BMRCL Hike Namma Metro Ticket Price: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಾಕಷ್ಟು ಇರುವ ಕಾರಣ ಜನರು ಹೆಚ್ಚು ಮೆಟ್ರೋ (Metro) ಪ್ರಯಾಣವನ್ನು ಬಯಸುತ್ತಾರೆ. ಕಳೆದ ಕೆಲವು ತಿಂಗಳ ಹಿಂದೆ ನಮ್ಮ ಮೆಟ್ರೋ ಟಿಕೆಟ್ ಬೆಲೆ ಏರಿಕೆ ಆಗಿದ್ದು ಈಗ ಮತ್ತೆ ಮೆಟ್ರೊಲ್ ಪ್ರಯಾಣಿಕರ ಬೇಸರಕ್ಕೆ BMRCL ಕಾರಣವಾಗಿದೆ. ನಮ್ಮ ಮೆಟ್ರೊಲ್ ಟಿಕೆಟ್ ಬೆಲೆ ಮತ್ತೆ ಏರಿಕೆ ಮಾಡಲು ಈಗ BMRCL ಮುಂದಾಗಿದ್ದು ಇದು ನೇರವಾಗಿ ಮೆಟ್ರೋ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಹಾಗಾದರೆ ನಮ್ಮ ಮೆಟ್ರೋ ಟಿಕೆಟ್ ಬೆಲೆ ಮತ್ತೆ ಎಷ್ಟು ಏರಿಕೆ ಆಗಲಿದೆ ಮತ್ತು ಯಾವ ಏರಿಕೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
2025 ರಲ್ಲಿ ಈಗಾಗಲೇ ಏರಿಕೆಯಾಗಿದೆ ಮೆಟ್ರೋ ಟಿಕೆಟ್ ದರ
ಕಳೆದ ಫೆಬ್ರವರಿ ತಿಂಗಳಲ್ಲಿ ಮೆಟ್ರೋ ಟಿಕೆಟ್ ದರವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದ್ದು ಮತ್ತು ಮೆಟ್ರೋ ಟಿಕೆಟ್ ಬೆಲೆ ಏರಿಕೆ ಪ್ರಯಾಣಿಕರ ಬೇಸರಕ್ಕೆ ಕಾರಣವಾಗಿತ್ತು. ಇನ್ನು ಈಗ ಮುಂದಿನ ಮೂರೂ ತಿಂಗಳಲ್ಲಿ ಮತ್ತೆ ಮೆಟ್ರೋ ಟಿಕೆಟ್ ಬೆಲೆ ಏರಿಕೆಯಾಗಲಿದೆ. ಫೆಬ್ರವರಿ ತಿಂಗಳಲ್ಲಿ ಮತ್ತೆ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗಲಿದೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲಾಗುತ್ತೆ. ಅದೇ ರೀತಿಯಲ್ಲಿ 2026 ರ ಫೆಬ್ರವರಿ ತಿಂಗಳಲ್ಲಿ ಕೂಡ ಮತ್ತೆ ಮೆಟ್ರೋ ಟಿಕೆಟ್ ದರ ಏರಿಕೆ ಆಗಲಿದೆ.
