Karnataka Ration Card Cancellation 2025: ಇತ್ತೀಚಿಗೆ ಕರ್ನಾಟಕ ಸರ್ಕಾರ ಹಲವು ಕುಟುಂಬಗಳ ರೇಷನ್ ಕಾರ್ಡುಗಳನ್ನು ರದ್ದು (BPL Raton Card Cancellation) ಮಾಡುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಕೆಲವು ಮಾಹಿತಿಗಳು ತಪ್ಪಾಗಿರುವ ಕಾರಣ ಕರ್ನಾಟಕ ಸರ್ಕಾರ ಹಲವು ಕುಟುಂಬಗಳ ರೇಷನ್ ಕಾರ್ಡುಗಳನ್ನು ರದ್ದು ಮಾಡುತ್ತಿದೆ. ಇತ್ತೀಚಿಗೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಲಕ್ಷಾಂತರ ಕುಟುಂಬಗಳ BPL ಮತ್ತು ಅಂತ್ಯೋದಯ ರೇಷನ್ ಕಾರ್ಡುಗಳನ್ನು ರದ್ದು ಮಾಡಿದೆ. ಹಾಗಾದರೆ ಆಹಾರ ಮತ್ತು ನಾಗರೀಕ ಇಲಾಖೆ BPL ಮತ್ತು ಅಂತ್ಯೋದಯ ರೇಷನ್ ಕಾರ್ಡುಗಳನ್ನು ರದ್ದು ಮಾಡುತ್ತಿರುವುದು ಏಕೆ ಮತ್ತು ಯಾವ ಮಾಹಿತಿ ಸರಿಯಾಗಿ ಇಲ್ಲದಿದ್ದರೆ ರೇಷನ್ ಕಾರ್ಡ್ ರದ್ದಾಗುತ್ತೆ ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
BPL ರೇಷನ್ ಕಾರ್ಡಿಗೆ ಈ ಕೆಲವು ಅರ್ಹತೆ ಕಡ್ಡಾಯ
* ವಾರ್ಷಿಕವಾಗಿ 1.2 ಲಕ್ಷ ರೂಪಾಯಿಯಿಗಿಂತ ಅಧಿಕ ಆದಾಯವನ್ನು ಯಾವ ಕುಟುಂಬದವರು ಹೊಂದಿರುತ್ತಾರೋ ಅವರ ಕುಟುಂಬದ BPL ರೇಷನ್ ಕಾರ್ಡುಗಳನ್ನು ರದ್ದು ಮಾಡಲಾಗುತ್ತೆ. BPL ರೇಷನ್ ಕಾರ್ಡ್ ಪಡೆದುಕೊಳ್ಳಲು ಕುಟುಂಬದ ವಾರ್ಷಿಕ ಆದಾಯ 1.2 ಲಕ್ಷ ರೂಪಾಯಿಯಿಂತ ಕಡಿಮೆ ಇರಬೇಕು.
* ಕುಟುಂಬದ ಸದಸ್ಯರಲ್ಲಿ ಯಾರಾದರೂ ಸರ್ಕಾರೀ ನೌಕರಿಯಲ್ಲಿ ಇದ್ದರೆ ಅಂತಹ ಕುಟುಂಬದವರು BPL ಕಾರ್ಡ್ ಪಡೆದುಕೊಳ್ಳಲು ಯಾವುದೇ ಅರ್ಹತೆ ಪಡೆದುಕೊಂಡಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಈ ಕಾರಣಗಳಿಂದ 2025 ವರ್ಷದಲ್ಲಿ ಸುಮಾರು 22 ಲಕ್ಷ BPL ಕಾರ್ಡುಗಳನ್ನು ರದ್ದು ಮಾಡಲಾಗಿದೆ.
