GST Collection: ರಾತ್ರೋರಾತ್ರಿ ದೇಶದಲ್ಲಿ ಜಾರಿಗೆ ಬಂತು ಹೊಸ GST ನಿಯಮ, ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೂ ಒಂದೇ ನಿಯಮ.
ಎಲ್ಲಾ ವ್ಯಾಪಾರ ವಹಿವಾಟಿಗೆ ಇನ್ನುಮುಂದೆ ಹೊಸ GST ನಿಯಮ.
Nirmala Sitharaman New GST Rule: ಸದ್ಯ ದೇಶದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಸಾಕಷ್ಟು ಹಣಕಾಸೇತರ ನಿಯಮವನ್ನು ಜಾರಿಗೊಳಿಸುತ್ತಿದ್ದಾರೆ. ಇತ್ತೀಚೆಗಂತೂ ನಿರ್ಮಲ ಸೀತಾರಾಮನ್ ಅವರು ಆದಾಯ ತೆರಿಗೆ ಸಂಬಂದಿತ ನಿಯಮದ ಜೊತೆಗೆ GST ಗೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ಪರಿಚಯಿಸಿದ್ದಾರೆ.
ಸದ್ಯ GST ಪಾವತಿ ಹೊಸ ನಿಯಮದ ಪ್ರಕಾರ ನಡೆಯುತ್ತಿದೆ ಎನ್ನಬಹುದು. ಸದ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಹೊಸ GST ನಿಯಮವನ್ನು ಪರಿಚಯಿಸಿದ್ದಾರೆ. ಇನ್ನುಮುಂದೆ ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಹೊಸ GST ನಿಯಮ ಅನ್ವಯವಾಗಲಿದೆ.
ರಾತ್ರೋರಾತ್ರಿ ದೇಶದಲ್ಲಿ ಜಾರಿಗೆ ಬಂತು ಹೊಸ GST ನಿಯಮ
ಗುಜರಾತ್ ನ ವ್ಯಾಪಿಯಲ್ಲಿ GST Facilitation ಕೇಂದ್ರವನ್ನು ಉದ್ಘಾಟಿಸಿರುವ ನಿರ್ಮಲ ಸೀತಾರಾಮನ್ ಅವರು ದೇಶದಲ್ಲಿ ಹೊಸ GST Rule ತಂದಿದ್ದಾರೆ. GST ಸುವಿಧಾ ಕೇಂದ್ರಗಳು ವ್ಯಾಪಾರ ಸಂಸ್ಥೆಗಳಿಗೆ GST Registration ಮಾಡುವಲ್ಲಿ ಎದುರಿಸುತ್ತಿರುವ ತೊಂದರೆಯನ್ನು ನಿವಾರಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗಲು ಹೊಸ GST ನಿಯಮವನ್ನು ದೇಶದಲ್ಲಿ ಪರಿಚಯಿಸಲು ಹಣಕಾಸು ಇಲಾಖೆ ನಿರ್ಧರಿಸಿದೆ.
GST ಸಂಗ್ರಹ ಹೆಚ್ಚಳ
GST ಸಂಗ್ರಹವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಎಲ್ಲಾ ವ್ಯಾಪಾರ ಸಂಸ್ಥೆಗಳನ್ನು ತನ್ನ ವ್ಯಾಪ್ತಿಗೆ ತರುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೇಶದ GST ಸಂಗ್ರಹವು ಪ್ರತಿ ತಿಂಗಳು ಹೆಚ್ಚುತ್ತಿದೆ. ಮೊದಲಿಗಿಂತ GST ಯಿಂದ ಹಲವು ವಸ್ತುಗಳ ಮೇಲಿನ ತೆರಿಗೆ ಹೊರೆ ಕಡಿಮೆಯಾಗಿದೆ. ಇನ್ನು ಮುಂದೆ ಮೊದಲಿನಂತೆ ದುಪ್ಪಟ್ಟು ತೆರಿಗೆ ಕಟ್ಟಬೇಕಿಲ್ಲ ಎಂಬುದು ವ್ಯಾಪಾರಿಗಳಿಗೆ ತಿಳಿದಿದೆ. ಇದರಿಂದಾಗಿ GST ಸಂಗ್ರಹ ಹೆಚ್ಚುತ್ತಿದೆ.
ಆದರೆ ಇನ್ನೂ ಅನೇಕ ಸಂಸ್ಥೆಗಳು ಅದರ ವ್ಯಾಪ್ತಿಯಿಂದ ಹೊರಗಿವೆ ಮತ್ತು ಔಪಚಾರಿಕ ಆರ್ಥಿಕತೆಯ ಭಾಗವಾಗಿಲ್ಲ. ಆರ್ಥಿಕತೆಯನ್ನು ಬಲಪಡಿಸಲು ಅವರು GST ವ್ಯಾಪ್ತಿಗೆ ಬರಬೇಕು. ನಾವು ತೆರಿಗೆಗಳಲ್ಲಿ ಸ್ವಲ್ಪ ಪಾಲನ್ನು ಮಾತ್ರ ಸಂಗ್ರಹಿಸುತ್ತೇವೆ ಮತ್ತು ಪ್ರತಿಯೊಬ್ಬರೂ ತೆರಿಗೆ ಜಾಲದಲ್ಲಿದ್ದಾಗ ಮಾತ್ರ ಆರ್ಥಿಕತೆಯ ಔಪಚಾರಿಕೀಕರಣವು ಸಂಭವಿಸುತ್ತದೆ ಎಂದು ನಿರ್ಮಲ ಸೀತಾರಾಮನ್ ಅವರು GST ಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.