2026 ಫೆಬ್ರವರಿಯಲ್ಲಿ ಏರಿಕೆ ಆಗಲಿದೆ ಮೆಟ್ರೋ ಟಿಕೆಟ್ ದರ
ಮಾಹಿತಿಯ ಪ್ರಕಾರ, 2026 ಫೆಬ್ರವರಿ ತಿಂಗಳಲ್ಲಿ ಮೆಟ್ರೋ ಟಿಕೆಟ್ ದರ ಶೇಕಡಾ 5 ರಷ್ಟು ಏರಿಕೆ ಆಗಲಿದೆ. ಪ್ರತಿ ವರ್ಷ ಮೆಟ್ರೊಲ್ ಟಿಕೆಟ್ ದರವನ್ನು ಶೇಕಡಾ 5 ರಷ್ಟು ಏರಿಕೆ ಮಾಡಲಾಗುತ್ತದೆ. ಅದೇ ರೀತಿಯಲ್ಲಿ 2026 ರ ಫೆಬ್ರವರಿ ತಿಂಗಳಲ್ಲಿ ಕೂಡ ಮೆಟ್ರೋ ಟಿಕೆಟ್ ಬೆಲೆಯಲ್ಲಿ ಶೇಕಡಾ 5 ರಷ್ಟು ಏರಿಕೆ ಆಗಲಿದೆ. ಬೆಲೆ ಏರಿಕೆ ಮಾಡಲು ಈಗ ನಿಗದಿ ಸಮಿತಿಯು ಶಿಫಾರಸ್ಸು ಮಾಡಿದೆ. ಬ್ರವರಿ 2025 ರಲ್ಲಿ ಶೇ.71.5 ರಷ್ಟು ಏರಿಕೆ ಮಾಡಿ ಗರಿಷ್ಠ ಬೆಲೆಯನ್ನು 90 ರೂಪಾಯಿಗೆ ಹೆಚ್ಚಿಸಿದ್ದರು. ಆದರೆ ಈಗ ವಾರ್ಷಿಕವಾಗಿ ಶೇ.5 ರಷ್ಟು ಹೆಚ್ಚಳ ಮಾಡುವುದರಿಂದ ಮೆಟ್ರೋ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ.
ಪ್ರತಿ ವರ್ಷ ಶೇಕಡಾ 5 ರಷ್ಟು ಏರಿಕೆ ಆಗಲಿದೆ ಮೆಟ್ರೋ ಟಿಕೆಟ್ ದರ
026ರ ಫೆಬ್ರವರಿಯಿಂದ ಪ್ರತಿ ವರ್ಷ ಶೇಕಡಾ 5ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮುಂದಾಗಿದೆ. ಈ ಹೆಚ್ಚಳ ಪ್ರತಿ ವರ್ಷ ಅನ್ವಯ ಆಗಲಿದೆ ಇವು ಮೆಟ್ರೋ ಪ್ರಯಾಣಿಕರ ಮೇಲೆ ನೇರವಾಗಿ ಪರಿಣಾಮ ಉಂಟುಮಾಡಲಿದೆ. ಪ್ರತಿನಿತ್ಯ ಕೆಲಸಕ್ಕೆ ಮತ್ತು ಕಾಲೇಜಿಗೆ ಹೋಗುವವರಿಗೆ ಇದು ದೊಡ್ಡ ಹೊರೆಯಾಗಲಿದೆ ಎಂದು ಪ್ರಯಾಣಿಕರ ಅಭಿಪ್ರಾಯವಾಗಿದೆ. BMRCL ಅಧಿಕಾರಿಗಳ ಪ್ರಕಾರ, ಮೆಟ್ರೋ ನಿರ್ವಹಣೆ ವೆಚ್ಚ, ಸಿಬ್ಬಂದಿ ವೇತನ, ವಿದ್ಯುತ್ ಶುಲ್ಕ ಮತ್ತು ಸಾಲ ಮರುಪಾವತಿ ಹೆಚ್ಚಾಗುತ್ತಿರುವುದೇ ಈ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ದೆಹಲಿ, ಮುಂಬೈ ಮತ್ತು ಚನ್ನೈ ನಗರಗಳ ಮೆಟ್ರೋ ಟಿಕೆಟ್ ದರಕ್ಕೆ ಹೋಲಿಕೆ ಮಾಡಿದರೆ ನಮ್ಮ ಬೆಂಗಳೂರು ಮೆಟ್ರೋ ಟಿಕೆಟ್ ದರ ಬಹಳ ದುಬಾರಿಯಾಗಿದೆ. ಪ್ರಯಾಣಿಕರು ಪ್ರತಿಭಟನೆ ಅಥವಾ ಸರ್ಕಾರಕ್ಕೆ ಮನವಿ ಸಲ್ಲಿಸುವುದರ ಮೂಲಕ ಈ ವಾರ್ಷಿಕ ಹೆಚ್ಚಳ ಆಗದಂತೆ ತಡೆಯಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

