾಯದಿಂದ ತಿಳಿದು ಬಂದಿದೆ.

ಹಾಗಾದರೆ ಕಡಿಮೆ ನಿದ್ರೆಯನ್ನ ಮಾಡುವುದರಿಂದ ಯಾವ ಖಾಯಿಲೆ ಬರುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ. ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ, ಹಾಗಾಗಿ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ ಎನ್ನುವುದು ಕೂಡ ಅಷ್ಟೇ ಅವಶ್ಯಕ. ಸ್ನೇಹಿತರೆ ಸಂಶೋಧಕರು ಹೇಳುವ ಪ್ರಕಾರ ವಯಸ್ಸಿನ ಮೇಲೆ ನಿದ್ರೆಯ ಸಮಯ ಅವಲಂಬಿತವಾಗಿರುತ್ತದೆ.

news of sleeping

ವೈದ್ಯರು ಹೇಳುವ ಪ್ರಲರ ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಬೇಕು. ಇನ್ನು ನವಜಾತ ಶಿಶುಗಳಿಗೆ ದಿನಕ್ಕೆ 18 ಗಂಟೆ ನಿದ್ರೆಯ ಅಗತ್ಯವಿರುತ್ತದೆ. ಒಂದು ವರ್ಷದ ಮಗುವಿಗೆ 14 ತಾಸು ಸಾಕಾಗುತ್ತದೆ ಮತ್ತು ವಯಸ್ಕರಿಗೆ ಕನಿಷ್ಟ 5 ತಾಸು ನಿದ್ರೆ ಬೇಕೇಬೇಕು. ಇನ್ನು ಈಗಿನ ಕಾಲದಲ್ಲಿ ಜನರು ಕೆಲಸದ ಒಟ್ಟಾದ ಮತ್ತು ಇತರೆ ಸಮಸ್ಯೆಯ ಕಾರಣ ಕಡಿಮೆ ಸಮಯ ನಿದ್ರೆಯನ್ನ ಮಾಡುತ್ತಾರೆ ಎಂದು ಹೇಳಬಹುದು. ಮೂಲಗಳಿಂದ ಮಾಹಿತಿಯ ಪ್ರಕಾರ ಈ ಭೂಮಿಯ ಮೇಲೆ ಶೇಕಡಾ 45 ರಷ್ಟು ಜನರು 5 ಘಂಟೆಗಿಂತ ಕಡಿಮೆ ನಿದ್ರೆ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಹೌದು ಕೆಲಸದ ಒತ್ತಡದಲ್ಲಿ ಬಹುತೇಕರು ರಾತ್ರಿ 5 ಗಂಟೆ ಸರಿಯಾಗಿ ನಿದ್ರೆ ಮಾಡುವುದಿಲ್ಲ ಮತ್ತು ಇದು ಅಪಾಯಕ್ಕೆ ಅಡಿಪಾಯವಾಗಬಹುದು.

ಇನ್ನು 5 ಗಂಟೆಗಳಿಗಿಂತಲೂ ಕಡಿಮೆ ನಿದ್ರೆ ಮಾಡುವುದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗುತ್ತದೆ ಮತ್ತು ಮುಂದೆ ಇದು ಹೃದಯ ಕಾಯಿಲೆಗೆ ಎಡೆಮಾಡಿಕೊಡಬಹುದು. ಅಧ್ಯಯನದ ಪ್ರಕಾರ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದೆ ಹೋದಲ್ಲಿ ಹೃದಯ ಕಾಯಿಲೆ ಕಾಡುವುದು ನಿಶ್ಚಿತ. ಇನ್ನು ಕಡಿಮೆ ನಿದ್ರೆಯ ಕಾರಣದಿಂದ ಹೈ ಬೀಪಿ ಹಾಗೂ ಡಯಾಬಿಟೀಸ್ ಖಾಯಿಲೆ ಬರುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ರಾತ್ರಿ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವವರು ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಕುಂಠಿತ ದೈಹಿಕ ಸಾಮರ್ಥ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆಂದು ಅಧ್ಯಯನದ ಮೂಲಕ ಧೃಢಪಟ್ಟಿದೆ. ಸ್ನೇಹಿತರೆ ಮಾನವನಿಗೆ ನಿದ್ರೆ ಬಹಳ ಅವಶ್ಯಕವಾದ ಕಾರಣ ನಿದ್ರೆಯನ್ನ ಯಾವುದೇ ಕಾರಣಕ್ಕೂ ಕಡಿಮೆ ಮಾಡಿಕೊಳ್ಳಬೇಡಿ.

Join Nadunudi News WhatsApp Group

news of sleeping

Join Nadunudi News WhatsApp Group