ದೇಶದಲ್ಲಿ ಪ್ರತಿನಿತ್ಯ ಜನರು ಜನರು ಬಳಕೆ ಮಾಡುವ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು ಇದು ಜನರ ಶಾಕ್ ಗೆ ಕಾರಣವಾಗುತ್ತಿದೆ ಎಂದು ಹೇಳಬಹುದು. ಹೌದು ದಿನದಿಂದ ದಿನಕ್ಕೆ ಪ್ರತಿಯೊಂದು ವಸ್ತುವಿನ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಾಣುತ್ತಿದ್ದು ಇದು ಜನರ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮವನ್ನ ಬೀರಿದೆ. ಇನ್ನು ದೇಶದಲ್ಲಿ ಕಳೆದ ತಿಂಗಳು ಗ್ಯಾಸ್ ಬೆಲೆ ಏರಿಕೆ ಆಗಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ತಿಂಗಳ ಮೊದಲ ವಾರದಲ್ಲಿ ಗ್ಯಾಸ್ ಬೆಲೆ ಸಿಲಿಂಡರ್ ಬೆಲೆ ಏರಿಕೆ ಮತ್ತು ಇಳಿಕೆ ಆಗುತ್ತದೆ, ಆದರೆ ಕಳೆದ ಮೂರೂ ತಿಂಗಳಿಂದ ಗ್ಯಾಸ್ ಸಿಲಿಂಡರ್ ಪ್ರತಿ ತಿಂಗಳು ಏರಿಕೆ ಆಗುತ್ತಿದ್ದು ಇದು ಜನರ ಬೇಸರಕ್ಕೆ ಕಾರಣಾಗುತ್ತಿದೆ.
ಇನ್ನು ಈಗ ಜನರಿಗೆ ಶಾಕ್ ಆಗುವ ಇನ್ನೊಂದು ಸುದ್ದಿ ಬಂದಿದ್ದು ಮುಂದಿನ ವಾರ ಅಂದರೆ ನವೆಂಬರ್ ತಿಂಗಳ ಮೊದಲ ದಿನವೇ ಗ್ಯಾಸ್ ಬೆಲೆ ಆಘಾತ ಆಗುವ ರೀತಿಯ ಏರಿಕೆ ಆಗಲಿದೆ ಅನುವ ಸುದ್ದಿ ಈಗ ಬಂದಿದೆ. ಗ್ಯಾಸ್ ಬೆಲೆ ಐತಿಹಾಸಿಕವಾಗಿ ಏರಿಕೆ ಆಗಲಿದ್ದು ಇದು ಜನರ ಕೋಪಕ್ಕೆ ಕಾರಣವಾಗಲಿದೆ ಎಂದು ಹೇಳಬಹುದು. ಹಾಗಾದರೆ ಮುಂದಿನ ವಾರ ಗ್ಯಾಸ್ ಬೆಲೆಯಲ್ಲಿ ಎಷ್ಟು ಏರಿಕೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಬೆಲೆಯಲ್ಲಿ ಈ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಮುಂದಿನ ವಾರ ಅಡುಗೆ ಅನಿಲ ಸಿಲಿಂಡರ್ ಬೆಲೆ 100 ರೂಪಾಯಿ ಏರಿಕೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಕುರಿತು ಮಾಹಿತಿಯ ಬಗ್ಗೆ ಸ್ಪಷ್ಟನೆಯನ್ನ ನೀಡಿರುವ ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಸರಕಾರ ಅನುಮತಿ ನೀಡಿದರೆ ಮಾತ್ರ ನಿರ್ಣಯ ಜಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. ತೈಲ ಕ್ಷೇತ್ರದಲ್ಲಿ ನಷ್ಟವಾದ ಕಾರಣ ಮುಂದಿನ ತಿಂಗಳು ಗ್ಯಾಸ್ ಬೆಲೆಯಲ್ಲಿ ಬರೋಬ್ಬರಿ 100 ರೂಪಾಯಿ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಇನ್ನು ಗ್ರಹ ಬಳಕೆಯ ಗ್ಯಾಸ್ ಬೆಲೆಯಲ್ಲಿ 100 ರೂಪಾಯಿ ಏರಿಕೆ ಆಗುವ ಸಾಧ್ಯತೆ ಇದ್ದು ವಾಣಿಜ್ಯ ಉದ್ದೇಶದಿಂದ ಬಳಸುವ ಗ್ಯಾಸ್ ಬೆಲೆಯಲ್ಲಿ 150 ರೂಪಾಯಿ ಏರಿಕೆ ಆಗಲಿದೆ ಎಂದು ಅವರು ಹೇಳಿದ್ದಾರೆ.
ತೈಲ ಕಂಪನಿಗಳಿಗೆ ನಷ್ಟವಾಗಿದ್ದು ಅದರ ಹೊರೆ ನೇರವಾಗಿ ಜನರ ಮೇಲೆ ಬೀಳಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ನಷ್ಟ ತಗ್ಗಿಸಲು ತೈಲ ಕಂಪನಿಗಳು ಈ ನಿರ್ಧಾರ ಕೈಗೊಳ್ಳುತ್ತಿವೆ ಎನ್ನಲಾಗಿದೆ. ದರ ಹೆಚ್ಚಳವು ಸರ್ಕಾರದ ಅನುಮೋದನೆಯನ್ನು ಅವಲಂಬಿಸಿರುತ್ತದೆ ಎನ್ನಲಾಗಿದೆ. ಪ್ರತಿ ತಿಂಗಳ ಹಾಗೆ ಮುಂದಿನ ತಿಂಗಳು ಕೂಡ ಗ್ಯಾಸ್ ಬೆಲೆಯಲ್ಲಿ ಬಾರಿ ಪ್ರಮಾಣದ ಏರಿಕೆ ಆಗಲಿದ್ದು ಈ ಏರಿಕೆ ಜನರ ಆಕ್ರೋಶಕ್ಕೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು. ಸ್ನೇಹಿತರೆ ತೈಲ ಕಂಪನಿಗಳು ಗ್ಯಾಸ್ ಬೆಲೆ ಏರಿಕೆ ಮಾಡುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.