PM Kisan Samman Scheme 21th Installement: ದೇಶದ ರೈತರು ಕಳೆದ ಕೆಲವು ದಿನಗಳಿಂದ PM ಕಿಸಾನ್ ಸಮ್ಮಾನ್ ಯೋಜನೆಯ 21 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಕೇಂದ್ರದ PM ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ವಾರ್ಷಿಕವಾಗಿ ರೈತರು 6000 ರೂಪಾಯಿಗಳ ಸಹಾಯಧನ ಪಡೆದುಕೊಳ್ಳುತ್ತಾರೆ, ಅದೇ ರೀತಿಯಲ್ಲಿ ಈಗಾಗಲೇ ರೈತರು 20 ಕಂತುಗಳ ಹಣ ಪಡೆದುಕೊಂಡಿದ್ದು 21 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಹಾಗಾದರೆ PM ಕಿಸಾನ್ ಸಮ್ಮಾನ್ ಯೋಜನೆಯ 21 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
PM ಕಿಸಾನ್ ಸಮ್ಮಾನ್ 21 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರು
ದೇಶದ ಕೋಟ್ಯಾಂತರ ರೈತರು PM ಕಿಸಾನ್ ಸಮ್ಮಾನ್ 21 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ಬಾರಿಯೂ ಕೂಡ ರೈಉತರ ಖಾತೆಗೆ ನೇರವಾಗಿ PM ಕಿಸಾನ್ ಸಮ್ಮಾನ್ 21 ನೇ ಕಂತಿನ ಹಣ ಜಮಾ ಆಗಲಿದೆ. PM ಕಿಸಾನ್ ಸಮ್ಮಾನ್ ಯೋಜನೆಯ 20 ನೇ ಕಂತಿನ ಹಣ ಕಳೆದ ಆಗಸ್ಟ್ ತಿಂಗಳಲ್ಲಿ ರೈತರ ಖಾತೆಗೆ ಜಮಾ ಆಗಿದ್ದು. ಕೆಲವು ಸರ್ಕಾರೀ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ನವೆಂಬರ್ ತಿಂಗಳ ಎರಡನೆಯ ವಾರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ 21 ನೇ ಕಂತಿನ ಹಣ ಜಮಾ ಆಗುವ ಸಾಧ್ಯತೆ ಇದೆ.
ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಈ ಬಾರಿಯ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬರುವುದು ಸ್ವಲ್ಪ ತಡವಾಗಬಹುದು ಎಂದು ಅಂದಾಜು ಮಾಡಲಾಗಿದೆ. ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯ ಹಣ ಜಮಾ ಆಗುವ ಬಗ್ಗೆ ಅಧಿಕೃತ ದಿನಾಂಕವನ್ನು ಇನ್ನು ಕೂಡ ಬಹಿರಂಗಪಡಿಸಿಲ್ಲ. ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು-ಕಾಶ್ಮೀರದ ರೈತರಿಗೆ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಸಹಾಯ ಬಂದಿದೆ ಎಂದು ಹೇಳಲಾಗುತ್ತಿದೆ.
ಯಾವ ರೈತರ ಖಾತೆಗೆ ಜಮಾ ಆಗಲಿದೆ ಕಿಸಾನ್ ಸಮ್ಮಾನ್ ಹಣ
ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿದವರ ಖಾತೆಗೆ ಮಾತ್ರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 21 ನೇ ಕಂತಿನ ಹಣ ಜಮಾ ಆಗಲಿದೆ. ಚಿಕ್ಕ ಮತ್ತು ಅತಿಚಿಕ್ಕ ರೈತರು ಮಾತ್ರ ಕೇಂದ್ರದಿಂದ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆದುಕೊಳ್ಳುತ್ತಾರೆ. ಕಿಸಾನ್ ಸಮ್ಮಾನ್ ಯೋಜನೆಯ ಪಟ್ಟಿಯಲ್ಲಿ ಹೆಸರು ಇರಬೇಕು ಮತ್ತು ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವುದು ಕಡ್ಡಾಯ. ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆದುಕೊಳ್ಳಲು KYC ಅಪ್ಡೇಟ್ ಮಾಡಿರುವುದು ಅತೀ ಅವಶ್ಯಕವಾಗಿದೆ.
PM ಕಿಸಾನ್ ಸಮ್ಮಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ವಿಧಾನ
pmkisan.gov.in ವೆಬ್‌ಸೈಟ್‌ಗೆ ಹೋಗಿ ಸುಲಭವಾಗಿ ಕಿಸಾನ್ ಸಮ್ಮಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು. ‘Beneficiary Status’ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆ ಅಥವಾ ಮೊಬೈಲ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಬೇಕಾಗುತ್ತದೆ. CSC ಸೇವೆ ಕೇಂದ್ರದಲ್ಲಿ ಕೂಡ ಕಿಸಾನ್ ಸಮ್ಮಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು. ಆಧಾರ್ ಸಂಖ್ಯೆ ಮೊಬೈಲ್ ಲಿಂಕ್ ಆಗಿದ್ದು OTP ನಮೂದಿಸಿದರೆ ಮಾತ್ರ ಸ್ಟೇಟಸ್ ಚೆಕ್ ಮಾಡಲು ಸದ್ಯ.
ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿರುವ ಉದ್ದೇಶ
ರೈತರು ವ್ಯವಸಾಯಕ್ಕೆ ಬೇಕಾಗುವ ರಸಗೊಬ್ಬರ, ಬೀಜ ಮತ್ತು ಔಷಧಿಗಳನ್ನು ಖರೀದಿಮಾಡಲು ಸಹಾಯಕವಾಗಲಿ ಅನ್ನುವ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈಗಾಗಲೇ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗಾಗಿ ಸಾಕಷ್ಟು ಕೋಟಿ ಹಣವನ್ನು ಖರ್ಚು ಮಾಡಿದೆ. ರೈತರು ಸ್ವಾವಲಂಭಿಯಾಗಿ ಜೀವನ ಮಾಡಲು ಈ ಯೋಜನೆ ಸಾಕಷ್ಟು ಸಹಕಾರಿಯಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

