Nikhil Kumaraswamy: ಚುನಾವಣೆ ನಡುವೆ ವೈರಲ್ ಆಗಿದೆ ನಿಖಿಲ್ ಕುಮಾರಸ್ವಾಮಿಯವರ ಒಟ್ಟು ಆಸ್ತಿ.
ನಟ ನಿಖಿಲ್ ಕುಮಾರಸ್ವಾಮಿಯವರ ಒಟ್ಟು ಆಸ್ತಿ ವಿವರದ ಮಾಹಿತಿ.
Nikhil Kumaraswamy Net Worth: ರಾಜ್ಯ ವಿಧಾನಸಭಾ ಚುನಾವಣೆ (Assembly Election) ಹತ್ತಿರವಾಗುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಬರದಿಂದ ಸಾಗುತ್ತಿದೆ. ಇನ್ನು ಈಗಾಗಲೇ ರಾಜ್ಯ ರಾಜಕೀಯದಲ್ಲಿ ಅನಿರೀಕ್ಷಿತ ತಿರುವುಗಳು ಕಾಣಿಸಿಕೊಂಡಿದೆ. ಇನ್ನು ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಕಾರ್ಯ ನಡೆಸುವುದಾಗಿ ಹೇಳಿಕೊಂಡಿದ್ದಾರೆ.
ಜೆಡಿಎಸ್ ಪಕ್ಷದಿಂದ ಸ್ಪರ್ದಿಸಲಿದ್ದಾರೆ ನಿಖಿಲ್ ಕುಮಾರಸ್ವಾಮಿ
ಇದೀಗ ಸ್ಯಾಂಡಲ್ ವುಡ್ ನ ನಟ ನಿಖಿಲ್ ಕುಮಾರ್ ಸ್ವಾಮಿ (Nikhil Kumaraswamy) ಜೆಡಿಎಸ್ (JDS) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕ ವಿಧಾನಸಬಾ ಚುನಾವಣಾ ಹಿನ್ನಲೆಯಲ್ಲಿ ಇಂದು ನಟ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಲು ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ನಟ ತಮ್ಮ ಆಸ್ತಿಯ ಮೌಲ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಬಳಿ ಇರುವ ಆಸ್ತಿಯ ಮೌಲ್ಯದ ಬಗ್ಗೆ ಮಾಹಿತಿ ತಿಳಿಯೋಣ.
ನಿಖಿಲ್ ಕುಮಾರಸ್ವಾಮಿ ಅವರ ಒಟ್ಟು ಆಸ್ತಿಯ ಮೌಲ್ಯ
ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯದ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಜೆಡಿಎಸ್ ಪಕ್ಷದಿಂದ ಸ್ಪರ್ದಿಸಲು ನಟ ಸಜ್ಜಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಬಳಿ ಚರಾಸ್ತಿ 46.81 ಕೋಟಿ, ಸ್ಥಿರಾಸ್ತಿ 35.5 ಕೋಟಿ, ಬಂಗಾರ 1.15 ಕೆಜಿ 16 ಕೆಜಿ ಬೆಳ್ಳಿ, ಸಾಲ 34.98 ಕೋಟಿ ರೂಪಾಯಿ ಇದೆ. ಹಾಗೆಯೆ ನಿಖಿಲ್ ಅವರ ಒಟ್ಟು ಆಸ್ತಿಯ ಮೌಲ್ಯ 75 ಕೋಟಿ ರೂಪಾಯಿ ಆಗಿದೆ.
ಇನ್ನು ನಿಖಿಲ್ ಬಳಿ ವಾಣಿಜ್ಯ ಕಟ್ಟಡಗಳು, ನಿವೇಶನಗಳಿವೆ. ನಿಖಿಲ್ ಅವರ ಬಳಿ ಸ್ವಂತ ಮನೆ ಇಲ್ಲ. ಪತ್ನಿ ರೇವತಿ ಅವರ ಬಳಿ ಒಂದು ಪ್ಲಾಟ್ ಇದೆ. ತಾಯಿ ಅನಿತಾ ಕುಮಾರಸ್ವಾಮಿ ಅವರ ಬಳಿ 4 ಕೋಟಿ ಆಸ್ತಿ ಇದೆ.
ಹಾಗೆಯೆ ನಿಖಿಲ್ ಅವರ ಬಳಿ ದುಬಾರಿ ಬೆಲೆಯ ರೇಂಜ್ ರೋವರ್ ಕಾರ್, ಲ್ಯಾಮ್ಬೋರ್ಗಿನಿ ಕಾರ್, ಇನ್ನೋವಾ ಕಾರ್ ಗಳಿವೆ. ಇನ್ನು ಪತ್ನಿಯ ಬಳಿ 645 ಗ್ರಾಂ ಚಿನ್ನ ಹಾಗೂ 33 ಕೆಜಿ ಬೆಳ್ಳಿ ಇದೆ. ಹಾಗೆಯೆ ಪತ್ನಿಯಾ ವಾರ್ಷಿಕ ಆದಾಯ 4.70 ಕೋಟಿ ಆಗಿದೆ.