Indian Railways Rules 2025: ಭಾರತದಲ್ಲಿ ಪ್ರತಿನಿತ್ಯ ಎರಡು ಕೋಟಿಗೂ ಅಧಿಕ ಪ್ರಯಾಣಿಕರು ರೈಲುಗಳಲ್ಲಿ ಸಂಚಾರ ಮಾಡುತ್ತಾರೆ. ದೂರ ಊರುಗಳಿಗೆ ಬಹಳ ಬೇಗ ತಲುಪಬಹುದು ಅನ್ನುವ ಕಾರಣಕ್ಕೆ ಹೆಚ್ಚಿನ ಪ್ರಯಾಣಿಕರು ರೈಲಿ ಪ್ರಯಾಣವನ್ನು ಇಷ್ಟಪಡುತ್ತಾರೆ. ಇತ್ತೀಚಿಗೆ ಭಾರತೀಯ ರೈಲ್ವೆ ರೈಲ್ವೆ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಿರುವುದನ್ನು ನಾವು ಗಮನಿಸಬಹುದು. ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆಗಾಗಿ ಅನೇಕ ಹೊಸ ಹೊಸ ನಿಯಮಗಳನ್ನ ಜಾರಿಗೆ ತರುತ್ತಿದೆ. ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಜನರು ಹೆಚ್ಚು ಹೆಚ್ಚು ರೈಲ್ವೆ ಪ್ರಯಾಣವನ್ನ ಆರಿಸಿಕೊಳ್ಳುತ್ತಾರೆ. ಇದೀಗ ರೈಲ್ವೆ ಇಲಾಖೆ ಟಿಕೆಟ್ ಬುಕಿಂಗ್ ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಯನ್ನ ಜಾರಿಗೆ ತಂದಿದೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ARP ( ಮುಂಗಡ ಬುಕಿಂಗ್ ಅವಧಿ ) ಎಂದರೇನು..?
ARP ಎಂದರೆ ಮುಂಗಡ ಬುಕಿಂಗ್ ಅವಧಿ, ಇದು ಪ್ರಯಾಣಿಕರು ಮುಂಚಿತವಾಗಿ ಟಿಕೆಟ್ಗಳನ್ನು ಬುಕ್ ಮಾಡಲು ಸಹಾಯ ಮಾಡುತ್ತದೆ. ಈ ಹಿಂದೆ 120 ದಿನಗಳ ಮುಂಚಿತವಾಗಿ ಟಿಕೆಟ್ ಅನ್ನು ಬುಕ್ ಮಾಡಬಹುದಾಗಿತ್ತು ಆದರೆ ಈಗ 60 ದಿನಗಳ ಮುಂಚಿತವಾಗಿ ಮಾತ್ರ ಬುಕಿಂಗ್ ಮಾಡಬಹುದಾಗಿದೆ. IRCTC ARP ತೆರೆಯುವ ಸಮಯ ಬೆಳಿಗ್ಗೆ 8:00 ರಿಂದ 10:00 ರವರೆಗೆ ಲಭ್ಯವಿರುತ್ತದೆ. ವಿದೇಶಿ ಪ್ರವಾಸಿಗರು 365 ದಿನಗಳ ಮುಂಚಿತವಾಗಿ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ.
ಮುಂಗಡ ಬುಕಿಂಗ್ ನಿಯಮದಲ್ಲಿ ಬದಲಾವಣೆ
ಹೌದು ರೈಲ್ವೆ ಇಲಾಖೆ ಈಗ ARP 120 ದಿನದಿಂದ 60 ದಿನಕ್ಕೆ ಕಡಿತಗೊಳಿಸಲಾಗಿದೆ. ಪ್ರಯಾಣದ ದಿನವನ್ನ ಬಿಟ್ಟು 60 ದಿನಗಳ ಮುಂಚಿತವಾಗಿ ಮಾತ್ರ ಬುಕಿಂಗ್ ಮಾಡಬಹುದಾಗಿದೆ. ಈ ಹಿಂದೆ 120 ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿ ರದ್ದುಗೊಳಿಸುತಿದ್ದರು ಇದರಿಂದ ಸೀಟ್ ಖಾಲಿಯಾಗಿ ಉಳಿಯುತ್ತಿತ್ತು. ಈ ಕಾರಣಕ್ಕಾಗಿ ರೈಲ್ವೆ ಇಲಾಖೆ ARP 120 ದಿನದಿಂದ 60 ದಿನಕ್ಕೆ ಕಡಿತಗೊಳಿಸಿದೆ. ಇದರಿಂದ ನಿಜವಾದ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.
Lower ಬರ್ತ್ ಹಂಚಿಕೆಯ ಹೊಸ ನಿಯಮ
ಹಿರಿಯ ನಾಗರಿಕರು ಅಂದರೆ 60 ವರ್ಷ ಮೇಲ್ಪಟ್ಟ ಪುರುಷರು ಹಾಗೆ 58 ವರ್ಷ ಮೇಲ್ಪಟ್ಟ ಮಹಿಳೆಯರು, ಗರ್ಭಿಣಿ ಮಹಿಳೆಯರು ಹಾಗೆ 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ Lower ಬರ್ತ್ ಅವಕಾಶವನ್ನು ನೀಡಲಾಗುತ್ತದೆ. ಬುಕಿಂಗ್ ಸಮಯದಲ್ಲಿ Lower ಬರ್ತ್ ಲಭ್ಯವಿಲ್ಲದಿದ್ದರೆ, ಪ್ರಯಾಣದ ಸಮಯದಲ್ಲಿ TTE ಅದನ್ನ ಈ ವರ್ಗದವರಿಗೆ ನೀಡುತ್ತಾರೆ. ದೇಶದ ಎಲ್ಲಾ ರೈಲುಗಳಲ್ಲಿ ಇನ್ನುಮುಂದೆ
ಇತ್ತೀಚಿಗೆ ಭಾರತೀಯ ರೈಲ್ವೆ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ಎಲ್ಲಾ ಬದಲಾವಣೆ ಮಾಡಿದ್ದು ಪ್ರಯಾಣಿಕರು ಸಹಕರಿಸಬೇಕಾಗಿದೆ. ರೈಲ್ವೆ ಪ್ರಯಾಣಿಕರು ರಾತ್ರಿ 10 ಗಂಟೆ ಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಮಾತ್ರ ನಿದ್ರಿಸಬಹುದಾಗಿದೆ, ದಿನದಲ್ಲಿ ಸಿಟ್ಟಿಂಗ್ ಮಾತ್ರ. ಹೆಚ್ಚಿನ ಮಾಹಿತಿಗಾಗಿ IRCTC ವೆಬ್ಸೈಟ್ ಅಥವಾ ರೈಲ್ವೆ helpline ಗೆ ಸಂಪರ್ಕಿಸಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

