Nikon Scholarship Application 2025: ನಿಮ್ಮ ಹತ್ತಿರ ಕ್ಯಾಮರಾ ಇದ್ದರೆ ಇದೀಗ ನಿಮಗೊಂದು ಉತ್ತಮ ಅವಕಾಶ ಒದಗಿಬಂದಿದೆ. ಹೌದು ಜಗತ್ತಿನ ಸೌಂದರ್ಯವನ್ನು ಚಿತ್ರಗಳಲ್ಲಿ ಸೆಳೆಯುವ ಸಮರ್ಥ ನಿಮ್ಮ ಹತ್ತಿರ ಇದ್ದರೆ ನೀವು ಇಂದೇ ಅರ್ಜಿ ಸಲ್ಲಿಸಿ. ಇದೀಗ ನಿಕಾನ್ ವಿದ್ಯಾರ್ಥಿ ವೇತನ ಜಾರಿಯಲ್ಲಿದ್ದು ಈ ಕಾರ್ಯಕ್ರಮ ಮುಖ್ಯವಾಗಿ ಛಾಯಾಗ್ರಹಣ ಸಂಬಂದಿತ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲವಾಗಿದೆ. ಈ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನ ನಾವೀಗ ಸಮಪೂರ್ಣವಾಗಿ ತಿಳಿದುಕೊಳ್ಳೋಣ.
ನಿಕಾನ್ ವಿದ್ಯಾರ್ಥಿ ವೇತನ
ನಿಕಾನ್ ವಿದ್ಯಾರ್ಥಿ ವೇತನ ಇದು ಆರ್ಥಿಕವಾಗಿ ಹಿಂದುಳಿದ ಭಾರತೀಯ ವಿದ್ಯಾರ್ಥಿ ಗಳಿಗೆ ಆರ್ಥಿಕ ಸಹಾಯ ಒದಗಿಸುವ ಗುರಿಯನ್ನು ಹೊಂದಿದೆ. ಹೌದು ನಿಕಾನ್ ವಿದ್ಯಾರ್ಥಿ ವೇತನ 12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಶಿಕ್ಷಣವನ್ನು ಮುಂದುವರೆಸಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಇದು ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಒಂದು ಉಪಕ್ರಮವಾಗಿದ್ದು ಛಾಯಾಗ್ರಹಣದಲ್ಲಿ ವೃತ್ತಿ ಜೀವನವನ್ನು ನಿರ್ಮಿಸಲು ಬಯಸುವ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ.
ನಿಕಾನ್ ವಿದ್ಯಾರ್ಥಿ ವೇತನ ಸಂಪೂರ್ಣ ಮಾಹಿತಿ
ನಿಕಾನ್ ಕಂಪನಿ ಈ ಸ್ಕಾಲರ್ ಶಿಪ್ ಅನ್ನು ತನ್ನ ಕಾರ್ಪೊರೇಟ್ ಸೋಶಿಯಲ್ ರೆಸ್ಪೋನ್ಸಿಬಿಲಿಟಿ ( CSR ) ಭಾಗವಾಗಿ ನೆಡೆಸುತ್ತಿದೆ. ಇದು 2025-26 ರಲ್ಲಿ ಭಾರತದಾದ್ಯಂತ ಛಾಯಾಚಿತ್ರ ಓದುತ್ತಿರುವ ಬಡ ವಿಧ್ಯಾರ್ಥಿಗಳನ್ನ ಗುರುತಿಸಿ ಅವರ ಶಿಕ್ಷಣ ಖರ್ಚುಗಳನ್ನ ಭರ್ತಿ ಮಾಡುತ್ತದೆ. ನಿಕಾನ್ ಇಂಡಿಯಾ ದೆಹಲಿ, ಮುಂಬೈ, ಕೋಲ್ಕತ್ತಾ, ಹಾಗೆ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ಹೊಂದಿದೆ. ನಿಕಾನ್ ನ ಈ ಉಪಕ್ರಮ ಭಾರತದಲ್ಲಿ ಛಾಯಾಚಿತ್ರ ಕ್ಷೇತ್ರದ ಬೆಳವಣಿಗೆಗೆ ಕೊಡುಗೆಯನ್ನು ನೀಡುತ್ತದೆ. ನಿಕಾನ್ ವಿದ್ಯಾರ್ಥಿ ವೇತನ ಡಿಪ್ಲೊಮಾ ಇನ್ ಫೋಟೋಗ್ರಾಫಿ ಅಥವಾ ಸರ್ಟಿಫಿಕೇಟ್ ಇನ್ ಡಿಜಿಟಲ್ ಇಮೇಜಿಂಗ್ ನಂತರ ಕೋರ್ಸ್ ಅನ್ನು ಒಳಗೊಂಡಿದೆ. ನಿಮ್ಮ ಅರ್ಹತೆಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಿ.
