Nita Ambani: ಶಾಲೆಯ ವಾರ್ಷಿಕ ಕಾರ್ಯಕ್ರಮಕ್ಕೆ ನೀತಾ ಅಂಬಾನಿ ಧರಿಸಿದ ಸೀರೆ ಮತ್ತು ಚಿನ್ನದ ಬೆಲೆ ಎಷ್ಟು ಗೊತ್ತಾ…? ದುಬಾರಿ ಸೀರೆ
ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ, ಧರಿಸಿದ ಸೀರೆ ಹಾಗು ಆಭರಣಗಳ ಬೆಲೆ ಭಾರಿ ದುಬಾರಿ
Nita Ambani Lifestyle: ಭಾರತೀಯ ಸಂಪ್ರದಾಯದಲ್ಲಿ ಸೀರೆ ತನ್ನದೇ ಆದ ಒಂದು ಮಹತ್ವವನ್ನು ಹೊಂದಿದೆ. ಹೆಣ್ಣಿಗೆ ಸೀರೆಯೇ ಅಂದ ಎಂದು ಕವಿಗಳು ಬಣ್ಣಿಸುತ್ತಾರೆ. ಅಷ್ಟೇ ಅಲ್ಲದೆ ಸಾಂಪ್ರದಾಯಕ ಉಡುಗೆಯಲ್ಲಿ ಸೀರೆ ಮೊದಲ ಸ್ಥಾನದಲ್ಲಿದೆ.
ಪ್ರತಿಯೊಂದು ಕಾರ್ಯಕ್ರಮಗಳಿಗೂ ಸೀರೆಯೇ ಆಕರ್ಷಕ ಆಗಿದ್ದು, ಅದರಂತೆ ನೀತಾ ಅಂಬಾನಿಯವರು (Nita Ambani) ಕಾರ್ಯಕ್ರಮ ಒಂದರಲ್ಲಿ ನೀಲಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ. ನೀತಾ ಅಂಬಾನಿಯವರು ಸಾಕಷ್ಟು ಸೀರೆಗಳ ಸಂಗ್ರಹವನ್ನು ಹೊಂದಿದ್ದಾರೆ ಮತ್ತು ಅವರ ಈ ಸೀರೆಯು ಎಂದಿನಂತೆ ಸುಂದರವಾಗಿ ಕಾಣುತಿತ್ತು. ಇವರು ಧರಿಸಿರಿ ಈ ದುಬಾರಿ ಸೀರೆ ಹಾಗು ಅದಕ್ಕೆ ಮ್ಯಾಚ್ ಆಗುವ ಆಭರಣಗಳ ಬಗ್ಗೆ ತಿಳಿಯೋಣ.
ದುಬಾರಿ ಸೀರೆಯಲ್ಲಿ ಮಿನುಗಿದ ನೀತಾ ಅಂಬಾನಿ
ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಅವರು ತನ್ನ ಮಗಳು ಇಶಾ ಅಂಬಾನಿ ಜೊತೆಗೆ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಡೇ ಸಮಾರಂಭದಲ್ಲಿ ಸಾಂಪ್ರದಾಯಿಕ ಎಥ್ನಿಕ್ ಉಡುಗೆಗಳನ್ನು ಧರಿಸಿದ್ದರು.
ಗೌರವಾನ್ವಿತ ಕಾರ್ಯಕ್ಕಾಗಿ ನೀತಾ ವೈಭವಯುತವಾದ ನೀಲಿ ರೇಷ್ಮೆ ಸೀರೆಯನ್ನು ಧರಿಸಿದ್ದು. ಅದರ ಅದ್ಭುತವಾದ ನೀಲಿ ತಳದ ಮೇಲೆ ಉಡುಪನ್ನು ಆವರಿಸುವ ಡ್ರಾಪ್ ಮಾದರಿಯಲ್ಲಿ ಚಿನ್ನದ ನೇಯ್ದ ಕಸೂತಿ ಇತ್ತು. ನೀತಾ ಅಂಬಾನಿಯವರ ಈಗಾಗಲೇ ತುಂಬಾ ಸೊಗಸಾದ ಸೀರೆ ಶೈಲಿಯ ಫೈಲ್ ಗಳಿಗೆ ಸೇರಿಸಲು ಇದು ಮತ್ತೊಂದು ಅದ್ಭುತ ನೋಟವಾಗಿದೆ. ಕೆಲವು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನೀತಾ ಅಂಬಾನಿ ಧರಿಸಿದ ಸೀರೆಯ ಬೆಲೆ ಸುಮಾರು 7 ಲಕ್ಷ ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ
ಬಹಳ ಸುಂದರ ಲುಕ್ ನಲ್ಲಿ ಉದ್ಯಮಿ ನೀತಾ ಅಂಬಾನಿ
ನೀತಾ ಅಂಬಾನಿ ಅವರು ತನ್ನ ಆಭರಣಗಳನ್ನು ಬಿಳಿ ಮತ್ತು ಬೆಳ್ಳಿಯ ಛಾಯೆಗಳಲ್ಲಿ ಇರಿಸಿದ್ದರು . ಪರ್ಲ್ ಡ್ರಾಪ್ ಜುಮ್ಕಾ ಕಿವಿಯೋಲೆಗಳನ್ನು ಧರಿಸಿದ್ದರು ಮತ್ತು ಅವರ ಉಡುಪನ್ನು ಲೇಯರ್ ಮಾಡುವ ಉದ್ದನೆಯ ನೆಕ್ಲೇಸ್ ಅನ್ನು ಧರಿಸಿದ್ದರು. ಅದರೊಂದಿಗೆ ಹೊಂದಾಣಿಕೆಯ ಮಾದರಿಯಲ್ಲಿ ಬಳೆ ಮತ್ತು ಉಂಗುರಗಳನ್ನು ಜೋಡಿಸಲಾಗಿದೆ. ಒಟ್ಟಾರೆಯಾಗಿ ನೀತಾ ಅಂಬಾನಿಯವರು ನೀಲಿ ಬಣ್ಣದ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು.