Nikhil And Modi: ಪ್ರಧಾನಿ ಮೋದಿಯನ್ನ ಹೊಗಳಿದ ನಿಖಿಲ್, ಮೋದಿ ಅವರ ಮೇಲೆ ನನಗೆ ಅಪಾರ ಗೌರ ಇದೆ.

ನರೇಂದ್ರ ಮೋದಿಯವರ ಮೇಲೆ ನನಗೆ ಅಪಾರವಾದ ಗೌರವ ಇದೆ ಎಂದು ಹೇಳಿದ್ದಾರೆ ನಟ ನಿಖಿಲ್ ಕುಮಾರಸ್ವಾಮಿ.

Nikhil Kumaraswamy About Narendra Modi: ನಾಮಪತ್ರ ಸಲ್ಲಿಕೆ ಬಳಿಕ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ (NikhilKumaraswamy) ಅವರು ಸಂಚಾರ ಮಾಡಿ ಕ್ಷೇತ್ರದೆಲ್ಲೆಡೆ ಅಬ್ಬರದ ಪ್ರಚಾರ ಮಾಡಿದ್ದಾರೆ.

ಇದೆ ವೇಳೆ ಚನ್ನಪಟ್ಟಣಕ್ಕೆ ನರೇಂದ್ರ ಮೋದಿ (Narendra Modi) ಆಗಮನ ವಿಚಾರದ ಬಗ್ಗೆ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದಿದ್ದಾರೆ.

Nikhil Kumaraswamy About Narendra Modi
Image source: Jagran english

ಪ್ರಧಾನಿ ಮೋದಿಯವರ ಮೇಲೆ ನನಗೆ ಅಪಾರ ಗೌರವ ಇದೆಯೆಂದು ಹೇಳಿದ ನಿಖಿಲ್ ಕುಮಾರಸ್ವಾಮಿ
ಬಿಜೆಪಿ ಅವರು ಮೋದಿ ಹೆಸರು ಹೇಳಿಕೊಂಡು ಚುನಾವಣೆಯ ಪ್ರಚಾರ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಮೇಲೆ ನನಗೆ ಅಪಾರ ಗೌರವ ಇದೆ. ಆದರೆ ಈ ಬಾರಿ ರಾಯದಲ್ಲಿ ಬಿಜೆಪಿ ವಿರುದ್ದದ ಅಲೆ ಇದೆ. ಬಿಜೆಪಿಯ ಆಡಳಿತ ನೋಡಿ ಜನ ಬೇಸೆತ್ತು ಹೋಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮೋದಿ ಹೆಸರಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ಭವಿಷ್ಯ ನುಡಿದಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಬಿಜೆಪಿ ರೈತ ಸಂಘದವರು ಸೇರಿ ನನ್ನನ್ನು ಸೋಲಿಸಿದರು. ರಾಮನಗರದಲ್ಲೂ ನನ್ನನ್ನು ಸೋಲಿಸಲು ಅದೇ ರೀತಿ ತಂತ್ರಗಾರಿಕೆ ಮಾಡುತ್ತಿದ್ದಾರೆ. ಆದರೆ ರಾಮನಗರ ಜನತೆ ಅದಕ್ಕೆ ಮಣೆಹಾಕಿಲ್ಲ. ಕ್ಷೇತ್ರದ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Nikhil Kumaraswamy About Narendra Modi
Image Source: Public Tv

ಹೆಚ್ ಡಿ. ದೇವೇಗೌಡರ ಅರೋಗ್ಯ ಸರಿ ಇಲ್ಲ ಎಂದ ನಿಖಿಲ್ ಕುಮಾರಸ್ವಾಮಿ
ಪ್ರಚಾರಕ್ಕೆ ಮಾಜಿ ಪ್ರಧಾನಿ ಹೆಚ್ ಡಿ. ದೇವೇಗೌಡ ಆಗಮನ ಕುರಿತು ಮಾತನಾಡಿದ ನಿಖಿಲ್ ಕುಮಾರ ಸ್ವಾಮಿ ದೇವೇಗೌಡರ ಅರೋಗ್ಯ ಅಷ್ಟೊಂದು ಚೆನ್ನಾಗಿಲ್ಲ. ಅವರು ನಿತ್ಯ ರಾಮನಗರ ಪ್ರಚಾರದ ಬಗ್ಗೆ ನನ್ನಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದಿದ್ದಾರೆ.

Join Nadunudi News WhatsApp Group

Nikhil Kumaraswamy About Narendra Modi
Image Source: India News

Join Nadunudi News WhatsApp Group