ನಿಕಾನ್ ವಿದ್ಯಾರ್ಥಿ ವೇತನದ ಅರ್ಹತೆ
* ಭಾರತದ ಪ್ರಜೆ ಆಗಿರಬೇಕು
* 12 ನೇ ತರಗತಿಯನ್ನು ಗುರುತಿಸಲ್ಪಟ್ಟ ಬೋರ್ಡ್ ನಿಂದ ಪಾಸ್ ಆಗಿರಬೇಕು
* ಕನಿಷ್ಠ 3 ತಿಂಗಳ ಅವಧಿಯ ಛಾಯಾಚಿತ್ರ ಸಂಬಂದಿತ ಕೋರ್ಸ್ ನಲ್ಲಿ ದಾಖಲಾಗಿರಬೇಕು.
* ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಆಗಿರಬೇಕು
* ಉದ್ಯೋಗಿಗಳ ಮಕ್ಕಳು ಅರ್ಹರಾಗಿರುದಿಲ್ಲ
ನಿಕಾನ್ ವಿದ್ಯಾರ್ಥಿ ವೇತನದ ಲಾಭ
ನಿಕಾನ್ ವಿದ್ಯಾರ್ಥಿ ವೇತನದ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 1 ಲಕ್ಷದ ವರೆಗೆ ಸ್ಕೋಲೊರ್ಶಿಪ್ ಅನ್ನು ನೀಡಲಾಗುತ್ತದೆ. ಇದು ಕೋರ್ಸ್ ಶುಲ್ಕ, ಉಪಕರಣಗಳು ( ಕ್ಯಾಮರಾ, ಲೆನ್ಸ್ ) ಹಾಗೆ ಶಿಕ್ಷಣ ಸಂಬಂಧಿತ ಖರ್ಚನ್ನು ಒಳಗೊಳ್ಳುತ್ತದೆ.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು https://www.buddy4study.com/ ವೆಬ್ ಸೈಟ್ ಗೆ ಭೇಟಿ ನೀಡಿ ರಿಜಿಸ್ಟರ್ ಮಾಡಿ, ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಯನ್ನು ( 12 ನೇ ಮಾರ್ಕ್ ಶೀಟ್, ಆಧಾಯ ಪ್ರಮಾಣ ಪತ್ರ, ಕೋರ್ಸ್ ದಾಖಲೆಗಳು, ಈದ್ ಪ್ರೊಫ್, ಬ್ಯಾಂಕ್ ಡೀಟೇಲ್ಸ್, ಮತ್ತು ಪಾಸ್ ಪೋರ್ಟ್ ಸೈಜ್ ಫೋಟೋ ) ಅಪ್ಲೋಡ್ ಮಾಡಿಕೊಳ್ಳಿ. 28 ನವೆಂಬರ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಅರ್ಜಿಗಳ ಪರಿಶೀಲನೆ ಹಾಗೆ ಅರ್ಹತೆಯ ತಪಾಸಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಇಮೇಲ್ ಮೂಲಕ ಸಂದೇಶ ಕಳುಹಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ nikon [email protected] ಗೆ ಸಂಪರ್ಕಿಸಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

