ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ವಾಹನ ಇದ್ದೆ ಇರುತ್ತದೆ ಎಂದು ಹೇಳಬಹುದು. ವಾಹನವಿಲ್ಲದ ಮನೆಯನ್ನ ಹುಡುಕುವುದು ಬಹಳ ಕಷ್ಟ. ಇನ್ನು ದೇಶದಲ್ಲಿ ಪ್ರತಿನಿತ್ಯ ವಾಹನಗಳ ಅಪಘಾತಗಳು ನಡೆಯುತ್ತಿದ್ದು ಹಲವು ಜನರು ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಹಲವು ಸಂಚಾರಿ ನಿಯಮಗಳು ಜಾರಿಯಲ್ಲಿ ಇದ್ದು ಜನರು ಅದನ್ನ ಸರಿಯಾಗಿ ಪಾಲನೆ ಮಾಡದೆ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಕಳೆದ ಎರಡು ವರ್ಷದಲ್ಲಿ ಸಂಚಾರಿ ನಿಯಮಗಳಲ್ಲಿ ಅನೇಕ ಬದಲಾವಣೆಯನ್ನ ಮಾಡಲಾಗಿದ್ದರೂ ಕೂಡ ಜನರು ಸಂಚಾರ ನಿಯಮವನ್ನ ಪಾಲನೆ ಮಾಡದೆ ದಂಡವನ್ನ ಕಟ್ಟುತ್ತಿದ್ದಾರೆ.
ಇನ್ನು ಈಗ ವಾಹನಗಳನ್ನ ಹೊಂದಿರುವ ಮತ್ತು ಪ್ರತಿನಿತ್ಯ ವಾಹನಗಳನ್ನ ಚಲಾಯಿಸುವ ಜನರಿಗೆ ದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು. ಸಂಚಾರಿ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನ ಮಾಡಲಾಗಿದ್ದು ಜನರು ಇನ್ನುಮುಂದೆ ಈ ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ 15 ಸಾವಿರ ರೂಪಾಯಿ ದಂಡದ ಜೊತೆಗೆ 6 ತಿಂಗಳಿ ಜೈಲು ಶಿಕ್ಷೆಯನ್ನ ಕೂಡ ಅನುಭವಿಸಬೇಕು. ಹಾಗಾದರೆ ನಿಯಮದಲ್ಲಿ ಆದ ದೊಡ್ಡ ಬದಲಾವಣೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ದೇಶದಲ್ಲಿ ಅದೆಷ್ಟೋ ಜನರು ಮದ್ಯವನ್ನ ಸೇವನೆ ಮಾಡಿಕೊಂಡು ಸಂಚಾರಿ ಪೋಲೀಸರ ಕೈಗೆ ಸಿಕ್ಕಿ ದಂಡವನ್ನ ಕಟ್ಟುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಾಗುತ್ತಿದೆ. ಇನ್ನು ಇದನ್ನ ಗಮನದಲ್ಲಿ ಇರಿಸಿಕೊಂಡ ಕೇಂದ್ರ ಸರ್ಕಾರ ಈಗ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದ್ದು ಜನರು ಇನ್ನುಮುಂದೆ ಮದ್ಯ ಸೇವನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ 15 ಸಾವಿರ ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸುವಂತೆ ಆದೇಶವನ್ನ ಹೊರಡಿಸಿದೆ.
ಈ ಹಿಂದೆ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದರೆ 2 ಸಾವಿರ ರೂಪಾಯಿ ದಂಡವನ್ನ ವಿಧಿಸಲಾಗುತ್ತಿದ್ದು, ಆದರೆ ಈಗ ಈ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನ ಮಾಡಲಾಗಿದ್ದು ಮದ್ಯ ಸೇವನೆ ಮಾಡಿ ಮೊದಲಬಾರಿ ಸಿಕ್ಕಿಬಿದ್ದರೆ 10 ಸಾವಿರ ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ಮತ್ತು ಮದ್ಯ ಸೇವನೆ ಮಾಡಿ ಎರಡನೆಯ ಬಾರಿ ಸಿಕ್ಕಿಬಿದ್ದರೆ 15 ಸಾವಿರ ದಂಡದ ಜೊತೆಗೆ 6 ತಿಂಗಳು ಜೈಲು ಶಿಕ್ಷೆಯನ್ನ ಅನುಭವಿಸಬೇಕು ಎಂದು ಕೇಂದ್ರ ದೊಡ್ಡ ಆದೇಶವನ್ನ ಹೊರಡಿಸಿದೆ. ಜನರು ಇನ್ನುಮುಂದೆ ಚಾಲನೆ ಮಾಡುವ ಸಮಯದಲ್ಲಿ ಈ ಸಂಚಾರಿ ನಿಯಮವನ್ನ ಗಮನದಲ್ಲಿ ಇರಿಸಿಕೊಂಡು ಚಾಲನೆ ಮಾಡಬೇಕು ಎಂದು ಕೇಂದ್ರ ಹೇಳಿದೆ. ಸ್ನೇಹಿತರೆ ಈ ಮಾಹಿತಿಯನ್ನ ವಾಹನ ಚಲಾಯಿಸುವ ಎಲ್ಲರಿಗೂ ತಲುಪಿಸಿ.