Night Shift: ನೈಟ್ ಶಿಫ್ಟ್ ಕೆಲಸ ಮಾಡುವ ಜನರಿಗೆ ಹೆಚ್ಚಾಗಿ ಬರುತ್ತಿದೆ ಈ ಖಾಯಿಲೆ, ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ.

ಪ್ರತಿದಿನ ರಾತ್ರಿ ನಿದ್ರೆ ಸರಿಯಾಗಿ ಮಾಡದಿದ್ದರೆ ಆಗುವ ತೊಂದರೆಗಳ ಬಗ್ಗೆ ತಿಳಿದುಕೊಳ್ಳಿ.

Night Shift Work Disadvantages: ಆರೋಗ್ಯವೇ ಭಾಗ್ಯ ಎಂಬ ಮಾತು ಹೆಚ್ಚಾಗಿ ಎಲ್ಲರಿಗೂ ಗೊತ್ತಿರುತ್ತದೆ. ಮನುಷ್ಯರಿಗೆ ಆರೋಗ್ಯ ಒಂದು ಸರಿ ಇದ್ರೆ ಎಲ್ಲಾನು ಸರಿ ಇದ್ದಂತೆ. ಮನುಷ್ಯ ಆರೋಗ್ಯವಾಗಿರಲು ಊಟ, ನಿದ್ದೆ, ವ್ಯಾಯಾಮ ಎಲ್ಲಾನು ಮುಖ್ಯ ಆಗಿರುತ್ತದೆ. ಈಗಿನ ಕಾಲದಲ್ಲಿ ದಿನವಿಡೀ ಕೆಲಸ ಮಾಡಿ ರಾತ್ರಿ ನಿದ್ರೆ ಮಾಡುವವರಿಗಿಂತ ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವವರೇ ಹೆಚ್ಚು.

ಆರೋಗ್ಯ ಉತ್ತಮವಾಗಿರಬೇಕೆಂದರೆ ನಿದ್ರೆ ಚೆನ್ನಾಗಿ ಮಾಡುವುದು ಬಹಳ ಮುಖ್ಯ. ರಾತ್ರಿಯ ಉತ್ತಮ ನಿದ್ರೆಯು ಮೆದುಳನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.  ನಿದ್ರೆಯು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದೆ. ನಿದ್ರೆಯು ದೇಹದ ಆಯಾಸವನ್ನು ಕಡಿಮೆ ಮಾಡುವುದಲ್ಲದೆ ದೇಹದ ಅನೇಕ ಭಾಗಗಳು ಆರೋಗ್ಯಕರ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

Night Shift Work Disadvantages
Image Credit: News-Medical

ನಿದ್ರಾಹೀನತೆಯಿಂದ ಆಗುವ ತೊಂದರೆಗಳು 
ಪ್ರತಿದಿನ ರಾತ್ರಿ ನಿದ್ರೆ ಸರಿಯಾಗಿ ಮಾಡದಿದ್ದರೆ  ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗುತ್ತದೆ. ನಿದ್ರಾಹೀನತೆ ಪರಿಣಾಮ ಬೀರುವ ಮೊದಲ ವಿಷಯವೆಂದರೆ ನಿಮ್ಮ ರಕ್ತದೊತ್ತಡ. ನೀವು ಕಡಿಮೆ ನಿದ್ರೆ ಮಾಡಿದಷ್ಟೂ ನಿಮ್ಮ ರಕ್ತದೊತ್ತಡ ಹೆಚ್ಚಾಗಬಹುದು. ಆರು ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವ ಜನರ ರಕ್ತದೊತ್ತಡವು ವೇಗವಾಗಿ ಹೆಚ್ಚಾಗುತ್ತದೆ. ನೀವು ಈಗಾಗಲೇ ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ, ಸಾಕಷ್ಟು ನಿದ್ರೆ ಪಡೆಯದಿರುವುದು ನಿಮ್ಮ ರಕ್ತದೊತ್ತಡವನ್ನು ಇನ್ನಷ್ಟು ಹದಗೆಡಿಸುತ್ತದೆ.

ಹೃದಯ ಬಡಿತಕ್ಕೆ ಸಂಬಂಧಿಸಿದ ರೋಗಗಳು ಬರುವ ಸಾಧ್ಯತೆ ಇರುತ್ತದೆ. ದೀರ್ಘ ಕಾಲದವರೆಗೆ ನಿದ್ರೆಯ ಕೊರತೆಯು ಹೃದಯ ಬಡಿತದ ಹೆಚ್ಚಳಕ್ಕೆ ಕಾರಣವಾಗಬಹುದು.  ಇದು ನಿಮ್ಮ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಅನಿಯಮಿತ ಹೃದಯ ಬಡಿತದಿಂದ ಬಳಲುವ ಸಾಧ್ಯತೆ ಹೆಚ್ಚು ನಿದ್ರೆಯ ಕೊರತೆಯು ಹೃದಯ ಬಡಿತಕ್ಕೆ ಸಂಬಂಧಿಸಿದೆ. ಹಾಗು ಹೃದಯಾಘಾತದ ಅಪಾಯ ಉಂಟು ಮಾಡುತ್ತದೆ. ದಿನಕ್ಕೆ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಿಗೆ ಹೃದಯಾಘಾತ ಬರುವ ಸಾಧ್ಯತೆ 20% ಹೆಚ್ಚು.

Night Shift Work Disadvantages
Image Credit: Tctmed
ಅಲ್ಲದೆ, ನಿದ್ರೆಯ ಕೊರತೆಯಿಂದಾಗಿ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಯಾವಾಗಲೂ ಹೆಚ್ಚಾಗುತ್ತದೆ, ಇದು ಹೃದಯಾಘಾತದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಎಷ್ಟೇ ಕೆಲಸದ ಒತ್ತಡ ಇದ್ದರು ನಮ್ಮ ಆರೋಗ್ಯವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ನಮ್ಮ ಕೈಯಲ್ಲಿರುತ್ತದೆ.  ಒಮ್ಮೆ ಆರೋಗ್ಯ ಹಾಳಾದರೆ ಸರಿ ಮಾಡಿಕೊಳ್ಳುವುದು ತುಂಬಾನೇ ಕಷ್ಟ ಒಂದು ಆರೋಗ್ಯ ಸಮಸ್ಯೆ ಅನ್ನೋದು ಹತ್ತಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ನಾವೆಲ್ಲರೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

Join Nadunudi News WhatsApp Group

Join Nadunudi News WhatsApp Group