* BPL ಕಾರ್ಡ್ ಇದ್ದವರು ಸರಿಯಾಗಿ BPL ಕಾರ್ಡುಗಳನ್ನು ಬಳಕೆ ಮಾಡದೆ ಇದ್ದರೂ ಕೂಡ ಅವರ BPL ಕಾರ್ಡುಗಳು ರದ್ದಾಗುತ್ತೆ. BPL ಕಾರ್ಡ್ ಹೊಂದಿರುವ ಕುಟುಂಬದವರು 6 ತಿಂಗಳ ವರೆಗೆ BPL ಕಾರ್ಡುಗಳನ್ನು ಬಳಕೆ ಮಾಡದೆ ಇದ್ದರೆ ಅಥವಾ BPL ಕಾರ್ಡುಗಳನ್ನು ನಿಷ್ಕ್ರಿಯ ಮಾಡಲಾಗುತ್ತೆ. ಈ ಕಾರಣಗಳಿಂದ ಪ್ರತಿ ತಿಂಗಳು ಪಡಿತರ ದಾನ್ಯ ಪಡೆದುಕೊಳ್ಳುವುದು ಬಹಳ ಅಗತ್ಯ.
* ಆದಾಯ ತೆರಿಗೆ ಪಾವತಿ ಮಾಡುವವರು BPL ಕಾರ್ಡ್ ಹೊಂದಿದ್ದರೆ ಅವರ BPL ಕಾರ್ಡ್ ರದ್ದು ಮಾಡಲಾಗುತ್ತೆ. ಆದಾಯ ತೆರಿಗೆ ಪಾವತಿ ಮಾಡುವವರು ಅಥವಾ GST ಪಾವತಿ ಮಾಡುವವರು BPL ಕಾರ್ಡ್ ಪಡೆದುಕೊಳ್ಳಲು ಯಾವುದೇ ರೀತಿಯ ಅರ್ಹತೆ ಹೊಂದಿರುವುದಿಲ್ಲ.
* ಸ್ವಂತ ಬಿಸಿನೆಸ್ ಅಥವಾ ಉದ್ಯಮ ಮಾಡುವವರು ಕೂಡ BPL ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಪಡೆದುಕೊಳ್ಳಲು ಯಾವುದೇ ಅರ್ಹತೆ ಪಡೆದುಕೊಂಡಿಲ್ಲ ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ.
* ಮನೆಯಲ್ಲಿ ವೈಟ್ ಬೋರ್ಡ್ ಕಾರ್ ಅಥವಾ ವಾಹನ ಇದ್ದರೆ ಅವರ ಕುಟುಂಬದ BPL ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈಗಾಗಲೇ ಈ ಕೆಲವು ಕಾರಣಗಳಿಂದ ಸುಮಾರು 22 ಲಕ್ಷಕ್ಕೂ ಅಧಿಕ BPL ರೇಷನ್ ಕಾರ್ಡುಗಳನ್ನು ರದ್ದುಮಾಡಲಾಗಿದೆ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ?
BPL ಕಾರ್ಡ್ ರದ್ದಾಗಿರುವ ಅಥವಾ ಇದೆ ಮೊದಲ ಬಾರಿಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರು ಅಗತ್ಯ ದಾಖಲೆಗಳ ಸಮೇತ ಹತ್ತಿರದ ಕರ್ನಾಟಕ ಒನ್ (Karnataka One) ಅಥವಾ ಗ್ರಾಮ ಒನ್ (Grama One) ಕೇಂದ್ರಕ್ಕೆ ಹೋಗಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಆಧಾರ್, ಆದಾಯ ಪ್ರಮಾಣಪತ್ರ ಸಲ್ಲಿಸಿ ಅರ್ಜಿ ಸಲ್ಲಿಸಬಹುದು. ಇದಾದ ನಂತರ ahara.kar.nic.in ವೆಬ್ಸೈಟ್ ನಲ್ಲಿ ನಿಮ್ಮ ಅರ್ಜಿ ಸ್ಥಿತಿ ಪರಿಶೀಲನೆ ಮಾಡಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

